
ವಿಜಯಪುರ:ಮೇ.೨: ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ವಿವಿಧ ಕಾರ್ಮಿಕರಾದ ಮಹೇಶ ದೊಡಮನಿ, ಸಮಿಯುಲ್ಲಾ ಕಾಖಂಡಕಿ, ಮಹಾಂತೇಶ ಗಚ್ಚಿನಮನಿ, ಮಹೆಂದ್ರ ಸರಸಂಗಿ, ಸಲೀಮ ಸೌದಾಗರ ಹೀಗೆ ಅನೇಕರಿಗೆ ಸನ್ಮಾನಿಸುವದರೊಂದಿಗೆ ವಿಶ್ವ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ವೈಜನಾಥ ಕರ್ಪೂರಮಠ ಮಾತನಾಡಿ ವಿಶ್ವ ಕಾರ್ಮಿಕರ ದಿನದಂದು ಜಗತ್ತಿನ ಎಲ್ಲಾ ಜೀವಚರಗಳು ಒಂದಲ್ಲ ಒಂದು ರೀತಿಯಲ್ಲಿ ಕಾರ್ಮಿಕರೇ ಎಂಬ ಭಾವದೊಂದಿಗೆ ನಾವು ಇಂದು ವಿಶ್ವಕಾರ್ಮಿಕ ದಿನಾಚರಣೆಯನ್ನು ಆಚರಿಸುತ್ತಾ ಇದ್ದೇವೆ. ಕಾರ್ಮಿಕರು ಎಂದರೆ ಇಂದು ನಮ್ಮನ್ನು ಮನೆ ಕಟ್ಟಿ ಸಂತೋಷದಿAದ ಮನೆಯಲ್ಲಿ ಐಷಾರಾಮಿ ಇರಲು ಬೆವಸುರಿಸುವ ಕಾರ್ಮಿಕರು, ಹೋಟೇಲ್ದಲ್ಲಿ ಕೆಲಸ ಮಾಡಿ ನಮ್ಮನ್ನು ಬಿಸಿ ಬಿಸಿ ಆಹಾರ ಕೊಡುವುದು, ನಾವು ಉಪಯೋಗಿಸುವ ವಾಹನ ಕಾರ್ಮಿಕರು, ಅಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ನಮ್ಮನ್ನು ರಕ್ಷಿಸುವ ಕಾರ್ಮಿಕರು, ರೇಲ್ವೆ, ಬೀಡಿ ಕಟ್ಟುವುದು, ಸೀರೆ ನೇಯುವುದು, ಇಟ್ಟಿಗೆ ತಯಾರಿಸುವವವರು, ಪತ್ರಿಕಾ ಮಾಧ್ಯಮದಲ್ಲಿ ಸೇವೆ ಸಲ್ಲಿಸಿ ರಾ಼ಷ್ಟç ನಿರ್ಮಾಣಕ್ಕಾಗಿ ಮಾರ್ಗದರ್ಶನ ಮಾಡುವ ಪತ್ರಿಕಾ ಮಾಧ್ಯಮ, ಪೌರ ಕಾರ್ಮಿಕರು ಹೀಗೆ ಅನೇಕ ರೀತಿಯಲ್ಲಿ ಸೇವೆ ಸಲ್ಲಿಸಿ ಸೇವಾ ಕಾರ್ಯ ಮಾಡುತ್ತಿರುವ ಕಾರ್ಮಿಕರ ಸುಖ ಸಂತೋಷಕ್ಕಾಗಿ ಪ್ರಾರ್ಥನೆ ಮಾಡಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಕಾಂಗ್ರೆಸ್ ಮುಖಂಡರಾದ ಎಫ್. ಎಚ್. ಅಂಕಲಗಿ ವಕೀಲರು, ವಿದ್ಯಾವತಿ ಅಂಕಲಗಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಎಂ. ಎಂ. ಮುಲ್ಲಾ, ವಸಂತ ಹೊನಮೋಡೆ, ದೇಸು ಚವ್ಹಾಣ, ವಿಜಯಪುರ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಮೀರ ಬಕ್ಷಿ, ಜಿಲ್ಲಾ ಯುವ ಮಜ್ದುರ ಕಾರ್ಮಿಕ ಘಟಕದ ಅಧ್ಯಕ್ಷರಾದ ಅಬ್ದುಲಪೀರಾಂ ಜಮಖಂಡಿ, ಜಿಲ್ಲಾ ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷರಾದ ಹನೀಫ ಮಕಾಂದಾರ, ಶರಣಪ್ಪ ಯಕ್ಕುಂಡಿ, ಅಬುಬಕರ ಕಂಬಾಗಿ, ಖ್ವಾಜಾ ಆರ್. ಬಾಗವಾನ, ಅಸಂಘಟಿತ ಕಾರ್ಮಿಕ ರಾಜ್ಯ ಕಾರ್ಯದರ್ಶಿಗಳಾದ ರಜಾಕಸಾಬ ಕಾಖಂಡಕಿ, ರಾಜ್ಯ ಒ.ಬಿ.ಸಿ. ವಿಭಾಗದ ಕಾಐðದರ್ಶಿಗಳಾದ ಸತೀಶ ಅಡವಿ, ಶಿಡ್ಲಪ್ಪ ತಳಗೇರಿ, ಬಾಬಾಜಾನ ಬಾಗವಾನ, ಶರಣಕುಮಾರ ಹೊನಮೋಡೆ, ಲುಕ್ಮಾನ ಮುಲ್ಲಾ, ನತೀಬಶರೀಫ ಮುಲ್ಲಾ ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.


























