ವೈಜ್ಞಾನಿಕ ಅಂಶಗಳನ್ನೊಳಗೊಂಡ ಆಧ್ಯಾತ್ಮಿಕ ಸಾಧನವೆ ಯೋಗ

ನವಲಗುಂದ,ಜೂ22: ವೈಜ್ಞಾನಿಕ ಅಂಶಗಳನ್ನೊಳಗೊಂಡ ಆದ್ಯಾತ್ಮಿಕ ಸಾಧನವೆ ಯೋಗ ಎಂದು ಬಿಜೆಪಿ ತಾಲೂಕಾದ್ಯಕ್ಷರಾದ ಗಂಗಪ್ಪ ಮನಮಿ ಹೇಳಿದರು.

ಅವರು ಪಟ್ಟಣದ ಶ್ರೀಗವಿಮಠದಲ್ಲಿ ತಾಲ್ಲೂಕಾ ಭಾರತೀಯ ಜನತಾ ಪಕ್ಷದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಬಿಜೆಪಿ ಮುಖಂಡ ದೇವರಾಜ ದಾಡಿಭಾಯಿ ಮಾತನಾಡಿ ಯೋಗ, ಧ್ಯಾನ ಮತ್ತು ನೈತಿಕ ಮಾರ್ಗಸೂಚಿಗಳನ್ನು ಒಳಗೊಂಡ ಸಮಗ್ರ ಪರಿಕಲ್ಪನೆಯಾಗಿದೆ ಜೀವನದಲ್ಲಿ ಯೋಗ ಅಳವಡಿಸಿಕೊಂಡಾಗ ರೋಗ ಮುಕ್ತವಾಗಿರಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ಪ್ರವೀಣ ಪವಾಡಿ ಸಿದ್ದಾರೂಢ ಅಳಗುಂಡಗಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾಯಿಬಾಬಾ ಆನೆಗುಂದಿ, ಪ್ರಭುಗೌಡ ಇಬ್ರಾಹಿಂಪೂರ, ಮಲ್ಲಿಕಾರ್ಜುನ ಸಂಗನಗೌಡರ,, ಪವನ ಪಾಟೀಲ, ಜಯಪ್ರಕಾಶ ಬದಾಮಿ, ವಿನಾಯಕ ದಾಡಿಬಾಯಿ, ಸಂತೋಷ ಹೊಸಮನಿ, ಶ್ರೀಧರ ಪಟ್ಟಣಶೆಟ್ಟಿ, ದುರ್ಗಪ್ಪ ನಾಗಮ್ಮನವರ, ಕೃಷ್ಣಾ ಭೋವಿ, ವೀರಣ್ಣ ಮೆಣಸಿನಕಾಯಿ, ರಾಮನಗೌಡ ಸಂಕನಗೌಡ್ರ ಇತರರು ಪಾಲ್ಗೊಂಡಿದ್ದರು.