ಮಾತೃಭಾಷೆ ಕನ್ನಡದಲ್ಲಿಯೇ ಕಲಿತು ಏನು ಬೇಕಾದರೂ ಸಾಧನೆ ಮಾಡಬಹುದು: ಬಾಬುರಾವ್ ಸೇರಿಕಾರ್

ಕಲಬುರಗಿ:ಮೇ.19:ಮಾತೃ ಭಾಷೆಕನ್ನಡದಲ್ಲಿ ಶಿಕ್ಷಣ ಕಲಿಯುವದರಿಂದಜೀವನದಲ್ಲಿ ನಾವು ಏನನ್ನು ಸಾಧನೆ ಮಾಡಬಹುದು.ಕನ್ನಡದಲ್ಲಿಯೇ ಶಿಕ್ಷಣವನ್ನು ಕಲಿತು ಸಾಕಷ್ಟು ಮಹನಿಯರುಐಎಎಸ್, ಐಪಿಎಸ್, ಸೇರಿ ಹಲವಾರುಉನ್ನತ ಹುದ್ದೆಯನ್ನು ಅಲಂಕರಿಸಿರುವುದು ನಮ್ಮಕಣ್ಣುಮುಂದೆಯೇಇದೆ. ಕನ್ನಡ ಭಾಷೆಯ ಪ್ರಭುತ್ವ ಹೊಂದಿರಬೇಕುಎಂದು ಪಿಡಿಎಎಂಜಿನಿಯರಿಂಗ್‍ಕಾಲೇಜಿನಉಪನ್ಯಾಸಕರಾದ ಬಾಬುರಾವ ಸೇರಿಕಾರ ಹೇಳಿದರು.
ನಗರದ ಕೆವಿಪಿ ಪದವಿ ಪೂರ್ವಕಾಲೇಜಿನಲ್ಲಿ ಹಮ್ಮಿಕೊಂಡಿರುವಕನ್ನಡ ಸಾಹಿತ್ಯ ಪರಿಷತ್‍ಉತ್ತರ ವಲಯದಿಂದ ಹತ್ತನೆಯತರಗತಿಯಲ್ಲಿಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದಅವರುಕನ್ನಡದಲ್ಲಿ ಸಾಧನೆ ಮಾಡಿದ ಸಾಧಕರನ್ನು ಮೆಲುಕು ಹಾಕುತ್ತಾಅವರದಾರಿಯಲ್ಲಿತಾವು ಸಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಅಧ್ಯಕ್ಷ ಸ್ಥಾನವನ್ನು ಕೆವಿಪಿ ಕಾಲೇಜಿನ ಕಾರ್ಯದರ್ಶಿಗಳಾದ ಶ್ರೀ ಕಲ್ಯಾಣಕುಮಾರ್ ಶೀಲವಂತ ಮಾತನಾಡಿ ವಿದ್ಯೆ ಸಾಧಕನ ಸೊತ್ತು, ಹೊರತು ಸೋಮಾರಿಗಳ ಸೊತ್ತಲ್ಲ. ಮಕ್ಕಳು ಬಡತನದಲ್ಲಿಯೇ ಹೆಚ್ಚು ಸಾಧನೆ ಮಾಡಿದ ಅನೇಕ ಉದಾಹರಣೆಗಳು ನಮ್ಮಕಣ್ಣ ಮುಂದೆಯೇ ಇವೆ. ಆ ನಿಟ್ಟಿನಲ್ಲಿ¸ Áಧನೆಗೆ ಬಡತನಅಡ್ಡಿಯಿಲ್ಲ ಸಾಧಿಸುವಛಲ ಬೇಕು ಎಂದುಅವರು ತಿಳಿಸಿದರು.
ಪ್ರಾಸ್ತಾವಿಕವಾಗಿಉತ್ತರ ವಲಯದ ಕಸಾಪ ಅಧ್ಯಕ್ಷರಾದ ಶ್ರೀ ಪ್ರಭುಲಿಂಗ ಮೂಲಗೆ ಮಾತನಾಡಿ ನಮ್ಮಗುರಿಯನ್ನುತಲುಪಲು ಹೆಚ್ಚು ಶ್ರಮ ವಹಿಸಿ ಎಂದರು.ಕನ್ನಡ ಸಾಹಿತ್ಯ ಪರಿಷತ್ತುಉತ್ತರ ವಲಯಯಾವತ್ತು ವಿದ್ಯಾರ್ಥಿಗಳ ಪರಿಶ್ರಮಕ್ಕೆ ಪೂರಕವಾಗಿದೆ. ಸಮಾಜದಲ್ಲಿ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ, ಪ್ರೇರೇಪಿಸುವುದು ನಮ್ಮಆದ್ಯಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಪರಿಷತ್ತು ಪ್ರತಿವರ್ಷ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳಿಗೆ ಪ್ರೋತ್ಸಾಹಿಸುತ್ತಾ ಬಂದಿದೆ.ಮಕ್ಕಳು ಕಠಿಣ ಶ್ರಮವಹಿಸಿ ತಮ್ಮಗುರಿಯನ್ನು ಸಾಧಿಸಿ ವಿದ್ಯಾ ಸಂಸ್ಥೆಗೆ, ಪಾಲಕರಿಗೆ ಮತ್ತು ಸಮಾಜಕ್ಕೆ ಒಳ್ಳೆಯ ಹೆಸರುತರಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.
ಅತಿಥಿಗಳಾಗಿ ಶ್ರೀ ಶರಣಬಸಪ್ಪ ನರೋಣಿ. ಹಾಗೂ ಶ್ರೀ ಚಂದ್ರಕಾಂತ್ ಬಿರಾದಾರ್ ಮಾತನಾಡಿದರುಗುರೂಜಿಡಿಗ್ರಿಕಾಲೇಜಿನ ಪ್ರಾಚಾರ್ಯರು ಉಪಸ್ಥಿತಿ ಇದ್ದರು. ಕಾರ್ಯಕ್ರಮವನ್ನು ಕೆ ಬಸವರಾಜ್ ನಿರೂಪಿಸಿದರು.ಸಂಜೀವ್‍ಕುಮಾರ್ ಪಾಟೀಲ್ ಸ್ವಾಗತಿಸಿದರು.ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ.ಕನ್ನಡ ಭಾಷೆಯಲ್ಲಿಅತ್ಯನ್ನತ ಶ್ರೇಣಿಯಲ್ಲಿಉತ್ತೀರ್ಣರಾದ 40 ಜನ ವಿದ್ಯಾರ್ಥಿಗಳಿಗೆ ಸತ್ಕರಿಸಲಾಯಿತು.
ವೇದಿಕೆ ಮೇಲೆ ಚಂದ್ರಕಾಂತ ಬಿರಾದಾರ, ಶರಣಬಸಪ್ಪ ನರೋಣಿ, ಕಸಾಪ ಗೌರವಅಧ್ಯಕ್ಷರಾದ ಶಿವಯೋಗೆಪ್ಪಾ ಬಿರಾದಾರ, ಗೌರವ ಕಾರ್ಯದರ್ಶಿಗಳಾದ ಹಣಮಂತರಾಯ ದಿಂಡೂರೆ, ನಾಗೇಶ ತಿಮ್ಮಾಜಿ, ಕೋಶಾಧ್ಯಕ್ಷರಾದ ಶ್ರೀಕಾಂತ ಪಾಟೀಲ ದಿಕ್ಸಂಗಾ, ಸಂಘಟನಾ ಕಾರ್ಯದರ್ಶಿಗಳಾದ ಶಿವಲಿಂಗಪ್ಪಾ ಟೆಂಗಳಿ ಸಂಚಾಲಕರಾದ ನವಾಬ್‍ಖಾನ್ ಉಪಸ್ಥಿತರಿದ್ದರು.