
ಅಫಜಲಪುರ : ನ.5:ತಾಲೂಕಿನ ಶ್ರೀಕ್ಷೇತ್ರ ಗಾಣಗಾಪುರದ ಯತಿರಾಜ ಶಿಕ್ಷಣ ಸಂಸ್ಥೆಯ ಅಡಿಯಲ್ಲಿನ ಯತಿರಾಜ ಶಾಲೆಯ ವಿದ್ಯಾರ್ಥಿನಿ ನಂದಿನಿ ದತ್ತಾತ್ರೇಯ (100 ಮೀಟರ್ ಓಟದಲ್ಲಿ) ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾಳೆ.
ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ 2025-26 ನೇ ಸಾಲಿನ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದಿದ್ದಾರೆ. ಸಮೀರ್ ಖಾಸಿಂಸಾಬ್ ಉದ್ದ ಜಿಗಿತದಲಿ ಮೂರನೇ ಸ್ಥಾನ, ಅಕ್ಷತಾ ಸಿದ್ದಪ್ಪ (200 ಮೀಟರ್ ಓಟದಲ್ಲಿ) ಮೂರನೇ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆ ಕಂಡು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಭೀಮ್‍ರಾವ್ ಚೌಡಾಪುರಕರ್, ಸಂಸ್ಥೆಯ ಅಧ್ಯಕ್ಷ ಚಂದ್ರವಿಲಾಸ್‍ಭಟ್ ಪೂಜಾರಿ, ಕಾರ್ಯದರ್ಶಿ ಋಷಿಕೇಶ್ ಚೌಡಾಪುರಕರ್, ನಿರ್ದೇಶಕ ಗೋವಿಂದರಾವ್ ಚೌಡಾಪುರಕರ್, ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಹಾಗೂ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಬಸವರಾಜ ಎಮ್ ಹಡಪದ, ಪ್ರೌಢಶಾಲೆಯ ಮುಖ್ಯ ಗುರುಗಳಾದ ಮಹಿಬೂಬ ಎಲ್ ಕಣ್ಣಿ , ದೈಹಿಕ ಶಿಕ್ಷಕರಾದ ರಾಜು ವಾಗ್ಮೊಡೆ, ಸುಜಾತ ವಾಗ್ಮೊರೆ ಮತ್ತು ಶಿಕ್ಷಣ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಸಾಧನೆಯನ್ನು ಕಂಡು ಹರ್ಷ ವ್ಯಕ್ತಪಡಿಸಿದರು ಎಂದು ವಿಕಾಸ ಜಿ.ಪಂಚಾಳ ತಿಳಿಸಿದ್ದಾರೆ.






























