
ಸುರಪುರ :ಜ.4: ಅಪ್ಪ ಸಾಹಿತ್ಯ ಸಾಂಸ್ಕøತಿಕ ಕಲಾ ವೇದಿಕೆ ವಿಜಯಪುರ ಇವರು ಕೂಡ ಮಾಡುವ 2026ನೇ ಸಾಲಿನ ರಾಜ್ಯ ಮಟ್ಟದ ಅಪ್ಪ ಪ್ರಶಸ್ತಿಗೆ ಸಾಹಿತ್ಯ ಕ್ಷೇತ್ರದಲ್ಲಿ ಸುರಪುರದ ಸಾಹಿತಿ ಜಾವೀದ ಹುಸೇನ ಹವಲ್ದಾರ ಅವರು ಆಯ್ಕೆಯಾಗಿದ್ದಾರೆ. ಜಾವೀದ ಹುಸೇನ ಹವಲ್ದಾರ ಅವರ ಸಾಹಿತ್ಯ ಸೇವೆ. ಸಾಧನೆಗಳನ್ನು ಪರಿಗಣಿಸಿ ಅಪ್ಪ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ಜನವರಿ 4ರಂದು ವಿಜಯಪುರದ ಚೇತನ ಕಾಲೇಜಿನ ಸಭಾಂಗಣದಲ್ಲಿ ನಡೆಯುವ ಅಪ್ಪ – ಉತ್ಸವ 2026ರ ಕಾರ್ಯಕ್ರಮದಲ್ಲಿ ನಾಡಿನ ಗಣ್ಯ ಮಾನ್ಯರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಅಪ್ಪ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಸುಜ್ಞಾನಿ ಎನ್. ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
























