Home ಜಿಲ್ಲೆ ಬೀದರ್ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿಶ್ವ ರೇಬೀಸ್ ದಿನಾಚರಣೆ

ಬೀದರ್ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿಶ್ವ ರೇಬೀಸ್ ದಿನಾಚರಣೆ

ಬೀದರ್, ಸೆ ೩೦: “ರೇಬೀಸ್ ರೋಗಮುಕ್ತ ಸಮಾಜ ನಿರ್ಮಾಣ ಮಾಡಲು ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸುವುದು ಅತ್ಯಗತ್ಯ. ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಹೆಚ್ಚು ಸೂಕ್ತ” ಎಂದು ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿಯ ಸದಸ್ಯರಾದ ಬಸವರಾಜ್ ಭತಮುರ್ಗೆ ಅವರು ಹೇಳಿದರು.

ಬೀದರ್ ಪಶುವೈದ್ಯಕೀಯ ಮಹಾವಿದ್ಯಾಲಯದ (ವಿ.ಸಿ.ಬಿ.) ಆರೋಗ್ಯ ಕೇಂದ್ರ, ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘ (ಅಲುಮ್ನಿ ಅಸೋಸಿಯೇಷನ್) ಹಾಗೂ ಹೈದರಾಬಾದ್‌ನ ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್ ಇವುಗಳ ಜಂಟಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ೨೦ನೇ “ವಿಶ್ವ ರೇಬೀಸ್ ದಿನ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಫ್ರೆಂಚ್ ವಿಜ್ಞಾನಿ ಲೂಯಿ ಪಾಶ್ಚರ್ ಅವರ ಪುಣ್ಯಸ್ಮರಣೆಯ ಅಂಗವಾಗಿ ರೇಬೀಸ್ ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಕುರಿತು ವಿದ್ಯಾರ್ಥಿಗಳು, ವೃತ್ತಿಪರರು, ಬೋಧಕ ಸಿಬ್ಬಂದಿ, ಸಾಕುಪ್ರಾಣಿಗಳ ಮಾಲೀಕರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರಮುಖ ಮೂರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ರೇಬೀಸ್ ರೋಗ ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಅಪಾಯ ಎದುರಿಸುವ (ಹೈ-ರಿಸ್ಕ್) ಗುಂಪಿನಲ್ಲಿರುವ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗೆ ಉಚಿತ ರೇಬೀಸ್ ಮುನ್ನೆಚ್ಚರಿಕಾ ಲಸಿಕೆಯನ್ನು ನೀಡಲಾಯಿತು.

ಕಾರ್ಯಕ್ರಮದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಎಸ್‌ಆರ್‌ಡಿಡಿಎಲ್ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾದ ಡಾ. ಶಿವರಾಜ್ ಮುರಗ್ ಅವರು ಮಾತನಾಡಿ, ಪ್ರಸಕ್ತ ಸಾಲಿನ ವಿಶ್ವ ರೇಬೀಸ್ ದಿನದ ಘೋಷವಾಕ್ಯ (ಥೀಮ್) “ಒಟ್ಟಾಗಿ ಶ್ರಮಿಸೋಣ, ರೇಬೀಸ್ ಗೆಲ್ಲೋಣ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಡೀನ್ ಡಾ.ಎಂ.ಕೆ. ತಾಂಡಲೆ ಅವರು, “ಪ್ರಾಣಿಗಳಲ್ಲಿ ರೇಬೀಸ್ ರೋಗವನ್ನು ತಡೆಗಟ್ಟುವುದರ ಮೂಲಕ ಮಾತ್ರ ಮಾನವರಲ್ಲಿ ಈ ರೋಗ ಹರಡುವುದನ್ನು ತಡೆಯಲು ಸಾಧ್ಯ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಮತ್ತು ಒಗ್ಗಟ್ಟಿನ ಕೆಲಸ ಅತ್ಯಗತ್ಯ” ಎಂದು ಒತ್ತು ನೀಡಿದರು.

ಕರ್ನಾಟಕ ಪಶುವೈದ್ಯಕೀಯ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿ (ಃಔಒ) ಸದಸ್ಯರಾದ ವಿಜಯಕುಮಾರ್ ಪಾಟೀಲ್ ಅವರು ಮಾತನಾಡಿ, ದಕ್ಷಿಣ ಭಾರತದಾದ್ಯಂತ ಅಗತ್ಯವಿರುವ ಲಸಿಕೆ ಪೂರೈಕೆ ಮಾಡುವಲ್ಲಿ ಬೆಂಗಳೂರಿನ ಐ.ಎ.ಹೆಚ್. ಮತ್ತು ವಿ.ಬಿ. (Iಂಊ&ಗಿಃ) ಸಂಸ್ಥೆಯು ವಹಿಸುತ್ತಿರುವ ಪ್ರಮುಖ ಪಾತ್ರವನ್ನು ಪ್ರಶಂಸಿಸಿದರು.
ಈ ವಿಚಾರ ಸಂಕಿರಣದಲ್ಲಿ ೮೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಬೀದರ್ ಪಶುವೈದ್ಯಕೀಯ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ (ಂಟumಟಿi ಂssoಛಿiಚಿಣioಟಿ) ವತಿಯಿಂದ ಸಂಪನ್ಮೂಲ ವಿಜ್ಞಾನಿ ಡಾ. ಶಿವರಾಜ್ ಮುರಗ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಬೀದರ್ ಪಶುವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರಿನ ಐ.ಎ.ಹೆಚ್. ಮತ್ತು ವಿ.ಬಿ. (Iಂಊ&ಗಿಃ) ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಜಂಟಿ ಆಶ್ರಯದಲ್ಲಿ ಸಾಕುಪ್ರಾಣಿಗಳಿಗೆ ಉಚಿತ ರೇಬೀಸ್ ನಿರೋಧಕ ಲಸಿಕಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಈ ಲಸಿಕಾ ಅಭಿಯಾನದಲ್ಲಿ ಒಟ್ಟು ೧೧೧ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗೆ ೦, ೭ ಮತ್ತು ೨೧ ದಿನಗಳ ವೇಳಾಪಟ್ಟಿಯ ಅನುಸಾರ ನೀಡಲಾಗುವ ಲಸಿಕೆಯ ಮೊದಲ ಡೋಸ್ (೧sಣ ಆose) ಅನ್ನು ಉಚಿತವಾಗಿ ನೀಡಲಾಯಿತು. ಅಲ್ಲದೆ, ಈ ಶಿಬಿರದಲ್ಲಿ ಸಾರ್ವಜನಿಕರ ೪೦ಕ್ಕೂ ಹೆಚ್ಚು ಸಾಕುಪ್ರಾಣಿಗಳಿಗೂ ಉಚಿತವಾಗಿ ರೇಬೀಸ್ ನಿರೋಧಕ ಲಸಿಕೆಯನ್ನು ಹಾಕಲಾಯಿತು.

ಮಹಾವಿದ್ಯಾಲಯದ ಸಂಘಟನಾ ತಂಡದ ಪ್ರಮುಖರಾದ ಡಾ. ಎಂ. ಕೆ. ತಾಂಡಲೆ, ಡಾ. ಮಲ್ಲಿನಾಥ್ ಕೆ. ಸಿ., ಡಾ. ಭಗವಂತಪ್ಪ ಬಿ., ಡಾ. ಶೇಷರಾವ್, ಡಾ. ವೆಂಕನಗೌಡ ಟಿ., ಡಾ. ರೂಪಾಲಿ ಹಾಗೂ ವೈದ್ಯಾಧಿಕಾರಿ ಡಾ. ಶಹಮೀರ್ ಫಾತಿಮಾ ಅವರು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು.