Home ಜಿಲ್ಲೆ ಕಲಬುರಗಿ ವಿಶ್ವ ಓಝೋನ ದಿನಾಚರಣೆ

ವಿಶ್ವ ಓಝೋನ ದಿನಾಚರಣೆ

ಕಲಬುರಗಿ:ಮನೆಯಲ್ಲಿ ರೆಪ್ರಿಜೆರೇಟರ್ ದಿಂದ ಬರುವ ಕಿರಣ, ಪ್ಲಾಸ್ಟಿಕ ಬಳಕೆ, ವಾಹನಗಳ ಹೊಗೆಗಳಿಂದ ಓಝೋನ ಪದರಕ್ಕೆ ಹಾನಿಯಾಗುತ್ತದೆ. ಓಝೋನ ಪದರ ಹಾನಿಯಾದರೆ ಸೂರ್ಯನ ಕಿರಣಗಳು ನೇರವಾಗಿ ಭೂಮಿಯ ಮೇಲೆ ಬರುವದರಿಂದ ಉಷ್ಣತೆ ಹೆಚ್ಚಾಗಿ ಮಾನವನಿಗೆ ಸಂಕಷ್ಟ ಎದುರಾಗುತ್ತದೆ. ಆದ್ದರಿಂದ ಪ್ಲಾಸ್ಟಿಕ ಸಂಪೂರ್ಣ ಕಡಿಮೆಯಾದರೆ ಓಝೋನ ಪದರ ರಕ್ಷಣೆ ಸಾಧ್ಯ ಎಂದು ವೇದಿಕೆಯ ಅಧ್ಯಕ್ಷ ಶ್ರೀನಿವಾಸರಾವ ಕುಲಕರ್ಣಿ ಹೇಳಿದರು. ನಗರದ ವರ್ಧಾ ನಗರ ನಿವಾಸದಲ್ಲಿ ಸಮಾನ ಮನಸ್ಕರ ಕನ್ನಡಿಗರ ವೇದಿಕೆಯಿಂದ ವಿಶ್ವ ಓಝೋನ ದಿನಾಚರಣೆ ಆಚರಿಸಲಾಯಿತು. ಕೇದಾರ ದಿಕ್ಸಿತ ಮತ್ತು ಪ್ರಕಾಶ ಚವ್ಹಾಣ ಉಪನ್ಯಾಸಕರು ಮಾತನಾಡಿದರು.
ಕಾರ್ಯಕ್ರಮದಲ್ಲಿ ದಿನಕರ್‍ರಾವ ಕುಲಕರ್ಣಿ, ಶಶಿಕಾಂತ ಕುಲಕರ್ಣಿ, ವಾಸು ಪೂಜಾರಿ, ಎಸ್.ವಿ ಹಿರೇಮಠ, ವಿ.ಎಸ್ ಹಿರೇಮಠ, ಸಂಕೇತ ಕುಲಕರ್ಣಿ, ಸಂತೋಷ ಕುಲಕರ್ಣಿ, ವಿಜಯಲಕ್ಷ್ಮೀ ಕುಲಕರ್ಣಿ, ವಾಮನ ಮೂಲಿ, ರಾಜೇಂದ್ರ ಎಸ್., ಕೃಷ್ಣಾ ಕುಲಕರ್ಣಿ, ಜಿ.ಎನ್. ನಾಯಕ, ಆನಂದ ಕುಲಕರ್ಣಿ ಉಪಸ್ಥಿತರಿದ್ದರು.