ಯಲ್ಲಾಲಿಂಗೇಶ್ವರ ಜಾತ್ರೆ: ಅನ್ನಸಂತರ್ಪಣೆ

ಕಲಬುರಗಿ,ಜ.16-ಜೇವರ್ಗಿ ತಾಲೂಕಿನ ಭೀಮಾ ಬ್ರಿಜ್ ಕಟ್ಟಿಸಂಗಾವಿ ಗ್ರಾಮದಲ್ಲಿ ಯಲ್ಲಾಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಜೇವರ್ಗಿಯ ಜೋಬ್ಲೆಸ್ ಫ್ಯಾಷನ್ ಮಾರ್ಟ್ ವತಿಯಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ಬಹಳ ಅರ್ಥಪೂರ್ಣ ಜರುಗಿತು.
ಗ್ರಾಮಸ್ಥರಾದ ಮಲ್ಲೇಶಯ್ಯ ಸ್ವಾಮಿ ಮಠಪತಿ, ಶರಣಪ್ಪ ನರಿಬೋಳ, ಜಯರಾಮ ನರಿಬೋಳ, ಸುರೇಶ ನರಿಬೋಳ, ಬಸವರಾಜ ಶಾಹಾಪುರ, ರಾಜಶೇಖರ ನರಿಬೋಳ, ಸಿದ್ದು ನರಿಬೋಳ, ರಮೇಶ ಶಾರದಳ್ಳಿ, ರಾಮು ಜಯರಾಮ, ಯಲ್ಲಾಲಿಂಗ ಸುಬೇದಾರ, ಅವಿನಾಶ ಚಿಗರಳ್ಳಿ, ವಿಜಯಕುಮಾರ, ಸಂತೋಷ, ಸಿದ್ರಾಮಶೆಟ್ಟಿ, ಮಂಜುನಾಥ, ಪ್ರಕಾಶ, ಮಾಂತೇಶ, ಅಭಿಷೇಕ, ರವಿ, ಬಸ್ಸು ಮದ್ರಿಕಿ, ಅರುಣ ಮುಂತಾದ ಗ್ರಾಮಸ್ಥರು ಸೇವೆ ಸಲ್ಲಿಸಿದರು.