ವಿಕಾಸ ಅಕಾಡೆಮಿ, ಜ್ಞಾನಸಿಂಚನ ಕಾಲೇಜಿನಲ್ಲಿ ವಿಶ್ವಪರಿಸರ ದಿನಾಚರಣೆ

ಕಲಬುರಗಿ,ಜೂ.೫- ವಿಕಾಸ ಅಕಾಡೆಮಿ ಕಲಬುರಗಿ ಹಾಗೂ ಜ್ಞಾನಸಿಂಚನ ಪದವಿಪೂರ್ವ ಕಾಲೇಜು, ಕಲಬುರಗಿ ವತಿಯಿಂದ ಇಂದು ವಿಶ್ವಪರಿಸರ ದಿನವನ್ನು ಜ್ಞಾನಸಿಂಚನ ಪದವಿಪೂರ್ವ ಕಾಲೇಜು ಆವರಣದಲ್ಲಿ ಆಚರಿಸಲಾಯಿತು.
ವಿಕಾಸ ಅಕಾಡೆಮಿ, ಕಲಬುರಗಿಯ ವಿಶ್ವಸ್ಥರು ಹಾಗೂ ಕಾರ್ಯನಿರ್ವಾಹಕ ವ್ಯವಸ್ಥಾಪಕರಾದ ಮಾರ್ತಂಡ ಶಾಸ್ತಿç, ವಿಕಾಸ ಅಕಾಡೆಮಿಯ ಕೃಷಿ ಪ್ರಮುಖರಾದ ವ್ಹಿ. ಶಾಂತರೆಡ್ಡಿ, ನಿವೃತ್ತ ಜಿಲ್ಲಾ ವಿಜ್ಞಾನ ಅಧಿಕಾರಿಗಳಾದ ಸಿ.ಎನ್.ಲಕ್ಷಿö್ಮÃನಾರಾಯಣ, ಜ್ಞಾನಸಿಂಚನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ ಹಾಗೂ ಕಾಲೇಜಿನ ಮತ್ತು ವಿಕಾಸ ಅಕಾಡೆಮಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಳೆದ ೧೯೭೨ ಇಸವಿಯಲ್ಲಿ ಸ್ಟಾಕ್‌ಹೋಮ್‌ನಲ್ಲಿ ಜರುಗಿದ ಅಂತಾರಾಷ್ಟಿçÃಯ ಸಮ್ಮೇಳನದಲ್ಲಿ ೧೭೧ ದೇಶದ ಪ್ರಮುಖರು ವಿಶ್ವದ ಪರಿಸರದಲ್ಲಿ ಆಗಿರುವ ಏರುಪೇರು ಕುರಿತು ಚರ್ಚಿಸಿದರು. ಪರಿಸರವನ್ನು ಉಳಿಸಲು ಹಲವಾರು ನಿರ್ಣಯಗಳನ್ನು ಕೈಗೊಂಡರು. ಅದರಂತೆ ೧೯೭೩ ಜೂನ್ ೫ರಿಂದ ವಿಶ್ವಪರಿಸರ ದಿನಾಚರಣೆಯನ್ನು ಒಂದು ಘೋಷವಾಕ್ಯದ ಮೂಲಕ ಆಚರಿಸಬೇಕು ಎಂದು ವಿಶ್ವಸಂಸ್ಥೆಯ ಅಧೀನ ಘಟಕವಾದ ಯುಎನ್‌ಇಪಿ ಯು ನಿರ್ಣಯಿಸಿತು. ಈ ಹಿನ್ನೆಲೆಯಲ್ಲಿ ೨೦೨೫ರ ಘೋಷವಾಕ್ಯ ‘ಪ್ಲಾಸ್ಟಿಕ್
ಮಾಲಿನ್ಯಕ್ಕೆ ಅಂತ್ಯಹಾಡಿ’ ಎಂಬುದಾಗಿದೆ. ಎಲ್ಲರೂ ತಮ್ಮ ನಿತ್ಯ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಣ ಮಾಡುವುದರೊಂದಿಗೆ ಪರಿಸರದ ಉಳಿವಿಗೆ ಬೇಕಾದ ಎಲ್ಲ ಕಾರ್ಯವನ್ನು ಮಾಡಬೇಕೆಂಬ ಕರೆಯನ್ನು ಸಿ.ಎನ್. ಲಕ್ಷಿö್ಮÃನಾರಾಯಣ ರವರು ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ತಿಳಿಸಿದರು. ಎಲ್ಲರೂ ಪರಿಸರವನ್ನು ಕಾಪಾಡಿ, ಉಳಿಸಿ ಬೆಳೆಸಿ, ಮುಂದಿನ ಪೀಳಿಗೆಗೆ ನೀಡಬೇಕು ಎಂಬ ಕರೆಯನ್ನು ಮಾರ್ತಂಡ ಶಾಸ್ತಿçಯವರು ನೀಡಿದರು. ಶ್ರೀಮತಿ ಅಂಬಿಕಾ ಎಸ್. ಶೆಳ್ಳಗಿ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲರು ವಂದಿಸಿದರು.