ಸಕಲ ಇಷ್ಟಾರ್ಥಗಳನ್ನು ಪೂರೈಸುವ ಪ್ರಸನ್ನ ಗಣೇಶನನ್ನು ಪೂಜಿಸಿ: ಜಿ. ಶಂಕರ

ವಿಜಯಪುರ,ಜೂ.12: ಎಲ್ಲಾ ಕಷ್ಟ ಕಾರ್ಪಣ್ಯಗಳ ನಿವಾರಣೆಗೆ ವಿಘ್ನ ವಿನಾಶಕ ಗಣೇಶನ ಆಶೀರ್ವಾದ ಬೇಕು ಎಂದು ಧರ್ಮದರ್ಶಿ ಜಿ. ಶಂಕರ ಅವರು ಹೇಳಿದರು.
ನಗರದ ಗಣಪತಿ ದೇವಸ್ಥಾನ ರಜತ ಮೊಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನು ಬಹಳ ಕೆಳ ಹಂತದಿಂದ ಮೇಲೆ ಬಂದಿದ್ದು, ಅದಕ್ಕೆ ಈ ವಿಘ್ನೇಶ್ವರನೆ ಕಾರಣ. ಅದೇ ರೀತಿ ಯಾವುದೇ ಕೆಲಸ ಕಾರ್ಯ ಪ್ರಾರಂಭಕ್ಕೆ ಮೊದಲ ಪೂಜಿತ ವಿಘ್ನೇಶ್ವರನ ಪೂಜೆ ಮಾಡಿ ಶುಭ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಹಿಂದೂ ಧರ್ಮದ ಈ ಕಾರ್ಯವನ್ನು ಮುಂದೆಯೂ ಪರಿಪಾಲನೆ ಮಾಡುವಂತಾಗಬೇಕು ಎಂದರು.
ಡಿಎಸ್ಪಿ ಬಸವರಾಜ ಯಲಿಗಾರ ಮಾತನಾಡಿ, ನಮ್ಮ ಸಾಹಿತ್ಯ, ಸಂಸ್ಕೃತಿ, ನೆಲ, ಜಲ, ಭಾಷೆ, ಪೂಜೆ, ಪುನಸ್ಕಾರಗಳನ್ನು ನಮ್ಮ ಮುಂದಿನ ಪೀಳಿಗೆ ನಿರಂತರ ಕಾಪಾಡಿಕೊಂಡು ಹೋಗಬೇಕು. ದೇವರು ಇಲ್ಲದೇ ನಾವಿಲ್ಲ ಎನ್ನುವದನ್ನು ಮರೆಯಬಾರದು. ಈ ಸೇವೆಯು ನಿರಂತರವಾಗಿ ನಡೆಯುವಂತಾಗಲಿ. ನಾವು ಸಂಪಾದಿಸಿದ ಸಂಪತ್ತಿನಲ್ಲಿ ಕಡುಬಡವರು, ನಿಗರ್ತಿಕರಿಗೆ ನೀಡಿದಾಗ ಮಾತ್ರ ನಮಗೆ ಪುಣ್ಯ ಪ್ರಾಪ್ತಿ ಆಗುತ್ತದೆ. ಅದೇ ರೀತಿ ಜಿ.ಶಂಕರ ಅವರು ಧಾರ್ಮಿಕ ಕಾರ್ಯಗಳ ಜೊತೆಗೆ, ಮಠ. ಮಂದಿರಗಳು, ವೈದ್ಯಕೀಯ ಸೇವೆಯನ್ನು ನಿರಂತರವಾಗಿ ಮಾಡುತ್ತಾ ಸಮಾಜಕ್ಕೆ ತಮ್ಮದೇ ಆದ ಕಾಣಿಕೆಯನ್ನು ನೀಡಿದ ಮಹಾನ ವ್ಯಕ್ತಿ ಎಂದು ಕೊಂಡಾಡಿದರು.
ಈ ಸಂದರ್ಭದಲ್ಲಿ ಶಾಲಿನಿ ಜಿ. ಶಂಕರ, ಸುಕನ್ಯಾ ದಯಾನಂದ, ವಿಶ್ವನಾಥ ಬಿರಾದಾರ, ಸುನೀತಾ ಬಿರಾದಾರ, ಸುರೇಶ ಕುಂಬಾರ, ಶರಣು ಸಬರದ, ಉದಯ ಉಡುಪಿ, ಅರವಿಂದ ಕುಲಕರ್ಣಿ, ವೆಂಕಣ್ಣ ಸುಲಗದ, ಸುನೀಲ ಅಂಗಡಿ, ಜ್ಞಾನೇಶ್ವರ ಕುಲಕರ್ಣಿ, ಸಿದ್ದಣ್ಣ ಸಿಂದಿಗೇರಿ, ಚಿದಾನಂದ ಕುಂಬಾರ ಹಾಗೂ ಆಡಳಿತ ಮಂಡಳಿಯ ಸದಸ್ಯರು ಪದಾಧಿಕಾರಿಗಳು ಇದ್ದರು.