ರ್ಯಾಂಪ್ ಯೋಜನೆಯಡಿ ಕಾರ್ಯಾಗಾರ

ಗದಗ,ಫೆ4: ಭಾರತ ಸರ್ಕಾರದ ವಿಶ್ವಬ್ಯಾಂಕ್ ನೆರವಿನೊಂದಿಗೆ ಅನುಷ್ಠಾನಗೊಳಿಸಲಾಗುತ್ತಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ(ಎಂ.ಎಸ್.ಎಂ.ಇ.) ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸಲು (ರೇಸಿಂಗ್ ಮತ್ತು ಎಕ್ಸಲರೇಟಿಂಗ್ ಎಂಎಸ್‍ಎಂಇ ಪರಫಾರಮನ್ಸ್ (ರ್ಯಾಂಪ್) ಯೋಜನೆಯಡಿಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಗದಗ ಹಾಗೂ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯನಿಕೇಶನ್ & ಅಡ್ವರ್ಟೈಜಿಂಗ್ ಲಿ.ಬೆಂಗಳೂರ ಇವರ ಸಹಯೋಗದಲ್ಲಿ ಟೆಕ್ನೊಲೊಜಿ ಕ್ಲಿನಿಕ್ ವರ್ಕ್‍ಶಾಪ್ ನ್ನು ಕೇಶವ ಕ್ಲರ್ಕ ಇನ್ ಹೊಟೇಲ್ ಮುಳಗುಂದ ನಾಕಾ ಹತ್ತಿರ ಗದಗದಲ್ಲಿ ಜರುಗಿಸಲಾಯಿತು.

ಕಾರ್ಯಾಗಾರವನ್ನು ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕರಾದ ಸಂತೋಷ. ಎಂ.ವಿ ಉದ್ಘಾಟಿಸಿದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಚೆನ್ನಬಸವರಾಜ. ವುಳ್ಳೂರ ಸಂಪನ್ವೂಲ ವ್ಯಕ್ತಿಗಳು, ಬೆಂಗಳೂರ ಇವರು ಆಹಾರ ಉತ್ಪನ್ನಗಳ ಸಂಸ್ಕರಣೆ ಕುರಿತಂತೆ ಪಿ.ಪಿ.ಟಿ ಪ್ರೆಜೆಂಟೆಷನ್ ಮೂಲಕ ಉಪನ್ಯಾಸ ನೀಡಿದರು.

ಈ ಕಾರ್ಯಾಗಾರದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪ್ರಶಾಂತ .ಪಿ. ಬಾರಿಗಿಡದ , ವೈಭವ.ಶರಣು.ಗದಗ ಮೆ:ಎಸ್.ವಿ.ಗದಗ ಶೇಂಗಾ ಕಾಳುಗಳ ರಪ್ತುದಾರರು, ಅಜಿತ. ನಾಯಕ ಉಪ ನಿರ್ದೇಶಕರು(ಗ್ರಾಕೈ), ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗ, ಜಿಲ್ಲಾ ಪಂಚಾಯತ ಗದಗ ಹಾಗೂ ಪ್ರಮುಖ ಉದ್ಯಮೆದಾರರು ಭಾಗವಹಿಸಿದ್ದರು. ಗದಗ ಜಿಲ್ಲೆಯ ಎಲ್ಲಾ ಉದ್ಯಮಿದಾರರು ಭಾಗವಹಿಸಿದ್ದರು.