Home ಜಿಲ್ಲೆ ಕಲಬುರಗಿ ವಿಶ್ವ ಆಹಾರ ದಿನಾಚರಣೆ: ಸುಸ್ಥಿರ ಕೃಷಿ, ಮಣ್ಣಿನ ಆರೋಗ್ಯ ಹಾಗೂ ಪೌಷ್ಟಿಕ ಆಹಾರ ಉತ್ಪಾದನೆಗೆ ಒತ್ತು

ವಿಶ್ವ ಆಹಾರ ದಿನಾಚರಣೆ: ಸುಸ್ಥಿರ ಕೃಷಿ, ಮಣ್ಣಿನ ಆರೋಗ್ಯ ಹಾಗೂ ಪೌಷ್ಟಿಕ ಆಹಾರ ಉತ್ಪಾದನೆಗೆ ಒತ್ತು

ರದ್ದೇವಾಡ್ಗಿ: ಅ 16::ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ-2 ರದ್ದೇವಾಡ್ಗಿ ಮತ್ತು ಶ್ರೀ. ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಜೇವರ್ಗಿ ಸಂಯೋಗದೊಂದಿಗೆ ವಿಶ್ವ ಆಹಾರ ದಿನಾಚರೆಣೆಯನ್ನಯ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವಂತಹ ಕೆವಿಕೆ ಯ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು ಡಾ. ಪಿ. ವಾಸುದೇವ್ ನಾಯ್ಕ್ ಗುಣಮಟ್ಟದ ಆಹಾರ, ಪೌಷ್ಟಿಕ ಭದ್ರತೆ, ಮಹಿಳೆಯರ ಆರೋಗ್ಯ ಮತ್ತು ಸುಸ್ಥಿರ ಆಹಾರ ಉತ್ಪಾದನೆಯ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೇವಲ ಆಹಾರ ಉತ್ಪಾದನೆಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಗುಣಮಟ್ಟದ, ಸುರಕ್ಷಿತ ಹಾಗೂ ಪೌಷ್ಟಿಕಾಂಶಯುಕ್ತ ಆಹಾರವನ್ನು ಉತ್ಪಾದಿಸಿ ಸೆವಿಸುವುದು ಅತ್ಯಂತ ಅಗತ್ಯವಾಗಿದೆ. ಮತ್ತು ಮೆನೆಯಂಗಳದಲ್ಲಿ ಪೌಷ್ಟಿಕ ತೋಟಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ರಾಸಾಯನಿಕ ಮುಕ್ತ ಆಹಾರ ಉತ್ಪಾದನೆಗೆ ಆದ್ಯತೆ ನೀಡುವ ಮೂಲಕ ಆರೋಗ್ಯಕರ ಜೀವನಶ್ಯಲಿಯನ್ನಯ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಶ್ರೀಮತಿ ಫರ್ಜಾನ ಎಮ್ ಕೋರಬು, ಹಿರಿಯ ತಾಂತ್ರಿಕ ಅಧಿಕಾರಿಗಳು(ಮಣ್ಣು ವಿಜ್ಞಾನ), ದೈನೆಂದಿನ ಆಹಾರದಲ್ಲಿ ಆಹಾರ ಸಮತೋಲನವನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದ್ದು, ಸಿರಿದಾನ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಅಲ್ಲದೆ, ಆರೋಗ್ಯಕರ ಆಹಾರ ಉತಪಾದನೆಗೆ ಮಣ್ಣಿನ ಆರೋಗ್ಯವೇ ಮೂಲಾದಾರವಾಗಿದ್ದು, ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಸಾವಯುವ ಗೊಬ್ಬರ, ಹಸಿರೆಲೆ ಗೊಬ್ಬರ ಹಾಗೂ ಪರಿಸರ ಸ್ನೇಹಿ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ವಿಷಮುಕ್ತ ಆಹಾ ಉತಪಾದನೆಗೆ ಆದ್ಯತೆ ನೀಡಲು ತಿಳಿಸಿದರು.
ಕಾರ್ಯಕ್ರಮದಲ್ಲಿ Sಏಆಉಙಖಿ ರಿeತಿಚಿಡಿgi ಯ ಜಿಲ್ಲಾ ನಿರ್ದೇಶಕರು ವಸಂತ ಬಿ. ಗೌಡ, ಮಾಲ್ತೇಶ, ತಾಲೂಕ ಕ್ಷೇತ್ರ ಯೋಜನಾಧಿಕಾರಿ Sಏಆಉಙಖಿ, ಶ್ರೀ. ರಾಜಹುಲಿ, ತಾಲೂಕ ಕಷಿ ಮೇಲ್ವೀಚಾರಕರು, ಹಾಗೂ ಕೆವೆಕೆ ಉ ಸಿಬ್ಬಂದಿಗಳು ಸೇರಿ ಒಟ್ಟು 40 ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೋಂಡಿದ್ದರು. ಹಾಗೂ ಎಲ್ಲಾ ರೈತ ಮಹಿಳೆಯರಿಗೆ, ಕೆವಿಕೆ ವತಿಯಿಂದ ಪೌಷ್ಟಿಕ ಆಹಾರ ಕಿಟ್ ನೀಡಲಾಯಿತು.