Home ಜಿಲ್ಲೆ ರೋಗಮುಕ್ತ ಜೀವನ ಹೊಂದಲು ಯೋಗವು ಬಹಳ ಸಹಕಾರಿ

ರೋಗಮುಕ್ತ ಜೀವನ ಹೊಂದಲು ಯೋಗವು ಬಹಳ ಸಹಕಾರಿ

ಬೀದರ್, ಜೂ ೨೩ : ರೋಗಮುಕ್ತ ಜೀವನವನ್ನು ಹೊಂದಲು ಯೋಗವು ಬಹಳ ಸಹಕಾರಿಯಾಗಿದೆ ಕಾಟಾಚಾರಕ್ಕಾಗಿ ಯೋಗದಿನಾಚರಣೆಯನ್ನು ಆಚರಿಸಬಾರದು ಪ್ರತಿಯೊಬ್ಬರು ದಿನಂಪ್ರತಿ ಯೋಗವನ್ನು ಮಾಡಿ ಆರೋಗ್ಯದಿಂದಿರಬೇಕೆAದು ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಬೀದರ ತೋಟಗಾರಿಕೆ ಮಹಾವಿದ್ಯಾಲಯ ಡೀನ್ ಡಾ.ಎಸ್.ವಿ.ಪಾಟೀಲ ಕರೆ ನೀಡಿದರು.

 ಬೀದರ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಇತ್ತೀಚಿನ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ರಾಷ್ಟಿçÃಯ ಸೇವಾ ಯೋಜನೆ, ಬೀದರ ತೋಟಗಾರಿಕೆ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ೧೨ನೇ "ಅಂತರರಾಷ್ಟಿçÃಯ ಯೋಗ ದಿನಾಚರಣೆ" ಕಾರ್ಯಕ್ರಮಕ್ಕೆ ಗಿಡ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

 ಅಂತರಾಷ್ಟಿçÃಯ ಯೋಗ ದಿನವನ್ನು ವಿಶ್ವ ಯೋಗ ದಿನ ಎಂದೂ ಕರೆಯುತ್ತಾರೆ. ಮೊದಲ ಬಾರಿಗೆ ಇದನ್ನು ೨೧ ಜೂನ್ ೨೦೧೫ ರಂದು ಆಚರಿಸಲಾಯಿತು. ಈ ವರ್ಷದ ಘೋಷವಾಕ್ಯ "ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ" ಈ ಮೂಲಕ ಕಿರಿಯರಿಂದ ಹಿಡಿದು ಹಿರಿಯ ವಯಸ್ಸಿನ ಜನರು ಯೋಗವನ್ನು ತಮ್ಮ ದಿನಚರಿಯಾಗಿ ಮಾಡಿಸುವ ಪ್ರೇರಪಣೆ ಇದೆ ಎಂದು ಹೇಳಿದರು.  

 ರೋಗಮುಕ್ತ ಜೀವನವನ್ನು ಹೊಂದಲು ಯೋಗವು ಬಹಳ ಸಹಕಾರಿಯಾಗಿದೆ ಕಾಟಾಚಾರಕ್ಕಾಗಿ ಯೋಗದಿನಾಚರಣೆಯನ್ನು ಆಚರಿಸಬಾರದು ಪ್ರತಿಯೊಬ್ಬರು ಪ್ರತಿದಿನ ಯೋಗವನ್ನು ಮಾಡಿ ಆರೋಗ್ಯದಿಂದಿರಬೇಕೆAದು ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

 ಬೀದರ ಪತಂಜಲಿ ಯೋಗ ಸಮಿತಿ, ಯೋಗ ಶಿಕ್ಷಕರು ಗುರುನಾಥ ಮುಳಗೆ ಅವರು ಮಾತನಾಡಿ, ಅಂತರಾಷ್ಟಿçÃಯ ಯೋಗ ದಿನಾಚರಣೆಯ ಸಾಮಾನ್ಯ ನಿಯಮಾವಳಿ (ಪ್ರೋಟೋಕಾಲ್) ದನ್ವಯ ವಿವಿಧ ಯೋಗಾಸನ ಭಂಗಿಗಳಾದ ಗ್ರೀವಾ ಚಾಲನೆ (ಕುತ್ತಿಗೆ), ಸ್ಕಂದ ಜೀಂಬಾವ್, ಸ್ಕಂದ ಚಕ್ರ (ಭುಗಳನ್ನು ತಿರುಗಿಸುವುದು), ಕಟಿಶಕ್ತಿ ಸಂಚಾಲಯ (ಕಟಿ ಚಕ್ರಾಸನ), ಘುಟನಾ ಸಂಚಾಲನ (ಕುರ್ಚಿ ಆಸನ), ತಾಡಾಸನ, ವೃಕ್ಷಾಸನ, ಪಾದಹಸ್ತಾಸನ, ಅರ್ಧ ಚಕ್ರಾಸನ, ದಂಡಾಸನ, ಭದ್ರಾಸನ,  ವಜ್ರಾಸನ, ಅರ್ಧ ಉಷ್ಟಾçಸನ, ಶಶಾಂಕಾಸನ, ಉತ್ಥಾನ ಮಂಡೂಕಾಸನ, ಮರೀಜಾಸನ /ವಕ್ರಾಸನ, ಮಕರಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನಪಾದಾಸನ, ಅರ್ಧ ಹಲಾಸನ, ಪವನಮುಕ್ತಾಸನ, ಶವಾಸನ, ಕಪಾಲಭಾತಿ, ಅನುಲೋಮ-ವಿಲೋಮ ಪ್ರಾಣಾಯಾಮ, ಶೀತಲೀ ಪ್ರಾಣಾಯಾಮ, ಭ್ರಾಮರಿ ಪ್ರಾಣಾಯಾಮ, ಧ್ಯಾನ ಇತ್ಯಾದಿ ಆಸಾನ, ಪ್ರಾಣಾಯಾಮಗಳನ್ನು ಮಾಡಿಸಿ ಅವುಗಳಿಂದ ದೊರೆಯುವ ಲಾಭಗಳ ಮಾಹಿತಿ ತಿಳಿಸಿದರು.

 ಈ ಸಂದರ್ಭದಲ್ಲಿ ರಾಷ್ಟಿçÃಯ ಸೇವಾ ಯೋಜನೆಯ ಸಂಯೋಜಕರಾದ ಡಾ.ವಿಜಯಮಹಾಂತೇಶ, ಮಹಾವಿದ್ಯಾಲಯದ ಬೋಧಕ ಡಾ.ರಮೇಶ ನಾಯಕ್, ಬೊಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.