
ಶಿಡ್ಲಘಟ್ಟ,ಡಿ,೧- ವಿದ್ಯಾರ್ಥಿಗಳು ಓದುವ ಸಮಯದಲ್ಲಿ ಕಲಿಕೆಗೆ ಹಾಗೂ ಅವರ ಜ್ಞಾನ ಶಕ್ತಿ ವೃದ್ಧಿಸಲು ಪ್ರೌಢಶಾಲಾ ಮಕ್ಕಳಿಗೆ ವಿವಿಧ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಸಪ್ರಸ್ನೆ ಹಮ್ಮಿಕೊಳ್ಳಲಾಗಿದ್ದು ಉತ್ತಮ ರೀತಿಯಲ್ಲಿ ವಿದ್ಯಾರ್ಥಿಗಳು ಬರೆದು ಅವರ ಕೌಶಲ್ಯ ಮೆರೆದಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ ತಿಳಿಸಿದರು.
೭೦ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ಉಪ ನಿರ್ದೇಶಕರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ತಾಲೂಕಿನ ಪ್ರೌಢಶಾಲಾ ವಿಭಾಗಕ್ಕೆ ನಡೆದ ಲಿಖಿತ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ತಾಲೂಕಿನ ಮೂರು ಕೇಂದ್ರಗಳಾದ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆ ನಗರದ ಶ್ರೀ ಸರಸ್ವತಿ ವಿದ್ಯಾ ಸಂಸ್ಥೆ, ದಿಬ್ಬೂರಹಳ್ಳಿ ಎಸ್‌ಎಂವಿ ಪ್ರೌಢಶಾಲೆಗಳಲ್ಲಿ ನಡೆಸಲಾಗಿದ್ದು ರಸಪ್ರಸ್ನೆ ಸ್ವರ್ಧೆಯಲ್ಲಿ ಸರಿಸುಮಾರು ೧೧೦ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ರೀತಿಯಲ್ಲಿ ಬರಹ ನೀಡಿದವರಿಗೆ ಪ್ರಸಂಸನಾ ಪತ್ರಗಳನ್ನು ನೀಡಿ ಗೌರವ ಸನ್ಮಾನ ನೀಡಿದರು.
ಕಾರ್ಯಕ್ರಮವನ್ನು ನಡೆಸಿಕೊಟ್ಟ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಮುನಿನಾರಾಯಣಪ್ಪ, ದೇವರಾಜ್ ಮಳಮಾಚನಹಳ್ಳಿ, ವಿ ಕೃಷ್ಣ, ಸತೀಶ್, ಟಿ ಟಿ ನರಸಿಂಹಪ್ಪ, ಎನ್ ಸುಂದರ್, ರಾಮಾಂಜನೇಯ, ಈ ಧರೆ ಪ್ರಕಾಶ್, ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.


























