Home ಜಿಲ್ಲೆ ಲಿಂಗರಾಜ ಅಪ್ಪ ಕಾಲೇಜಿನಲ್ಲಿ ಯೋಗ ದಿನಾಚರಣೆ

ಲಿಂಗರಾಜ ಅಪ್ಪ ಕಾಲೇಜಿನಲ್ಲಿ ಯೋಗ ದಿನಾಚರಣೆ

ಬೀದರ್: ಅಪ್ಪ ಕ್ಯಾಂಪಸ್ ಗೋರನಳ್ಳಿ ಬೀದರ್ ನಲ್ಲಿ ಲಿಂಗರಾಜ ಅಪ್ಪ ತಾಂತ್ರಿಕ ಮಹಾವಿದ್ಯಾಲಯ. ಚೆನ್ನಬಸಮ್ಮ ಬಿಸಿಎ ಬಿಕಾಂ. ಶರಣಬಸವೇಶ್ವರ ಪದವಿ ಪೂರ್ವ ಕಾಲೇಜ್. ಶರಣಬಸವ ಪಬ್ಲಿಕ್ ಸ್ಕೂಲ್. ಇವರ ಸಯುಕ್ತ ಆಶ್ರಯದಲ್ಲಿ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ಸೈಲೆಂದ್ರ ಬೆಲ್ದಾಳೆ ಶಾಸಕರು ದಕ್ಷಿಣ ಬೀದರ್ ಹಾಗೂ ಯೋಗ ಗುರುಗಳಾದ ಹಾಗೂ ಅಧ್ಯಕ್ಷರು ದತ್ತಾತ್ರೆಯ ದೇವಾಲಯ ಗುನ್ನಳ್ಳಿ ಶ್ರೀ ಗೋರಖನಾಥ ಕುಂಬಾರಜಿ ಹಾಗೂ ಆನಂದ್ ಯೋಗ ಮಾಸ್ಟರ್ ಸಂಸ್ಥೆಯ ಕಾರ್ಯದರ್ಶಿ ಬಸವರಾಜ್ ದೇಶಮುಖ. ಕಾಲೇಜಿನ ಪ್ರಾಚಾರ್ಯರಾದ ಡಾ. ವಿನಿತಾ. ಎಸ್. ಪ್ರತಾಪೂರ ಚೆನ್ನಬಸಮ್ಮ ಬಿ ಸಿ ಎ ಬಿಕಾಂ ಕಾಲೇಜಿನ ಪ್ರಾಚಾರ್ಯರಾದ ಡಾ:ಸತೀಶ್ ಬಿ ಪ್ರತಾಪೂರ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾದ ಡಾ. ಸೈಲೆಂದರ್ ಬೆಲ್ದಾಳೆ ಶಾಸಕರು ದಕ್ಷಿಣ ಬೀದರ್ ಇವರು ಸನಾತನ ಧರ್ಮದ ಯೋಗ ಅಭ್ಯಾಸವು ಮುಂದಿನ ಪೀಳಿಗೆಗೆ ತುಂಬಾ ಮುಖ್ಯವಾಗಿದೆ ಬೇರೆ ಸಂಪ್ರದಾಯಗಳು ವಿದೇಶಿಗಳಿಂದ ನಾವು ಫಾದರ್ಸ್ ಡೇ ಫ್ರೆಂಡಸೀಪ್ ಡೇ ಮದರ್ಸ್ ಡೇ ಇಂತಹ ಪೌರತ್ಯ ರಾಷ್ಟ್ರಗಳಿಂದ ಸಂಸ್ಕøತಿಗಳನ್ನು ನಾವು ಆಚರಿಸುತ್ತಿದ್ದೇವೆ ಆದರೆ ಭಾರತೀಯರಾದ ನಾವು ವಿಶ್ವಕ್ಕೆ ಕೊಟ್ಟ ಏಕೈಕ ದಿನಾಚರಣೆ ಎಂದರೆ ಅದುವೇ ಅಂತರಾಷ್ಟ್ರೀಯ ಯೋಗ ದಿನಾಚರಣೆ. ಪ್ರಾಚೀನ ಕಾಲದಲ್ಲಿ ಯೋಗಕ್ಕೆ ಬಹಳಷ್ಟು ಪ್ರಾಮುಖ್ಯತೆ ನೀಡುತ್ತಿದ್ದರು ಇದು ಮನುಷ್ಯನನ್ನು ವ್ಯವಸ್ಥಿತವಾಗಿ ದೈಹಿಕವಾಗಿ ಮಾನಸಿಕವಾಗಿ ದೀರ್ಘ ಕಾಲದವರೆಗೆ ಬಾಳಿ ಬದುಕುವಂತೆ ನೆಮ್ಮದಿಯ ಜೀವನ ನೀಡುತ್ತಿತ್ತು. ಎಂದು ಹೇಳಿದರು ಕಾರ್ಯಕ್ರಮದ ಗೌರವ ಉಪಸ್ಥಿತರಿರುವ ಶ್ರೀ ಬಸವರಾಜ್ ದೇಶಮುಖ್ ಕಾರ್ಯದರ್ಶಿಗಳು ಇಂದಿನ ಒತ್ತಡದ ಮತ್ತು ಆಧುನಿಕತೆಯ ಜೀವನ ಶೈಲಿಯಿಂದಾಗಿ ಮಾನವ ಬಿಡು ಇಲ್ಲದೇನೆ ಒತ್ತಡದ ಜೀವನವನ್ನು ಸಾಗಿಸುತ್ತಿದ್ದಾರೆ ಇಂತಹ ಸಮಯದಲ್ಲಿ ಬೆಳಿಗ್ಗೆ ಸೂರ್ಯೋದಯದ ಕ್ಕಿಂತ ಮುಂಚೆ ಯೋಗ ಅಭ್ಯಾಸ ಮಾಡುವುದು ತುಂಬಾ ಸೂಕ್ತ ಮತ್ತು ಚಿಕ್ಕ ಮಕ್ಕಳಿಗೆ ಮೊಬೈಲ್ ಬಳಕೆಯಿಂದ ದೂರ ಇಡುವುದು ಅತ್ಯಂತ ಅವಶ್ಯಕವೆಂದು ಮಕ್ಕಳಿಗೆ ಯೋಗ ಅಭ್ಯಾಸವು ಅತ್ಯಂತ ಉಪಯುಕ್ತವಾಗಿದ್ದು ಅಭ್ಯಾಸದ ಜೊತೆಗೆ ಸಮಯ ಸಿಕ್ಕಾಗ ಪಾಲಕರು ಮಕ್ಕಳ ಜೊತೆಗೆ ಆಟ ಆಡುವಂತಹ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು.ಇದು ಇಃದಿನ ಮಕ್ಕಳಿಗೆ ತುಂಬಾ ಉಪಯುಕ್ತವಾಗಿರುತ್ತದೆ ಎಂದು ಹೇಳಿದರು