ಯಜ್ಞೋಪವೀತಧಾರಣೆ ಕಾರ್ಯಕ್ರಮ

ತಾಳಿಕೋಟೆ:ಅ.೧೦: ಯಜ್ಞೋಪವೀತಧಾರಣೆ ಕಾರ್ಯಕ್ರಮಕ್ಕೆ ಜನಿವಾರ ಧರಿಸುವ ಕಾರ್ಯಕ್ರಮ ಎಂದು ಹೇಳಲಾಗುತ್ತಿದ್ದು ಈ ಪದ್ದತಿಯನ್ನು ಎಂದಿನಿAದ ಆರಂಭವಾಯಿತು ಎಂಬುದು ತಿಳಿಯದು. ಪುರಾಣ ಕಾಲದ ನಂತರ ಜನಿವಾರ ಧರಿಸುವ ಪದ್ದತಿ ಆರಂಭವಾಗಿರಬಹುದು ಯಾಕೆಂದರೆ ಬಹಳ ಪ್ರಾಚೀನವಾದ ಇತಿಹಾಸದಿಂದ ಈ ಪದ್ದತಿಗೆ ಒಂದು ದೀಕ್ಷೆಯನ್ನು ಹಿಡಿದ ಸಂಕೇತವೆAದು ಹೇಳಬಹುದಾಗಿದೆ ಎಂದು ಸ್ಥಳೀಯ ಸಂಸ್ಕೃತ ಪಾಠಶಾಲೆಯ ಅಧ್ಯಕ್ಷರಾದ ವೆಂಕಟೇಶ ಗ್ರಾಮಪುರೋಹಿತ ಅವರು ನುಡಿದರು.
ಶನಿವಾರರಂದು ನೂಲಹುಣ್ಣಿಮೆ ನಿಮಿತ್ಯವಾಗಿ ಪ್ರತೀವರ್ಷದಂತೆ ಆಚರಿಸಿಕೊಂಡು ಬರಲಾಗುತ್ತಿರುವ ಶ್ರೀ ನಿಮಿಷಾಂಬಾದೇವಿ ಮಂದಿರದಲ್ಲಿ ಸೋಮವಂಶ ಆರ್ಯ ಕ್ಷತ್ರೀಯ ಸಮಾಜ ಬಾಂಧವರ ವತಿಯಿಂದ ಏರ್ಪಡಿಸಲಾದ ಯಜ್ಞೋಪವೀತಧಾರಣೆ ಕಾರ್ಯಕ್ರಮದಲ್ಲಿ ಹೋಮಹವನ ಮಹಾಪೂಜಾ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡುತ್ತಿದ್ದ ಅವರು ಈ ಜನಿವಾರಧಾರಣೆ ಕಾರ್ಯಕ್ರಮವನ್ನು ಬ್ಯಾಹ್ಮಣರು, ಕ್ಷತ್ರೀಯರು, ಹಾಗೂ ಹಿಂದೂ ಬಾಂಧವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನಿವಾರಧರಿಸುವ ಕಾರ್ಯಕ್ರಮವನ್ನು ನೆರವೇರಿಸುತ್ತಾರೆ. ಹಿಂದೂ ಧರ್ಮದ ಪ್ರಕಾರ ಕಡ್ಡಾಯವಾಗಿ ಈ ಜನಿವಾರ ಧರಿಸುವವರು ನಿಯಮ ಪಾಲಿಸಬೇಕಾಗುತ್ತದೆ ಎಂದು ಜನಿವಾರದ ಮಹತ್ವ ಹಾಗೂ ರಕ್ಷಾಬಂಧನದ ಕುರಿತು ವಿವರಿಸಿದರು.
ಕಾರ್ಯಕ್ರಮದ ಮೊದಲಿಗೆ ಶ್ರೀ ನಿಮಿಷಾಂಬಾದೇವಿಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾಮಂಗಳಾರತಿಯನ್ನು ಅರ್ಚಕರಾದ ಯಲಗೂರೇಶ ಅವರು ನೆರವೇರಿಸಿದರು. ಈ ಪೂಜಾ ಕಾರ್ಯಕ್ರಮದಲ್ಲಿ ತುಳಸೀರಾಮ್ ಚವ್ಹಾಣ ಅವರು ಉಪಸ್ತಿತರಿದ್ದು ಹೋಮಹವನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಕ್ತಿಭಾವ ಮೆರೆದರು.
ಈ ಸಮಯದಲ್ಲಿ ಸಮಾಜದ ಹಿರಿಯರಾದ ಮಾರುತಿರಾವ ಚವ್ಹಾಣ, ಹಾಗೂ ಘನಶ್ಯಾಮ್ ಚವ್ಹಾಣ, ಪ್ರದೀಪ ಭುಸಾರೆ, ಸಂದೀಪ ಬುಸಾರೆ, ದೋಂಡಿರಾಮ ಮಿರಜಕರ, ನಾರಾಯಣ ಗಾಯಕವಾಡ, ಮಹೇಶ ಕರ್ಜಗಾರ, ಪ್ರಕಾಶ ಗೋಮಟೆ, ಗಣಪತಿ ಚವ್ಹಾಣ, ರಾಮಚಂದ್ರ ಮಿರಜಕರ, ಸತೀಶ ಚವ್ಹಾಣ, ನಾಗೇಶ ಚವ್ಹಾಣ, ಮೊದಲಾದವರು ಉಪಸ್ತಿತರಿದ್ದರು.
ಶಿವಭವಾನಿ ಮಂದಿರದಲ್ಲಿ:- ಕ್ಷತ್ರೀಯ ಮರಾಠಾ ಸಮಾಜ ಬಾಂಧವರ ವತಿಯಿಂದ ಶಿವಭವಾನಿ ಮಂದಿರದಲ್ಲಿ ಯಜ್ಞೋಪವೀತಧಾರಣೆ ಕಾರ್ಯಕ್ರಮ ಜರುಗಿತು.
ಶ್ರೀ ಶಿವಭವಾನಿದೇವಿಗೆ ಮಹಾಭಿಷೇಕ ಹೋಮ ಹವನದೊಂದಿಗೆ ಜನಿವಾರಧಾರಣೆ ಕಾರ್ಯಕ್ರಮವನ್ನು ಕ್ಷತ್ರೀಯ ಮರಾಠಾ ಸಮಾಜದ ಶಿವಭವಾನಿ ಮಂದಿರದ ಅರ್ಚಕರಾಧ ಸಂತೋಷಭಟ್ ಜೋಷಿ ಅವರು ನೆರವೇರಿಸಿದರು.
ಈ ಸಮಯದಲ್ಲಿ ಕ್ಷತ್ರೀಯ ಮರಾಠಾ ಸಮಾಜದ ಅಧ್ಯಕ್ಷರಾದ ಸಂಬಾಜಿ ವಾಡಕರ, ಉಪಾಧ್ಯಕ್ಷ ಅಣ್ಣಪ್ಪ ಜಗತಾಪ, ಕಾರ್ಯದರ್ಶಿ ಕಾಶೀರಾಯ ಮೊಹಿತೆ, ಗುರುರಾಜ ಮಾನೆ, ಸಂಜು ಕದಂ, ಮಾರುತಿ ಘಾಟಗೆ, ಜನಾರ್ಧನ ಶಿಂಧೆ, ಸಂಬಾಜಿ ಡಿಸಲೆ, ಶಿವಾಜಿ ಮೊಹಿತೆ, ವಿಠ್ಠಲ ಮೊಹಿತೆ, ಲಕ್ಷö್ಮಣ ಶೇವಳಕರ, ಪರಶುರಾಮ ಶೇವಳಕರ, ನಾರಾಯಣ ಸುಬೇದಾರ, ಅಂಬಾಜಿ ಜಾಧವ, ಅನೀಲ ಮಾನೆ ಮೊದಲಾದವರು ಪಾಲ್ಗೊಂಡಿದ್ದರು.