ಬಸವರಾಜ ಬಾಗೇವಾಡಿಯವರಿಗೆ ಯೋಗ ರತ್ನ ಪ್ರತಿಭಾ ಪುರಸ್ಕಾರ

ವಿಜಯಪುರ, ಜ. 15: ರಾಷ್ಟ್ರೀಯ ಯುವ ದಿನಾಚರಣೆಯ ನಿಮಿತ್ಯ ಕವಿತ್ತ ಕರ್ಮಣಿ ಪೌಂಡೇಶನ, ನಾಗರಮನ್ನೊಳ್ಳಿ ಇವರ ವತಿಯಿಂದ ರಾಷ್ಟ್ರಿಯ ದಿನಾಚರಣೆಯ ಮತ್ತು ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ಜ.26 ರಂದು ಅಂತರಜಾಲದಲ್ಲಿ ನಡೆಯಲಿದೆ.
ಈ ವರ್ಷ ಕೊಡುಮಾಡುವ ಯೋಗ ರತ್ನ ಪ್ರತಿಭಾ ಪುರಸ್ಕಾರಕ್ಕೆ ಪಿ.ಎಂ. ಶ್ರೀ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆ ಉಕ್ಕಲಿ ಹಾಗೂ ಎಕ್ಸ್ ಲೆಂಟ ಕೋಚಿಂಗ್ ವಿಭಾಗದಲ್ಲಿ ಯೋಗ ತರಬೇತಿ ನೀಡುತ್ತಿರುವ ಬಸವರಾಜ ಬಾಗೇವಾಡಿ, ಉತ್ನಾಳ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಲಾಲಸಾಬ ಪೆಂಡಾರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.