
ಯಾದಗಿರಿ :ಡಿ.5: ರಾಜ್ಯಮಟ್ಟದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಗುರುವಾರ ನಡೆದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಯಾದಗಿರಿಯ ಬಂಜಾರ ನೃತ್ಯ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.
ಯಾದಗಿರಿ ತಾಲೂಕಿನ ಭೀಮನಗರ ಮುದ್ನಾಳ ದೊಡ್ಡ ತಾಂಡಾದ ಬಂಜಾರ ಸಮಾಜ ಸೇವಾ ಯುವಕರ (ರಿ.) ಬಂಜಾರ ಜಾನಪದ ನೃತ್ಯದ ತಂಡ, ಕಾವೇರಿ, ಮೇನುಕಾ, ಸವಿತಾ, ಕ್ರೀಸ್ಮಾ, ವಿಜಯಬಾಯಿ, ಬೇಬಿ, ಪ್ರಿಯಾಂಕ , ರೋಷನಿ, ಜಗದೀಶ್ , ಸವಿತಾ, ತಂಡದ ವ್ಯವಸ್ಥಾಪಕರಾದ ಆನಂದ ಎಸ್ ರಾಠೋಡರವರ ತಂಡಕ್ಕೆ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ, ಡಿಸಿ ಹರ್ಷಲ್ ಬೋಯರ್ ಶುಭಕೋರಿದರು.


























