
ಕಲಬುರಗಿ:ಜೂ.21:ಇಂದಿನ ದಿನಮಾನಗಳಲ್ಲಿ ಬದಲಾಗುತ್ತಿರುವಜೀವನಶೈಲಿಯಿಂದಜನರುಅನಾರೋಗ್ಯಕ್ಕೆ ಬಲಿಯಾಗುತ್ತಿರುವುದುಆತಂಕಕಾರಿ ವಿಷಯವಾಗಿದ್ದುಸರ್ವೆ ಸಾಮಾನ್ಯಯೋಗಾಸನಒಂದುಉತ್ತಮಔಷಧಿಇದ್ದಂತೆ ದಿನನಿತ್ಯಯೋಗಾಸನ ಮಾಡುವುದರಿಂದ ಅನೇಕ ರೋಗಗಳು ಬರದಂತೆತಡೆಗಟ್ಟಬಹುದಲ್ಲದೆ ಬಂದಂತಹ ರೋಗಗಳು ನಿವಾರಿಸಬಹುದುಎಂದು ನಿವೃತ್ತಆರೋಗ್ಯ ಅಧಿಕಾರಿಗಳಾದ ಬಾಬುರಾವ ಪಾಟೀಲ ಚಿತ್ತಕೋಟೆ ಮಾತನಾಡಿದರು.
ಭಾರತದ ಸನಾತನಯೋಗ ಪದ್ದತಿ ಹಾಗೂ ಅದರ ಲಾಭಗಳ ಅರಿತುಇಂದುಇಡಿಜಗತ್ತೇ ನೋಡುವಂತೆ ಹಾಗೂಅನುಕರಣೆ ಮಾಡುವುದಕ್ಕೆ ನಮ್ಮದೇಶದ ಪ್ರಧಾನಮಂತ್ರಿಯವರ ಪ್ರಾಮಾಣಿಕ ಪ್ರಯತ್ನದ ಪ್ರತಿಫಲವೇ ಅಂತರರಾಷ್ಟ್ರೀಯಯೋಗದಿನಾಚರಣೆಎಂದುಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜೂನ 21ರಂದು ಬೆಳಿಗ್ಗೆ 7-0ಗಂಟೆಗೆ ದರಿಯಾಪೂರಜಿಡಿಎ ಲೇಔಟಿನದತ್ತಾತ್ರೆಯ ಪಾಟೀಲ ರೇವೂರಉದ್ಯಾನವನವದಲ್ಲಿ ನಿವೃತ್ತಆರಕ್ಷಕ ನಿರೀಕ್ಷಕರಾದರಾಮರಾವಕುಲಕರ್ಣಿಅವರ ಬೆಳಿಗ್ಗೆ ವಿಹಾರ ಗೆಳೆಯರ ಬಳಗದಲ್ಲಿ ಅನೇಕ ಆಸನಗಳ ಮಾಡುವುದರ ಮೂಲಕ ಅಂತರರಾಷ್ಟ್ರೀಯಯೋಗ ದಿನವನ್ನುಅರ್ಥಪೂರ್ಣವಾಗಿಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭೀಮಾಶಂಕರ ಅಂಕಲಗಿ, ಎಸ್.ಜಿ.ಬಿರಾದಾರ, ಸಾಯಿಬಣ್ಣ ನೀಲಪ್ಪಗೋಳ, ಮಲ್ಲಣ್ಣದೇಸಾಯಿ, ನಿಜಲಿಂಗಗುಗ್ಗರಿ, ಶಿವಕುಮಾರ ದೇಸಾಯಿ, ರಾಜಶೇಖರ ಸರ್ ಹಾಗೂ ಇತರರು ಉಪಸ್ಥಿತರಿದ್ದರು.