ಉತ್ತಮ ಆರೋಗ್ಯಕ್ಕೆ ಯೋಗ ಸಹಕಾರಿ

ಬಳ್ಳಾರಿ:ಜೂ,೨೧– ನಗರದ ಎಸ್ ಜಿ ಕಾಲೇಜು ಮೈದಾನದಲ್ಲಿ ಇಂದು ಬೆಳಿಗ್ಗೆ ೧೧ ನೇ ವಿಶ್ವ ಯೋಗ ದಿನಾಚರಣೆ ನಡೆಯಿತು.ಕಾರ್ಯಕ್ರಮಕ್ಕೆ ಮೇಯರ್ ಮುಲ್ಲಂಗಿ ನಂದೀಶ್ ಚಾಲನೆ ನೀಡಿದರು.

ಯೋಗ ಗುರುಗಳು ನೆರೆದ ನಗರದ ಜನತೆ, ವಿದ್ಯಾರ್ಥಿಗಳು, ಸರ್ಕಾರಿ ನೌಕರರಿಗೆ ಯೋಗ ಹೇಳಿಕೊಟ್ಟರು. ಯೋಗ ದಿನ ನಿತ್ಯ ಅಭ್ಯಾಸ ಮಾಡಿದರೆ ಉತ್ತಮ ಆರೋಗ್ಯಕ್ಕೆ ಸಹಕಾರಿ ಎಂದು ಉಒನ್ಯಾಸ ನೀಡಲಾಯ್ತು.

ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಡಿಸಿ ಪ್ರಶಾಂತ್ ಕುಮಾರ್ ಮಿಶ್ರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಯೋಗ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯ್ತು.

ಇದೇ ನಗರದ ಹಲವಡೆ, ತಾಲೂಕು ಕೇಂದ್ರಗಳಲ್ಲೂ ಯೋಗಾಭ್ಯಾಸದ ಮೂಲಕ ಯೋಗ ದಿನಾಚರಣೆ ಆಚರಿಸಲಾಯ್ತು.