ಮಡಿವಾಳಪ್ಪ ಟಿ ಯತ್ನಾಳ
ಯಡ್ರಾಮಿಸೆ.29::ವರ್ಷ ಕಳೆದರು ಮುಗಿಯದ ಕಾಮಗಾರಿ ಸಾರ್ವಜನಿಕರು ವಾಹನ ಸವಾರರು ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆಕ್ರೋಷವ್ಯಕ್ತಪಡಿಸಿದ್ದಾರೆ.
ಪಿಡಬ್ಲೂಡಿ ಇಲಾಖೆಯಿಂದ ಅಂದಾಜು 25ಕೋಟಿ ರೂ ವೇಚ್ಚದಲ್ಲಿ ಇಜೇರಿ ಗ್ರಾಮದಿಂದ ಹರನಾಳ ಕ್ರಾಸ್ ವರೆಗೂ ಮುಖ್ಯ ರಸ್ತೆಯು ಡಾಂಬರಿಕರಣ ರಸ್ತೆ ನಡೆಯುತ್ತಿದ್ದು.
ಕಾಮಗಾರಿ ಪ್ರಾರಂಭ ಮಾಡಿ ವರ್ಷಗಳೆ ಕಳೆದರು ಕೂಡ ಮುಗಿಸದೆ ವಾಹನ ಸವಾರರ ಜೀವನದ ಜೋತೆಗೆ ಚಲ್ಲಾಟ ಆಡುತ್ತಿದ್ದಾರೆ ಎಂದು ವಾಹನ ಸವಾರರು ಗುತ್ತಿಗೆದಾರರ ವಿರುದ್ಧ ಆಕ್ರೋಷ ವ್ಯಕ್ತಪಡಿಸುತ್ತಾದ್ದಾರೆ.
ಇಜೇರಿ ಗ್ರಾಮದಿಂದ ಹರನಾಳ ಕ್ರಾಸ್ ವರೆಗೂ ಸಂಪೂರ್ಣ ರಸ್ತೆ ಅಗೆದು ಒಂದು ಕಡೆಯ ರಸ್ತೆ ಗುಂಡಿ ಮಾಡಿದ್ದಾರೆ ಎರಡೂ ವಾಹನಗಳು ಬಂದರೆ ವಾಹನ ಪಲ್ಟಿಯಾಗುವುದು ಪಕ್ಕಾ ಆಗಿದೆ ಎಂದು ವಾಹನ ಸವಾರರು ಹೇಳಿದರು.
ಕಾಮಗಾರಿ ಮಾಡಬೇಕು ಅಂದ್ರೆ ಒಂದು ಕಿಲೋ ಮೀಟರ ಅಗೆದು ಪೂರ್ತಿಯಾದ ಮೇಲೆ ಮುಂದಿನ ಕಾಮಗಾರಿ ಮಾಡಬೇಕು ಹಾಗೆ ಮಾಡದೇ ಸಂಪೂರ್ಣ ರಸ್ತೆ ಅಗೆದಿದ್ದಾರೆ ಅದಕ್ಕೆ ಮರುಂ ತುಂಬಿ ಸವರಾರರಿಗೆ ಅನುಕೂಲ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ವಾರಗಳ ಹಿಂದೆ ಯಡ್ರಾಮಿ ಕಡೆಯಿಂದ ಜೇವರ್ಗಿ ಹೊರಟ ಬಸ್ ರಸ್ತೆಯ ಕಂದಕ್ಕೆ ಜಾರಿ ನೂರಾರು ಪ್ರಯಾಣಿಕರು ಪ್ರಾಣಾಯದಿಂದ ಪಾರಾಗಿದ್ದು ರಸ್ತೆ ಕಾಮಗಾರಿ ಮಾಡದೇ ಸಾರ್ವಜನಿಕರ ಜೀವನ ಜೋತೆಗೆ ಚಲ್ಲಾಟ ಆಡುವ ಗುತ್ತಿದೆದಾರನ ಗುತ್ತಿಗೆ ಪರವಾನಿಗೆ ರದ್ದು ಮಾಡಿ ಕಾನೂನು ಕ್ರಮ ಕೈಗೋಳಬೇಕು ಎಂದು ಹೇಳಿದರು.
ಹೀಗೆ ಕಾಮಗಾರಿ ವಿಳಂಬ ಮಾಡಿದರೆ ಯಡ್ರಾಮಿ ಪಟ್ಟಣದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಮಹೇಂದ್ರ ಎಸ್ ಬಾಲೂರ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಉಪಾಧ್ಯಕ್ಷರು ಕಲಬುರಗಿ ಹಾಗೂ ವಿಠ್ಠಲ ಚೌಡಕಿ ಮಾಣಸುಣಗಿ ಭಾರತಿಯ ದಲಿತ ಪ್ಯಾಂತರ ತಾಲೂಕು ಅಧ್ಯಕ್ಷರು ಯಡ್ರಾಮಿ ಅವರು ಆಗ್ರಹಿಸಿದ್ದಾರೆ.
ಕಾಮಗಾರಿ ಪ್ರಾರಂಭ ಮಾಡಿ ವರ್ಷಗಳು ಕಳೆದರೂ ಕೂಡ ಕಾಮಗಾರಿ ಮುಗಿಸದೆ ವಾಹನ ಸವಾರರು ಪ್ರಾಣ ಕೈಯಲ್ಲಿ ಹಿಡ್ಕೊಂಡು ವಾಹನ ನಡೆಸುತ್ತಿದ್ದಾರೆ ತಕ್ಷಣ ಕಾಮಗಾರಿ ಮುಗಿಸದೇ ಹೋದರೆ ಉಗ್ರವಾದ ಪ್ರತಿಭಟನೆ ಮಾಡಲಾಗುವುದು.
ವಿಠ್ಠಲ ಚೌಡಕಿ ಭಾರತಿಯ ದಲಿತ ಪ್ಯಾಂತರ ತಾಲೂಕು ಅಧ್ಯಕ್ಷರು ಯಡ್ರಾಮಿ.
ಕಾಮಗಾರಿಯ ಸಂಪೂರ್ಣ ರಸ್ತೆ ಅಗೆದು ಕಾಮಗಾರಿ ಮಾಡದೇ ಇರುವ ಗುತ್ತಿಗೆದಾರನ ಪರವಾನಿಗೆ ರದ್ದು ಮಾಡಿ ಕ್ರಮಕೈಗೋಳಬೇಕು ಎಂದು ಆಗ್ರಹಿಸಿದ್ದಾರೆ.
ಮಹೇಂದ್ರ ಎಸ್ ಬಾಲೂರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಉಪಾಧ್ಯಕ್ಷರು ಕಲಬುರಗಿ.























