ನಾಳೀಯ ಚಿಕಿತ್ಸೆ ಮೂಲಕ ವೃದ್ಧನ ಕಾಲು ರಕ್ಷಿಸಿದ ಯಶೋಧಾಆಸ್ಪತ್ರೆ

ಕಲಬುರ್ಗಿ:ಫೆ.1: ನಾಳೀಯ ಚಿಕಿತ್ಸೆಯ ಮೂಲಕ ವೃದ್ಧ ವ್ಯಕ್ತಿಯೊಬ್ಬರ ಕಾಲು ರಕ್ಷಿಸಿದ ಶ್ರೇಯಸ್ಸುಯಶೋಧಾಆಸ್ಪತ್ರೆಗೆದೊರಕಿದೆಎಂದು ವಾಸ್ಕುಲರ್ ಸರ್ಜರಿಕ್ಲಿನಿಕಲ್‍ಡೈರೆಕ್ಟರ್‍ಡಾ. ಎಸ್. ಶ್ರೀಕಾಂತರಾಜು ಅವರು ಹೇಳಿದರು.
ನಗರದಯಶೋಧಾಆಸ್ಪತ್ರೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, 89 ವರ್ಷದ ವೃದ್ಧ ವ್ಯಕ್ತಿಚಂದ್ರಶೇಖರ್‍ಅವರುಎಡಗಾಲಿನ ಗ್ಯಾಂಗ್ರೀನ್‍ಗೆ ಒಳಗಾಗಿದ್ದು, ವಿಪರೀತ ನೋವಿನೊಂದಿಗೆ ಆಸ್ಪತ್ರೆಗೆದಾಖಲಾದಾಗಅವರಿಗೆಚಿಕಿತ್ಸೆಕೊಡಿಸುವ ಮೂಲಕ ಅವರ ಕಾಲನ್ನು ಉಳಿಸಲಾಗಿದೆ ಎಂದರು.
ವೃದ್ಧರೋಗಿಯು ಕಲಬುರ್ಗಿ, ಸೊಲ್ಲಾಪುರ, ವಿಜಯಪುರ, ಬೆಂಗಳೂರಿನ ಹಲವು ಆಸ್ಪತ್ರೆಗಳಿಗೆ ಹೋಗಿದ್ದರು.ಆದಾಗ್ಯೂ, ಮೊಣಕಾಲುಇಲ್ಲವೇಅದಕ್ಕಿಂತ ಮೇಲಿನ ಭಾಗವನ್ನುತೆಗೆದುಹಾಕುವಕುರಿತು ಸಲಹೆ ನೀಡಿದ್ದರು.ಇದರಿಂದಾಗಿಆತಂಕಕ್ಕೆ ಒಳಗಾಗಿದ್ದ ಅವರಕುಟುಂಬವು ಹೈದ್ರಾಬಾದ್‍ನಯಶೋಧಾಆಸ್ಪತ್ರೆಯನ್ನು ಸಂಪರ್ಕಿಸಿದಾಗ ಅವರಿಗೆಚಿಕಿತ್ಸೆ ನೀಡುವ ಮೂಲಕ ಅವರ ಕಾಲಿಗೆ ಯಾವುದೇರೀತಿಯಲ್ಲಿತೊಂದರೆಯಾಗದಂತೆ, ಮೊದಲಿನ ಹಾಗೆ ನಡೆದಾಡಲು ಅನುಕೂಲವಾಗುವ ರೀತಿಯಲ್ಲಿಚಿಕಿತ್ಸೆ ನೀಡಲಾಗಿದೆಎಂದುಅವರು ಹೇಳಿದರು.
ವೃದ್ಧ ವ್ಯಕ್ತಿಗೆ ಲೆಫ್ಟ್‍ಕಾಮನ್‍ಇಲಿಯಾಕ್‍ಆರ್ಟರಿ, ಸೂಪರ್ಫಿಶಿಯಲ್ ಫೆಮೊರಲ್‍ಆರ್ಟರಿ ಮತ್ತುಅಂಟೇರಿಯರ್‍ಟಿಬಿಯಲ್‍ಆರ್ಟರಿ, ಅಂಜಿಯೋ ಪ್ಲಾಸ್ಟಿ ಚಿಕಿತ್ಸೆ ಮಾಡಿದ್ದೇವೆ. ಎರಡು ದಿನಗಳ ಸ್ಟೆಮ್‍ಸೆಲ್‍ಥೆರಪಿಯನ್ನೂ ಸಹ ಅವರಿಗೆ ನೀಡಲಾಗಿದೆ.ಅತ್ಯಾಧುನಿಕ ಮೂಲ ಸೌಕರ್ಯಗಳನ್ಜು ಹೊಂದಿರುವಯಶೋಧಾಆಸ್ಪತ್ರೆ ಸಾಧ್ಯವಿರದೇಇದ್ದುದನ್ನು ಸಾಧ್ಯವಾಗಿಸಿದೆ ಎಂದುಅವರುಅವರು ತಿಳಿಸಿದರು.
ವೃದ್ಧರೋಗಿಚಂದ್ರಶೇಖರ್‍ಅವರು ಮಾತನಾಡಿ, ನಾನು ಹಲವು ಆಸ್ಪತ್ರೆಗಳಿಗೆ ಹೋದಾಗ ನನಗೆ ಕಾಲು ತೆಗೆಯಬೇಕೆಂದು ವೈದ್ಯರು ಹೇಳಿದ್ದರು.ನನ್ನ ಮಗ ಹೈದ್ರಾಬಾದ್‍ಯಶೋಧಾಆಸ್ಪತ್ರೆಕುರಿತು ಮಾಹಿತಿ ತಿಳಿದುಕೊಂಡು ಅವರನ್ನು ಸಂಪರ್ಕಿಸಿದಾಗ ನನಗೆ ಉತ್ತಮಚಿಕಿತ್ಸೆ ನೀಡಿದೆ. ನಾನು ಈಗ ಮೊದಲಿನಂತೆಓಡಾಡುತ್ತಿರುವೆ. ಒಂದು ಕಿ.ಮೀವರೆಗೆ ಸ್ವತ: ನಡೆಯುವ ಸಾಮಥ್ರ್ಯ ಹೊಂದಿರುವೆಎಂದುಅವರು ಹೇಳಿದರು.