
ಕಲಬುರಗಿ:ಡಿ.6: “ವಿಶ್ವ ಮಣ್ಣು ದಿನಾಚರಣೆ-2025″ಯನ್ನು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿಯಲ್ಲಿ ಆಚರಿಸಲಾಯಿತು. ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೃಷಿ ಪಂಡಿತ ಪುರಸ್ಕøತ ಪ್ರಗತಿಪರ ರೈತರಾದ ಶ್ರೀ ಮಲ್ಲಿನಾಥ ಕೊಳ್ಳೂರ, ಮೇಳಕುಂದಾ (ಬಿ) ಕಲಬುರಗಿ ರವರು ‘ಮಣ್ಣಿನಲ್ಲಿ ಹುಟ್ಟಿ ಮಣ್ಣಿಗೆ ಹೋಗುವ ಈ ಜೀವ ಮಣ್ಣನ್ನು ಕಾಪಾಡಿಕೊಂಡು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಬೇಕು ಮತ್ತು ಎರೆಗೊಬ್ಬರ ತಯಾರಿಕೆಯಿಂದ ರೈತರು ಆರ್ಥಿಕವಾಗಿ ಲಾಭಗಳಿಸಬಹುದೆಂದು ತಿಳಿಸಿದರು ಮುಂದುವರೆದು ಗೋ ಆಧಾರಿತ ಕೃಷಿಯಿಂದ ಸುಸ್ಥಿರ ಮತ್ತು ಲಾಭದಾಯಕ ಕೃಷಿ ಕೈಗೊಳ್ಳುವುದರ ಜೊತೆಗೆ ಮಣ್ಣಿನ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದೆಂದರು.
ಪ್ರಾಸ್ತಾವಿಕ ನುಡಿಯಲ್ಲಿ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿಯ ಮಣ್ಣು ವಿಜ್ಞಾನಿಯವರಾದ ಡಾ. ಶ್ರೀನಿವಾಸ ಬಿ. ವಿ, ವಿಶ್ವ ಮಣ್ಣು ದಿನಾಚರಣೆಯ ಮಹತ್ವದ ಕುರಿತು ಮಾಹಿತಿ ನೀಡಿ ಕೃಷಿಯು ನಮ್ಮ ದೇಶದ ಬೆನ್ನೆಲುಬÁದ್ದರಿಂದ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವುದು ತುಂಬಾ ಅತ್ಯವಶ್ಯಕವಾಗಿದ್ದು, ಮಣ್ಣು ಹಾಳಾಗುವುದನ್ನು ತಡೆಗಟ್ಟಲು ಮಣ್ಣಿಗೆ ಸಾವಯವ ಗೊಬ್ಬರಗಳನ್ನು ಹೆಚ್ಚು-ಹೆಚ್ಚು ಬಳಸುವುದರಿಂದ ಮಣ್ಣಿನಲ್ಲಿ ಸಾವಯವ ಪದಾರ್ಥ ಅಧಿಕಗೊಂಡು ಮಣ್ಣಿನ ಆರೋಗ್ಯ ವೃದ್ದಿಸಿ ಫಲವತ್ತತೆ ಹೆಚ್ಚಾಗುತ್ತದೆ ಜೊತೆಗೆ ಸಸ್ಯ ಪೋಷಕಾಂಶÀಗಳ ಬೇಡಿಕೆಯನ್ನು ಸಹ ಸಮರ್ಪಕವಾಗಿ ಪೂರೈಸುವುದರ ಮೂಲಕ ಅಮೂಲ್ಯ ಸಂಪತ್ತಾದ ಮಣ್ಣಿನ ಉತ್ಪಾದಕತೆಯು ಕುಗ್ಗದಂತೆ ಎಚ್ಚರವಹಿಸಿ, ಬೆಳೆ ತ್ಯಾಜ್ಯವನ್ನು ಕಾಂಪೋಷ್ಟ ರೂಪದಲ್ಲಿ ಬಳಸಿ ಮಣ್ಣಿನ ಫಲವತ್ತತೆ ಸುಧಾರಿಸಬಹುದು. ಬದಲಾಗುತ್ತಿರುವ ಹವಾಮಾನ ಸನ್ನಿವೇಶದಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆ ಅತ್ಯಗತ್ಯ ಎಂದರು.
ಕಾರ್ಯಕ್ರಮದಲ್ಲಿ ಕೃಷಿ 2ನೇ ಮ್ಯಾಡೂಲ್‍ನ ತಾಂತ್ರಿಕ ಕೈಪಿಡಿಯನ್ನು ಬಿಡುಗಡೆಗೊಳಿಸಿ, ಕೃಷಿ ಸಖಿಯರು ತಮ್ಮ ಗ್ರಾಮ ವ್ಯಾಪ್ತಿಯ ರೈತರಿಂದ ಸಂಗ್ರಹಿಸಿದ ಮಣ್ಣಿನ ಮಾದರಿಯ ವಿಶ್ಲೇಷಣಾ ಆರೋಗ್ಯ ಚೀಟಿಯನ್ನು ವಿತರಿಸಲಾಯಿತು. ಕಾರ್ಯಕ್ರಮದ ನಂತರ ಮಣ್ಣು ಮಾದರಿ ಸಂಗ್ರಹಿಸುವ ವಿಧಾನದ ಪ್ರಾತ್ಯಕ್ಷಿಕೆಯನ್ನು ಕೆವಿಕೆ ಆವರಣದಲ್ಲಿ ನಡೆಸಿ ವಿವಿಧ ಬೆಳೆಗಳ ಸಂಶೋಧನಾ ತಾಕುಗಳಿಗೆ ಭೇಟಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ.ಜಹೀರ್ ಅಹೆಮದ್, ಡಾ. ಯುಸುಪ್ ಅಲಿ ಮತ್ತು ಡಾ. ಸನ್ಮತಿ ನಾಯಕ್ ಎಟಿಎಸ್, ಕ್ಷೇತ್ರ ವ್ಯವಸ್ಥಾಪಕರಾದ ಶ್ರೀ ಮಲ್ಕಣ್ಣ, ಸಹಾಯಕರಾದ ಶ್ರೀ ನಾಗಿಂದ್ರ ಬಡದಾಳಿ ಹಾಗೂ ಸಿಬ್ಬಂದಿಯವರಾದ ಭಾಗ್ಯಶ್ರೀ, ಮಹೇಶ, ವಿಜಯಕುಮಾರ, ಸ್ವಾಮಿ, ಕೃಷಿ ಇಲಾಖೆಯ ಆತ್ಮ ಯೋಜನೆಯ ಸಂಯೋಜಕರಾದ ಶಿವರಾಯ ಮತ್ತು 70ಕ್ಕೂ ಹೆಚ್ಚು ಕೃಷಿ ಸಖಿಯರು ಪಾಲ್ಗೊಂಡಿದ್ದರು. ಡಾ. ಶ್ರೀನಿವಾಸ ಬಿ.ವಿ, ವಿಜ್ಞಾನಿ (ಮಣ್ಣು ವಿಜ್ಞಾನಿ) ಸ್ವಾಗತಿಸಿ, ನಿರೂಪಿಸಿದರೆ, ಡಾ. ಸನ್ಮತಿ ನಾಯಕ್ ವಂದಿಸಿದರು.































