ಆದರ್ಶನಗರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿಶ್ವಪರಿಸರ ದಿನ

ಕಲಬುರಗಿ,ಜೂ.೨೯: ಇಲ್ಲಿಯ ಆದರ್ಶ ನಗರದ ಕರ್ನಾಟಕ ಪಬ್ಲಿಕ್ ಶಾಲೆ ಯಲ್ಲಿ ವಿಶ್ವ ಪರಿಸರ ದಿನವನ್ನುಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳೀ ಪ್ರಾದೇಶಿಕ್ ಕೆಂದ್ರ ಕಲಬುರಗಿ ವತಿಯಿಂದ ಆಚರಿಸಲಾಯಿತು. ಅಫಜಲಪುರ ಸರಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯ ಡಾ.ಪ್ರಭುದೇವ್ ಎಂ ಎಸ್ ಅವರು ವಿಶ್ವ ಪರಿಸರ ದಿನಾಚರಣೆಯ ಮಹತ್ವ,ಸುಸ್ಥಿರ ಅಭಿವೃದ್ಧಿಯ ಗುರಿ,ನೀರು, ಶಕ್ತಿ ,ತ್ಯಾಜ್ಯ, ಭೂವೈವಿಧ್ಯತೆ, ಅರಣ್ಯ ನಾಶ ಹಾಗೂ ನಿರ್ವಹಣೆ ಇತ್ಯಾದಿ ಕುರಿತು ಉಪಕ್ರಮಗಳನ್ನು ವಿವರವಾಗಿ
ತಿಳಿಸುತ್ತಾ ಈ ವರ್ಷದ ಘೋಷವಾಕ್ಯ ಪ್ಲಾಸ್ಟಿಕ್ ಮಾಲಿನ್ಯ ಸೋಲಿಸಿ ಕುರಿತು ಮಾತನಾಡುತ್ತಾ ಇವತ್ತು ಪ್ಲಾಸ್ಟಿಕ್ ಸರ್ವಾಂತರ್ಯಾಮಿ ನೇರವಾಗಿ ನೀವು ಪ್ಲಾಸ್ಟಿಕ್
ಬೆಡ್ ಎಂದರೂ ನಿಮಗೆ ಗೊತ್ತಿಲ್ಲದಂತೆ ಅದು ನಿಮ್ಮ ಮನೆಯೊಳಗೆ ನುಸುಳಿ ಬಿಟ್ಟಿರುತ್ತದೆ ಪ್ಲಾಸ್ಟಿಕ್ ನಿಷೇಧಿಸಿ ಎಂದು ಎಷ್ಟೇಕೂಗಡಿದರೂ ಅದನ್ನು ನಿಷೇಧಿಸಲು ಸಾಧ್ಯವಿಲ್ಲ ಏಕ್ಕೆಂದರೆ ಅದು ಮಾರುವೇಷದಲ್ಲಿ ನಿಮ್ಮ ಸನಿಹವೇ ಇರುತ್ತದೆ. ಪ್ಲಾಸ್ಟಿಕ್
ಅನ್ನು ಸಂಪೂರ್ಣ ನಿಷೇಧಿಸುವ ಕ್ರಿಯೆಯಲ್ಲಿ ನಾವು ವಿಫಲರಾಗಿದ್ದೇವೆ ಆದರೆ ಅದನ್ನು ಪಳಗಿಸುವ ಕ್ರಿಯೆಯಲ್ಲಿ ಯಶಸ್ಸುಕಾಣುತ್ತಿದ್ದೇವೆ. ಜೈವಿಕ ಕ್ರಿಯೆಯಲ್ಲಿ ಕರಗಲಾರೆ ಎನ್ನುವ ಪ್ಲಾಸ್ಟಿಕ್ ಮೇಲೆ ಎಲ್ಲರೂ ಕೋಪ ಮಾಡಿಕೊಳ್ಳುವವರೆ ಆದರೆಪ್ರತಿಸಲ ನಿಷೇಧದ ಬಾಣ ಬಿಟ್ಟರೂ ರಕ್ತ ಬಿಜಾಸುರನಂತೆ ಪ್ಲಾಸ್ಟಿಕ್ ಬಳಕೆ ಹತ್ತಕ್ಕೆ ನೂರಾಗಿ ನೂರಕ್ಕೆ ಸಾವಿರ ಬೆಳೆಯುತ್ತಲೇಇದೆ ಇದ್ದಕ್ಕೆ ಈಗ ಈ ಘೋಷಣೆ ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಎಂದರು.
ಹಾಜರಾದ ಎಲ್ಲ ವಿದ್ಯಾರ್ಥಿಗಳಿಗೆ ಹಾಗು ಉಪಸ್ಥಿತರಿದ್ದ ಎಲ್ಲರೂ ಪರಿಸರ ಪ್ರತಿಜ್ಞೆ ನೀಡಲಾಯಿತು ನಂತರ ಸಂಸ್ಥೆಯಲ್ಲಿಪ್ಲಾಸ್ಟಿಕ್ ವೇಸ್ಟ್ ಬಾಕ್ಸ್ ಪಟ್ಟಿಗೆಗಳನ್ನು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಿAದ ನೀಡಲಾಯಿತು
ಇದಲ್ಲದೆ ಸುಮಾರು ೧೫೦ ಸಸಿಗಳನ್ನು ವಿದ್ಯಾರ್ಥಿಗಳಿಗೆ ಹಂಚಲಾಯಿತು ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ವಿಜಯಲಕ್ಷ್ಮಿ. ಅಲ್ದಿ ಅಧ್ಯಕ್ಷತೆ ವಹಿಸಿದ್ದರು.ಪ್ರತಿಮಾ ದೇವೂರ,ಶಿವಕುಮಾರ್ ಯರಗೇರಿ,ಕಾವೇರಿ ಹಾಜರಿದ್ದರು. ಸುರೇಖಾ ಜಗನ್ನಾಥ್ ನಿರೂಪಿಸಿದರು.ಲಕ್ಷ್ಮೀಬಾಯಿ ವಂದನಾರ್ಪಣೆ ಮಾಡಿದರು