ಬೀದರ್: ಸೆ.೨೨:ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಸ್ಥಾಪಿಸಿದ ಸಂವಿಧಾನದ ಆಧಾರದ ಮೇಲೆ ಮೀಸಲಾತಿ ಅನುಭವಿಸುತ್ತಿರುವ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ೧೦೧ ಜಾತಿ ಜನಾಂಗದವರು ಧರ್ಮದ ಕಾಲಂನಲ್ಲಿ ಬೌದ್ದ ಎಂದು, ಜಾತಿ ಕಾಲಂನಲ್ಲಿ ಹೊಲಿಯ, ಮಾದಿಗ, ಎಂಬಿತ್ಯಾದಿ ಜಾತಿಗಳ ಹೆಸರು ಬರೆಸಬೇಕು, ಉಪ ಜಾತಿಗಳಲ್ಲಿ ಸಹ ಜಾತಿಯಲ್ಲಿರುವಂತೆ ಹೊಲಿಯ, ಛಲವಾದಿ, ಮಾದಿಗ, ಭೋವಿ, ವಡ್ಡರ್, ಲಮಾಣಿ ಇತ್ಯಾದಿ ಪದಗಳನ್ನು ಬರೆಸಬೇಕೆಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ರಮೇಶ ಡಾಕುಳಗಿ ಕರೆ ನೀಡಿದರು.
ಭಾನುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ೨೨-೦೯-೨೦೨೫ ರಿಂದ ಪ್ರಾರಂಭವಾಗಲಿರುವ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲಾ ಡಾ ಬಾಬಾಸಾಹೇಬ ಅಂಬೇಡ್ಕರ್ ರವರ ಅನುಯಾಯಿಗಳು ತಮ್ಮ ಧರ್ಮ ಬೌದ್ಧ ಎಂದು ದಾಖಲಿಸುವಂತೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯಯೋಜನೆ ಕುರಿತು ಚರ್ಚೆ ಮಾಡಲು ರಾಜ್ಯದ ಎಲ್ಲಾ ಬೌದ್ಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಬೌದ್ಧ ಉಪಸಕರು, ಎಲ್ಲಾ ದಲಿತ ಸಂಘಟನೆಗಳ ನಾಯಕರು ಮತ್ತು ಸಮಸ್ತ ಸಮಾಜದ ಮುಖಂಡರು ಬಂಧು ಬಾಂಧವರ ಸಭೆಯನ್ನು ದಿನಾಂಕ ೧೩-೦೯-೨೦೨೫ ರಂದು ಬೆಂಗಳೂರು ನಾಗಸೇನ ಬುದ್ಧ ವಿಹಾರದಲ್ಲಿ ಜರುಗಿತು. ಆ ಸಭೆಯಲ್ಲಿ ರಾಜ್ಯ ದಾದ್ಯಂತ ಎಲ್ಲಾ ಡಾ. ಬಾಬಾಸಾಹೇಬ ಅಂಬೇಡ್ಕರ್ ರವರ ಅನುಯಾಯಿಗಳು ಸೇರಿದ್ದರು. ರಾಜ್ಯದದ್ಯಾಂತ ಜನಜಾಗೃತಿ ಮೂಡಿಸಲು ರಾಜ್ಯ ಮಟ್ಟದಲ್ಲಿ ಅಖಿಲ ಕರ್ನಾಟಕ ಬೌದ್ಧ ದಾಖಲಾತಿ ಅಂದೋಲನ ನಮಿತಿ ರಚಿಸಲಾಯಿತು. ದಿನಾಂಕ ೧೮-೦೯-೨೦೨೫ ರಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಜರುಗಿದ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ಸಭೆಯಲ್ಲಿ ಸಹ ಧರ್ಮ ಬೌದ್ಧ ಮತ್ತು ಜಾತಿ ಹೊಲೆಯ, ಭಲವಾದಿ ಎಂದು ದಾಖಲಿಸಲು ನಿರ್ಣಯಿಸಲಾಗಿದೆ ಎಂದವರು ತಿಳಿಸಿದರು.
ಧರ್ಮ ಕಾಲಂನಲ್ಲಿ ಬೌದ್ಧ ಎಂದು ಜಾತಿ ಹೊಲೆಯ, ಛಲವಾದಿ, ಮಾದಿಗೆ ಎಂದು ದಾಖಲಿಸಿದರೆ ದಲಿತರಿಗೆ ಪರಿಶಿಷ್ಟ ಜಾತಿಯ ಮೀಸಲಾತಿ ಸೌಲಭ್ಯಗಳು ರದ್ದಾಗುವುದಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ೧೯೯೯ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಚಂದು ಪರಿಶಿಷ್ಟ ಜಾತಿಯಿಂದ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದರೆ ಅವರ ಶೈಕ್ಷಣಿಕ, ಉದ್ಯೋಗ ಮತ್ತು ರಾಜಕೀಯ ಮೀಸಲಾತಿ ರವಾಗದೇ ಯಭಾವತ್ತಾಗಿ ಮುಂದುವರೆಯುತ್ತದೆ ಎಂದು ಆದೇಶ ಮಾಡಿದ್ದಾರೆ. ಕೇಂದ್ರ ಸರ್ಕಾರದ ಈ ಆದೇಶಕ್ಕೆ ಪೂರಕವಾಗಿ ವಿವಿಧ ರಾಜ್ಯ ಸರ್ಕಾರಗಳು ಮರು ಆದೇಶ ಹೊರಡಿಸಿ ಪರಿಶಿಷ್ಟ ಜಾತಿಯ ಬೌದ್ಧರಿಗೆ ಮೀಸಲಾತಿ ಸೌಲಭ್ಯತ್ಯ ನೀಡುತ್ತಾ ಬಂದಿದ್ದಾರೆ. ಅದಕ್ಕಾಗಿ ದಲಿತರು ಗೊಂದಲಕ್ಕೆ ಒಳಗಾಗದೆ, ಭಯ ಬಿಟ್ಟು, ತಮ್ಮ ಧರ್ಮ ಬೌದ್ಧ ಎಂಬ : ೦ ಂ ಹೊಲೆಯ, ಮಾದಿಗ ಎಂದು ಕಡ್ಡಾಯವಾಗಿ ದಾಖಲಿಸಬೇಕೆಂದು ತಿಳಿಸಿದರು.
೧೪ ಆಕ್ಟೊಬರ್ ೧೯೫೬ರಂದು ಡಾ.ಬಾಬಾಸಾಹೇಬ್ ಅವರು ಮಹಾರಾಷ್ಟçದ ನಾಗಪುರದಲ್ಲಿ ಸುಮಾರು ೫ ಲಕ್ಷ ಬೌದ್ದ ಅನುಯಾಯಿಗಳೊಂದಿಗೆ ಬೌದ್ದ ಧರ್ಮ ಸ್ವೀಕರಿಸಿದರು.
ಆ ಸಮಯದಲ್ಲಿ ಅವರು ಹೇಳಿದ್ದೆನೆಂದರೆ, ನಾನು ಹಿಂದು ಧರ್ಮದಲ್ಲಿ ಹುಟ್ಟಿದ್ದರೂ ಬೌದ್ದ ಧರ್ಮಿಯಾಗಿ ಸಾಯಲು ಇಷ್ಟಪಡುತ್ತೇನೆ. ಏಕೆಂದರೆ ಹಿಂದು ಧರ್ಮ ಸುಧಾರಿಸಲು ನಾನು ಎಷ್ಟೆ ಪ್ರಯತ್ನ ಪಟ್ಟರೂ ಅದು ಸುಧಾರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಅಂಬೇಡ್ಕರ್ ಅವರು ಹೇಳಿದಂತೆ ತಾವೆಲ್ಲರು ಬೌದ್ದ ಧರ್ಮ ಸ್ವೀಕರಿಸಿ ತಮ್ಮ ಮೀಸಲಾತಿ ಉಳಿಸಿಕೊಳ್ಳುವಂತೆ ಕರೆ ಕೊಟ್ಟರು.
ಕೇಂದ್ರ ಸರ್ಕಾರ ಇತ್ತಿಚೀಗೆ ಜಾರಿಗೊಳಿಸಿದಂತೆ ಧರ್ಮದ ಕಾಲಂನಲ್ಲಿ ಹಿಂದು, ಬೌದ್ದ, ಜೈನ, ಸಿಖ್ ಧರ್ಮ ಬರೆಸಿದರೆ ಮೀಸಲಾತಿಯಾಗಲಿ ಅಥವಾ ಇತರೆ ಸೌಲಭ್ಯಗಳಿಂದ ವಂಚಿತರಾಗುವುದಿಲ್ಲ. ಆದರೆ ಮುಸ್ಲಿಮ್ ಹಾಗೂ ಕ್ರಿಷ್ಚನ್ ಧರ್ಮಿಯರಿಗೆ ಸಂವಿಧಾನದಲ್ಲಿ ಮೀಸಲಾತಿಯಿಂದ ದೂರ ಇಡಲಾಗಿದೆ ಎಂದು ಡಾಕುಳಗಿ ಸ್ಪಷ್ಟಪಡಿಸಿದರು.
ಯತ್ನಾಳ್ ಹೇಳಿಕೆ ಬಾಲಿ±ತನದ್ದು: ಡಾಕುಳಗಿ
ವಿಜಯಪುರ ನಗರ ಶಾಸಕ ಹಾಗೂ ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ ಯತ್ನಾಳ ಅವರು ಇತ್ತಿಚೀಗೆ ದಲಿತ ಮಹಿಳೆಯೊಬ್ಬಳು ಮಾತೆ ಚಾಮುಂಡಿದೇವಿಗೆ ಪೂಜೆ ಮಾಡಲು ಬರುವುದಿಲ್ಲ ಎಂದು ಹೇಳಿಕೆ ನೀಡಿ ಇಡೀ ಮಹಿಳಾ ಕುಲ ಹಾಗೂ ದಲಿತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಇಂಥ ಬಾಲೀಶ ಹೇಳಿಕೆ ನೀಡುವ ಯತ್ನಾಳರ ಹೇಳಿಕೆ ಇಡೀ ದಲಿತ ಸಮುದಾಯವು ಖಂಡಿಸುತ್ತದೆ ಎಂದರು.
ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ತುಕಾರಾಮ ಲಾಡಕರ್ ಮಾತನಾಡಿದರು. ಪದಾಧಿಕಾರಿಗಳಾದ ರಮೇಶ ಮಂದಕನಳ್ಳಿ, ಶಿವರಾಜ ಲಾಡಕರ್, ವಿಠಲ ಲಾಡಕರ್, ರಾಜಕುಮಾರ ಚಂದನ್, ಅಂಕುಶ ಡಾಂಗೆ, ಅಂಬರೀಶ ಅತಿವಾಳ, ರವಿಂದ್ರ ಭಾಲ್ಕಿ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.























