ವಿಶ್ವ ಪರಿಸರ ದಿನಾಚರಣೆ

ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.೭:ನಗರದ ಸಂಜೀವಿನಿ ವಿದ್ಯಾವರ್ಧಕ ಸಂಸ್ಥೆ ಮತ್ತು ರೋಟರಿ ಕ್ಲಬ್ ಆಫ್ ವಿಜಯಪುರ ಉತ್ತರ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ನಿವೃತ್ತ ಜಿಲ್ಲಾ ಪರಿಸರಾಧಿಕಾರ ಎಂ.ಎ. ಮನಿಯಾರ ಅವರು ಮಾತನಾಡಿ, ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವತ್ತ ಗಮನಹರಿಸಬೇಕು. ಪ್ಲಾಸ್ಟಿಕ ಮಾಲಿನ್ಯವನ್ನು ತೊಡೆದುಹಾಕುವುದು ಹವಾಮಾನ ಕ್ರಮ, ಸುಸ್ಥಿರ ಉತ್ಪಾದನೆ ಮತ್ತು ಬಳಕೆ, ಸಮುದ್ರಗಳು ಮತ್ತು ಸಾಗರಗಳ ರಕ್ಷಣೆ ಮತ್ತು ಪರಿಸರ ವ್ಯವಸ್ಥೆಗಳನ್ನು ದುರಸ್ತಿ ಮಾಡುವುದು ಮತ್ತು ಜೀವ ವೈವಿಧ್ಯತೆಯನ್ನು ಉಳಿಸಿಕೊಳ್ಲಬೇಕೆಂದು ಸಂಜೀವಿನಿ ಫಾರ್ಮಸಿ, ನರ್ಸಿಂಗ್, ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಂಸ್ಥೆಯ ಸಂಸ್ಥಾಪಕ ಬಸವರಾಜ ಸೊನ್ನದ, ಅಧ್ಯಕ್ಷ ಸಿದ್ದು ಸೊನ್ನದ, ಡಾ. ಮೀನಾಕ್ಷಿ ಸೊನ್ನದ, ನರ್ಸಿಂಗ್ ಪ್ರಾಚಾರ್ಯ ಪ್ರೊಫೆಸರ್ ಆನಂದ ಹೇರಲಗಿ, ರೋಟರಿ ಕ್ಲಬ್ಬಿನ ಕಾರ್ಯದರ್ಶಿ ಡಾ. ಶ್ರೀಪಾದ ಕುಲಕರ್ಣಿ, ರವಿ ಶಿಲೇದಾರ, ಅಶ್ವಿನಿ ಶಿಲೇದಾರ, ಉದಯ ಯಳವಾರ, ಡಾ. ರಾಘವೇಂದ್ರ ಇಜೇರಿ ಹಾಗೂ ಕಾಲೇಜಿನ ಎಲ್ಲಾ ಸಿಬ್ಬಂದಿ ಉಪಸ್ಥಿತರಿದ್ದರು.