ಮುಧೋಳನಲ್ಲಿ ವಿಶ್ವ ಯೋಗ ದಿನಾಚರಣೆ

ಸೇಡಂ, ಜೂ,21: ತಾಲೂಕಿನ ಮುಧೋಳ ಗ್ರಾಮದಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ (ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ) ಆವರಣದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಯೋಗಾಸನಗಳನ್ನು ಮಾಡಿದರು.ಶಾಲೆಯ ಮುಖ್ಯ ಗುರುಗಳಾದ ದೇವೇಂದ್ರ ದಿಗ್ಗಾವ್ ಸಿ.ಆರ್.ಸಿ ಶರಣು ಪರಮ ಮುಧೋಳ ತಾಲೂಕ ಹೋರಾಟ ಸಮಿತಿ ಅಧ್ಯಕ್ಷರಾದ ಅಶೋಕ್ ಫಿರಂಗಿ ಮತ್ತು ಅರ್ಜನವಾಡ ಶಾಲೆಯ ಮುಖ್ಯ ಗುರುಗಳಾದ ಹಣಮರೆಡ್ಡಿ ಹಾಗೂ ಎಂ ಪಿ ಎಸ್ ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಇದ್ದರು.