ಯೋಗ ದಿನಾಚರಣೆ

ಚನ್ನಮ್ಮನ ಕಿತ್ತೂರು, ಜೂ22: ತಾಲೂಕಿನ ದೇವಗಾಂವ ಗ್ರಾಮದ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಮತ್ತು ಶಿಕ್ಷಕರ ಸಂಯುಕ್ತಾಶ್ರಯದಲ್ಲಿ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ವಿಜೃಂಭಣೆಯಿಂದ ನಡೆಯಿತು.


ಶಾಲಾ ಪ್ರಧಾನಗುರು ಸದಾಶಿವ ಪೋಳ ಮಾತನಾಡಿ ಯೋಗವು ಒಂದು ಧರ್ಮವಲ್ಲ ಅದು ಒಂದು ಜ್ಞಾನ ಇದು ದೇಹ, ಮನಸ್ಸು, ಆತ್ಮವನ್ನು ಸಂಪರ್ಕಿಸುವ ಮಾರ್ಗವಾಗಿದೆ. ಯೋಗ ಆರೋಗ್ಯಕ್ಕೆ ಸುಯೋಗ ಇದು ಪ್ರಾಚೀನ ಭಾರತೀಯ ಜೀವನ ವಿಧಾನವಾಗಿದೆ. ಯೋಗ ಕಲಿಯುವ ಮೂಲಕ ನಿಮ್ಮ ಶರೀರ ಕಾಪಾಡಿಕೊಂಡು ಉತ್ತಮ ರೀತಿಯಿಂದ ಬೆಳೆಯಿರಿ ಎಂದು ಮಕ್ಕಳಿಗೆ ಬೋಧಿಸಿದರು.


ಈ ವೇಳೆ ದೈಹಿಕ ಶಿಕ್ಷಕ ಕೇರವಾಡ ಸರ್, ತನುಜಾ ತೆಂಬದಮನಿ, ಮಂಜುಳಾ ಬಾರ್ಕಿ, ಸುನಂದಾ ಕುಂದರನಾಡ, ವಿಜಯಲಕ್ಷ್ಮೀ ಮಾನ್ಯದಮಠ, ಶ್ವೇತಾ ಚಿಕ್ಕಮಠ, ಅಖಿಲಾ ಚವ್ಹಾಣ, ರಾಘವೇಂದ್ರ ಹೊಂಬಳ, ಗ್ರಂಥ ಪಾಲಕಿ ವಿಜಯಾ ಉಡಕೇರಿ, ಬುಡವಿ, ಹಾಲಗೇರಿ, ಅಡುಗೆ ಸಿಬ್ಬಂದಿ ಸೇರಿದಂತೆ ಮಕ್ಕಳು ಸಾರ್ವಜನಿಕರಿದ್ದರು.