ಆಹಾರ ಪದ್ಧತಿ, ಜೀವನ ಶೈಲಿ ಕುರಿತು ಪೊಲೀಸರಿಗೆ ಕಾರ್ಯಗಾರ

ಕೋಲಾರ, ಮೇ ೨೪- ಕೋಲಾರ ಜಿಲ್ಲಾ ಪೊಲೀಸ್ ವರಿಷಧಿಕಾರಿಗಳ ಸಭಾಂಗಣದಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಸಮತೋಲಿತ ಆಹಾರ ಪದ್ಧತಿ ಜೀವನ ಶೈಲಿಯ ಕುರಿತಾಗಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.


ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯ ನ್ಯೂಟ್ರಿಶಿಯನ್ ವಿಭಾಗದ ಸಂಪನ್ಮೂಲ ವ್ಯಕ್ತಿಗಳು ಕಾರ್ಯಗಾರವನ್ನು ನಡೆಸಿಕೊಟ್ಟರು.


ಪೊಲೀಸ್ ವರಿಷಧಿಕಾರಿ ಡಾ.ಬಿ.ನಿಖಿಲ್ ಅವರು ಮಾತನಾಡಿ ದಿನ ನಿತ್ಯದ ಕರ್ತವ್ಯಗಳು ಹಾಗೂ ಆರ್ಥಿಕ ಒತ್ತಡದ ಕೆಲಸಗಳಿಂದಾಗಿ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭವಿಷ್ಯದಲ್ಲಿ ಹಲವಾರು ರೀತಿಯ ದೈಹಿಕ ಹಾಗೂ ಮಾನಸಿಕ ತೊಂದರೆಗಳಿಗೆ ಒಳಗಾಗುವವರು ಈ ನಿಟ್ಟಿನಲ್ಲಿ ಇದರ ಜೊತೆಗೆ ತಮ್ಮ ಪ್ರೀತಿಪಾತ್ರರಿಗೂ ಕೂಡ ಕಷಗಳಿಗೆ ಗುರಿಯಾಗಿಸುವವರು ಆಗಾಗಿ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುವ ಪೊಲೀಸರು ತಮ್ಮ ವೈಯಕ್ತಿಕ ಜೀವನ ಆರೋಗ್ಯದ ಕಡೆಗೆ ಗಮನವಹಿಸಿ ಉತ್ತಮವಾದ ಆಹಾರ ಪದ್ಧತಿಗಳನ್ನೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಜಿಲ್ಲಾ ಯೋಗಕ್ಷೇಮ ಅಧಿಕಾರಿ ಲಿಂಗೇಶ್,ಶಸ್ತ್ರಾಸ್ತ್ರ ಉಪ ನಿರೀಕ್ಷಕ ಸಿದ್ದಾರೂಢ,ಮತ್ತು ನ್ಯೂಟ್ರಿಷಿಯನ್ ವಿಭಾಗದ ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.