
ಕೋಲಾರ.ಜ, ೨೦- ನಗರಸಭೆಯಲ್ಲಿ ಸೋಮವಾರ ಮಹಾಯೋಗಿ ಶ್ರೀ ಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು.
ನಗರಸಭೆಯ ಪೌರಾಯುಕ್ತ ನವೀನ್ ಚಂದ್ರ ಅವರು ಶ್ರೀ ಯೋಗಿ ವೇಮನ ಭಾವಚಿತ್ರಕ್ಕೆ ಪುಷ್ಪನಮನಗಳೊಂದಿಗೆ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ ಶ್ರೀ ಯೋಗಿ ವೇಮನ ಅವರು ೧೫ನೇ ಶತಮಾನದಲ್ಲಿ ತಮ್ಮ ವಚನಗಳ ಮೂಲಕ ಸಮಾಜಕ್ಕೆ ಸಮಾನತೆ, ಜಾತಿ ಪದ್ದತಿಯ ವಿರೋಧದಂತಹ ಸಂದೇಶಗಳನ್ನು ನೀಡಿದರು. ತಮ್ಮ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮನ ಪ್ರಭಾವದಿಂದ ಅಧ್ಯಾತ್ಮಿಕ ಮಾರ್ಗದಲ್ಲಿ ಸಾಗಿ, ಯೋಗಿಯಾಗಿ ಜೀವನದಲ್ಲಿ ಮುಕ್ತಿ ಪಡೆದರು ಎಂದರು. ಕಾರ್ಯಕ್ರಮದಲ್ಲಿ ನಗರಸಭೆಯ ಎಲ್ಲಾ ಆಡಳಿತ ಸಿಬ್ಬಂದಿಗಳು ಭಾಗವಹಿಸಿದ್ದರು.




























