ವಿಶ್ವಪರಿಸರ ದಿನಾಚರಣೆ

ಕೋಲಾರ,ಜು,೫- ತಾಲ್ಲೂಕಿನ ದಿಂಬಾ ಗೇಟ್ ಶ್ರೀ ವಿಶ್ವೇಶ್ವರಯ್ಯ ಪ್ರೌಢ ಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನಾಟಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಅಧಿಕಾರಿಗಳಾದ ರಾಮಚಂದ್ರಪ್ಪ ಸರ್ ಭಾಗವಹಿಸಿ ಪರಿಸರದ ಬಗ್ಗೆ ಗಿಡ ಮರಗಳನ್ನು ಬೆಳೆಸುವ ಬಗ್ಗೆ ಪರಿಸರವನ್ನು ಉಳಿಸುವ ಬಗ್ಗೆ ಮಾಹಿತಿ ಮಾರ್ಗದರ್ಶನವನ್ನು ನೀಡಿದರು.

ಈ ಸಂಧರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕರಾದ ಲಕ್ಷ್ಮೀದೇವಿ ಮೇಡಂ ರವರು ಸಹ ಶಿಕ್ಷಕರಾದ ಮಂಜುನಾಥ್ ಮತ್ತು ಸಹ ಶಿಕ್ಷಕರು ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೋಲಾರ ತಾಲೂಕಿನ ಮೇಲ್ವಿಚಾರಕರಾದ ಸಿದ್ದೇಶ್, ಕೃಷಿ ಮೇಲ್ವಿಚಾರಕರಾದ ಗೋವಿಂದ ನಾಯ್ಕ್, ಸೇವಾಪ್ರತಿನಿಧಿ ಅಮರಾವತಿ ,ಶಾಲೆಯ ಮಕ್ಕಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು