ಶಾಂತಮಾರ್ಗ ಎಜುಕೇರ್ ಅಕಾಡೆಮಿಯ ಮುಖಾಂತರ ಕಾರ್ಯಾಗಾರ

ಬೀದರ್: ಜ.13:ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಯು.ಪಿ.ಎಸ್.ಸಿ, ಕೆ.ಪಿ.ಎಸ್.ಸಿ, ಬ್ಯಾಂಕಿಂಗ್, ಗ್ರೂಪ್-ಸಿ ಹಾಗೂ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ವೃತ್ತಿ ಮಾರ್ಗದರ್ಶನ ತರಬೇತಿಯನ್ನು ದಿನಾಂಕ:11-01-2026ರಂದು ಮೌಲಾನಾ ಆಜಾದ ಭವನ ಬೀದರ ಇಲ್ಲಿ ಅಲ್ಪಸಂಖ್ಯಾತರ ನಿರ್ದೇಶನಾಲಯವತಿಯಿಂದ ಶಾಂತಮಾರ್ಗ ಎಜುಕೇರ್ ಅಕಾಡೆಮಿಯ ಮುಖಾಂತರ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.
ಬೀದರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಳಿರಾಮ ಕುಶಾಲರಾವ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಯಾವುದೇ ಸ್ಪಧಾತ್ರ್ಮಕ ಪರೀಕ್ಷೆಗಳನ್ನು ಶ್ರದ್ಧಾ ಪೂರ್ವಕವಾಗಿ ನಡೆಸಿ ಉನ್ನತ ಹುದ್ದೆಗಳನ್ನು ಪಡೆದು ಉತ್ತಮ ನಾಗರೀಕ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸುವಂತೆ ಮಾರ್ಗದರ್ಶನ ನೀಡಿದರು.
ಯುಪಿಎಸ್‍ಸಿ 644 ರ್ಯಾಂಕ ಪಡೆದಿರುವ ಶಾಂತಪ್ಪಾ ಕುರುಬರ್ ಸಂಪನ್ಮೂಲ ವ್ಯಕ್ತಿಗಳಾಗಿ ಹಾಜರಾಗಿದ್ದು, ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾರ್ಗದರ್ಶನ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು.