Home ಜಿಲ್ಲೆ ಅಲಿಯಂಬರದಲ್ಲಿ ವಿಶ್ವ ಪರಿಸರ ದಿನಾಚರಣೆ

ಅಲಿಯಂಬರದಲ್ಲಿ ವಿಶ್ವ ಪರಿಸರ ದಿನಾಚರಣೆ

ಬೀದರ್, ಜೂ. 6: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಮಾಣಿಕ ಯುವ ಸಾಂಸ್ಕøತಿಕ ಕಲಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಪರಿಸರ ಸಂರಕ್ಷಣೆಯ ಮಹತ್ವ ಸಾರುವ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಪರಿಸರ ರಕ್ಷಣೆ, ವೃಕ್ಷಾರೋಪಣೆಯ ಅಗತ್ಯತೆ ಹಾಗೂ ಪ್ರಕೃತಿ ಸಂಪತ್ತಿನ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಮಂಗಲಾ ಮರಕಲೆ, ಸಂಸ್ಥೆಯ ಗೀತಾ ಹಾಲ್ಕೊಡೆ, ಅಂಬಿಕಾ ಹಾಲ್ಕೊಡೆ, ಸಿದ್ದಮ್ಮ ಹಾಲ್ಕೊಡೆ, ಗೌರಮ್ಮ, ಸಿದ್ದಮ್ಮ ಹೊಗಾರ್, ಉಮಾದೇವಿ ಸ್ವಾಮಿ, ಹೇಮಾವತಿ ಸ್ವಾಮಿ, ಮಹಾದೇವಿ ಚಿಲ್ಲಂತರು, ಆರತಿ ಮದುರಗೆ, ವೀರಶೇಟ್ಟಿ ಮದುರಗೆ, ರಾಜಪ್ಪ ಪಟ್ನೆ, ಪ್ರೀತಿ ಪಟ್ನೆ, ಜಗದೇವಿ, ಕಲ್ಲಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.
ಮಾಣಿಕ ಯುವ ಸಾಂಸ್ಕೃತಿಕ ಕಲಾ ಸಂಸ್ಥೆಯ ಅಧ್ಯಕ್ಷೆ ಭಾಗ್ಯಶ್ರೀ ಮರಕಲೆ ಸರ್ವರನ್ನು ಸ್ವಾಗತಿಸಿದರು.