
ಲಕ್ಷ್ಮೇಶ್ವರ,ಅ೨೪: ಪ್ರಥಮ ಸ್ವಾತಂತ್ರö್ಯ ಹೋರಾಟಕ್ಕಿಂತ ಪೂರ್ವದಲ್ಲಿಯೇ ಅಂದರೆ ೧೮೨೪ ರಲ್ಲಿಯೇ ಬ್ರಿಟಿ?Àರ ವಿರುದ್ಧ ಮೊಟ್ಟಮೊದಲು ಕೆಚ್ಚೆದೆಯಿಂದ ಹೋರಾಟಕ್ಕಿಳಿಯುವ ಮೂಲಕ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಿತ್ತೂರ ಚನ್ನಮ್ಮ ನಾಂದಿ ಹಾಡಿ ಇತಿಹಾಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಕೀರ್ತಿ ಚನ್ನಮ್ಮಾಜಿಗೆ ಸಲ್ಲುತ್ತದೆ ಎಂದು ತಾಲೂಕಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಶಂಕರಣ್ಣ ರಾಗಿ ಹೇಳಿದರು.
ಅವರು ಕಿತ್ತೂರ ಚನ್ನಮ್ಮನ ಜಯಂತೋತ್ಸವ ಅಂಗವಾಗಿ ಶುಕ್ರವಾರ ಪಟ್ಟಣದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಮೂರ್ತಿಗೆ ಪೂಜೆ, ಗೌರವ ನಮನ ಸಲ್ಲಿಸಿ ಮಾತನಾಡಿದರು. ಕನ್ನಡ ನಾಡಿನ ವೀರವನಿತೆಯಾಗಿ ತನ್ನ ಅಪ್ರತಿಮ ಸಾಹಸ ಮತ್ತು ಶೌರ್ಯಗಳಿಂದ ದೇಶದ ಸ್ವಾತಂತ್ರಕ್ಕಾಗಿ ಮೆರೆದ ವೀರರಾಣಿ ಚನ್ನಮ್ಮ ನಮ್ಮೆಲ್ಲರ ಸ್ವಾಭಿಮಾನದ ಪ್ರತೀಕವಾಗಿದ್ದಾಳೆ. ನವಂಬರ ತಿಂಗಳಲ್ಲಿ ತಾಲೂಕಾ ಮಟ್ಟದಲ್ಲಿ ಕಿತ್ತೂರ ಚನ್ನಮ್ಮನ ಜಯಂತಿ ಮತ್ತು ವಿಜಯೋತ್ಸವವನ್ನು ಲಕ್ಷೆö್ಮÃಶ್ವರದಲ್ಲಿ ಅದ್ದೂರಿಯಾಗಿ ನೆರವೇರಿಸಲಾಗುವುದು ಎಂದರು.
ಈ ವೇಳೆ ಪಂಚಮಸಾಲಿ ಸಮಾಜದ ಹಿರಿಯರಾದ ಸೋಮಣ್ಣ ಡಾಣಗಲ್, ಚನ್ನಪ್ಪ ಜಗಲಿ, ಸುನೀಲ ಮಹಾಂತಶೆಟ್ಟರ, ಶಿವಾನಂದ ದೇಸಾಯಿ ಹಲವರು ಮಾತನಾಡಿದರು. ಭರಮಪ್ಪ ಕೊಡ್ಲಿ, ರಮೇಶ ದನದಮನಿ, ಮಂಜುನಾಥ ಹೊಗೆಸೊಪ್ಪಿನ, ರುದ್ರಪ್ಪ ಉಮಚಗಿ, ರಮೇಶ ಹಾಳದೋಟದ, ಮಂಜುನಾಥ ಮಾಗಡಿ, ಡಿ.ವೈ ಹುನಗುಂದ, ವಿರೂಪಾಕ್ಷ ಆದಿ, ಈರಣ್ಣ ಪೂಜಾರ, ಸುನೀಲ ಮುಳಗುಂದ, ಬಸವರಾಜ ಮೆಣಸಿನಕಾಯಿ, ಮಹಾದೇವಪ್ಪ ಅಣ್ಣಿಗೇರಿ, ಶರಣು ಗೋಡಿ, ಎಸ್.ವೈ ಪಾಟೀಲ, ಶಿವರಾಜಗೌಡ ಪಾಟೀಲ, ನಾಗರಾಜ ಪಾಟೀಲ, ಬಂಗಾರೆಪ್ಪ ಮುಳಗುಂದ, ಈರಣ್ಣ ಮುಳಗುಂದ, ಗಂಗಾಧರ ಮೆಣಸಿನಕಾಯಿ, ಅರುಣ ಮೆಕ್ಕಿ, ಮಂಜುನಾಥ ಗಡೆಪ್ಪನವರ, ಈರಣ್ಣ ಆದಿ, ರಾಜು ಕಳ್ಳಿ, ಚಂದ್ರು ಹಂಪಣ್ಣವರ, ತಿಪ್ಪಣ್ಣ ಸಂಶಿ, ತೋಟದ, ರಾಮಣ್ಣ ಗೌರಿ ಸೇರಿ ಅನೇಕರು ಹಾಜರಿದ್ದರು.





















