ವಿಶ್ವ ಪರಿಸರ ದಿನಾಚರಣೆ

ಕಾಳಗಿ :ಜೂ.6:ನಗರದ ಹಲವು ಸಂಘ ಸಂಸ್ಥೆ,ಶಾಲಾ-ಕಾಲೇಜುಗಳಲ್ಲಿ ಗುರುವಾರ ವಿಶ್ವ ಪರಿಸರ ದಿನ ಆಚರಿಸಲಾಯಿತು.

ಪಟ್ಟಣದ ಕಾಳೇಶ್ವರ ಮಹಾವಿದ್ಯಾಲಯ ಹಾಗೂ ಜೆ. ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯ ನಿಮಿತ್ಯ ಶರಣಬಸವ ವಿಶ್ವವಿದ್ಯಾಲಯ ಕಲಬುರಗಿ ಸಹಯೋಗದಲ್ಲಿ ಸಸಿಗಳನ್ನು ನೆಟ್ಟು, ನೀರೆರೆದು ಅವುಗಳನ್ನು ಪೆÇೀಷಿಸಿ ಬೆಳೆಸುವ ಸಂಕಲ್ಪ ಮಾಡಿದರು.

ಕಾಲೇಜಿನ ಪ್ರಾಚಾರ್ಯ ಅಂಬದಾಸ ಮದನೆ ಮಾತನಾಡಿ, ಪರಿಸರ ಉತ್ತಮವಾಗಿದ್ದರೆ ಆರೋಗ್ಯಕರ ಜೀವನ ಸಾಗಿಸಬಹುದು. ಪ್ರಾಣಿ, ಪಕ್ಷಿಗಳು ಸೇರಿದಂತೆ ಪ್ರತಿಯೊಂದು ಜೀವ ಸಂಕುಲ ಆಹಾರ, ಗಾಳಿ, ನೀರು ಇತರೆ ಅಗತ್ಯೆಗಳಿಗಾಗಿ ಪರಿಸರ ಅವಲಂಬಿಸಿದೆ. ಪ್ಲಾಸ್ಟಿಕ್ ಮಾಲಿನ್ಯ ದೂರವಾಗಿಸಿ ಪರಿಸರವನ್ನು ರಕ್ಷಿಸಬೇಕು ಎಂದರು.

ವ್ಯವಹಾರ ಅಧ್ಯಾಯನ ವಿಭಾಗದ ಪೆÇ್ರ. ಉದಯಕುಮಾರ ಬಿ. ಜಿ, ಆಕಾಶ ಬಿ. ಸಂಸ್ಥೆ ಅಧ್ಯಕ್ಷ ಸಂಗಪ್ಪ ಅರಣಕಲ್, ಉಪನ್ಯಾಸಕರಾದ ಖಾಸಿಂ ಅಲಿ, ಪ್ರಕಾಶ ಮಠಪತಿ, ಶಿವುಕುಮಾರ ಗುತ್ತೇದಾರ, ಡಾ. ಮೀರಾ ಡಿ.ಕೆ, ಪಲ್ಲವಿ ನಾಟಿಕಾರ್, ಈರಮ್ಮ ಮೋಘಾ, ಸಂಗೀತಾ ಬಾಮ್ಮನಿ ಇದ್ದರು.