ಯತ್ನಾಳ್ ಹೇಳಿಕೆ ಬಾಲಿಷತನದ್ದು : ದ್ಯಾಡೆ

ಔರಾದ :ಜೂ.೨೫: ರಾಜ್ಯದ ಹಿರಿಯ ಮುತ್ಸದ್ದಿ, ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಛಲಗಾರ, ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಹೋರಾಟಗಾರ, ಲಿಂಗಾಯತ ಸಮಾಜದ ಪ್ರಶ್ನಾತೀತ ನಾಯಕ ಬಿಎಸ್. ಯಡಿಯೂರಪ್ಪನವರ ಬಗ್ಗೆ ನಾಲಿಗೆ ಹರಿಬಿಟ್ಟ ಯತ್ನಾಳ್ ಯಡಿಯೂರಪ್ಪ ಸಾಯುವುದಾದರೆ ಸಾಯಲಿ ಎಂದು ಹೇಳಿದ್ದು ಎಂದು ಲಿಂಗಾಯತ ಸಮಾಜ ಮುಖಂಡ ಸಂಗು ದ್ಯಾಡೆ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬಿಎಸ್ವೈ ಅವರ ಸಾವಿನಿಂದ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದಾದರೆ ಸಾಯಲಿ. ನಮ್ಮ ಕೈಗೆ ಬಿಜೆಪಿ ಸಾರಥ್ಯವನ್ನು ಕೊಡಿ. ಬಿಜೆಪಿಯನ್ನು ನಮ್ಮ ಕೈಯಲ್ಲಿ ಕೊಟ್ಟರೆ ೧೫೦ ಸೀಟು ತರ್ತೀವಿ ಎಂದು ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹುಚ್ಚುತನದ ಹೇಳಿಕೆ ನೀಡಿದ್ದು ಅವರ ವ್ಯಕ್ತಿತ್ವ ಎದ್ದು ಕಾಣುತ್ತಿದೆ. ಯತ್ನಾಳ್ ಅವರ ಈ ಹೇಳಿಕೆ ಬಾಲಿಷತನದ್ದು ಕರ್ನಾಟಕ ರಾಜಕೀಯಕ್ಕೆ ಅದು ಒಂದು ಕಪ್ಪು ಚುಕ್ಕೆ ಎನ್ನಬಹುದು ಕೂಡಲೇ ಯತ್ನಾಳ್ ಬಿಎಸ್ ಯಡಿಯೂರಪ್ಪನವರಿಗೆ ಕ್ಷಮೆ ಕೇಳಬೇಕು ಮತ್ತು ಈ ರೀತಿಯ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.