ಜೇವರ್ಗಿ:ಸೆ.೨೪: ದುಡಿಯುವ ಕಾಯಕಯೋಗಿಗಳು ನಮ್ಮ ಪೌರ ಕಾರ್ಮಿಕರು. ಅವರು ಪಟ್ಟಣ-ಗ್ರಾಮಗಳನ್ನು ಸ್ವಚ್ಛವಾಗಿ ಇಡುವ ನಿಸ್ವಾರ್ಥ ಸೇವಕರು. ಪೌರ ಕಾರ್ಮಿಕರ ದಿನಾಚರಣೆಯನ್ನು ಒಂದು ದೊಡ್ಡ ಹಬ್ಬದಂತೆ ಆಚರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಶಂಭುಲಿAಗ ದೇಸಾಯಿ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘ ಜೇವರ್ಗಿ ಮತ್ತು ಪುರಸಭೆ ಕಚೇರಿ ಜೇವರ್ಗಿ ಅವರ ಸಂಯುಕ್ತ ಆಶ್ರಯದಲ್ಲಿ ಪೌರ ಕಾರ್ಮಿಕರ ದಿನಾಚರಣೆ ನಡೆಯಿತು.
ಈ ವೇಳೆ ದೇಸಾಯಿ ಮಾತನಾಡಿ, ಬಸವಣ್ಣರು ಹೇಳಿದಂತೆ ಕಾಯಕದಲ್ಲಿ ಕೈಲಾಸವನ್ನು ಕಾಣುವವರು ನಮ್ಮಪೌರ ಕಾರ್ಮಿಕರು. ಅವರಿಗೆ ಬಿಡುವಿಲ್ಲದೆ ಪ್ರತಿದಿನ ಕಾಯಕದಲ್ಲಿ ನಿರತರಾಗಿರುತ್ತಾರೆ. ಪೌರ ಕಾರ್ಮಿಕರಿಲ್ಲದ ಗ್ರಾಮವನ್ನು ಊಹಿಸಲು ಸಾಧ್ಯವಿಲ್ಲ. ಅವರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು, ಜನರೂ ಅವರನ್ನು ಗೌರವಿಸಬೇಕು. ಜೊತೆಗೆ ಅವರು ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿ ಮಲ್ಲಣ್ಣ ಯಲಗೋಡ, ದಾನಪ್ಪಗೌಡ ಹಳಿಮನಿ, ಸಿರಾಜುದ್ದಿನ್ ಬಡಾಗರ್, ಲಕ್ಷ್ಮಣ ದೊಡ್ಡನಿ, ಶಿವಮ್ಮ ನಂದಿ, ರಾಜಶೇಖರ್ ಅವರಾದ, ನಿಂಗಪ್ಪ ಪೂಜಾರಿ ಯoಕಪ್ಪ ಹೇಮನೂರ ಮಲ್ಲಿನಾಥ್ ಹೆಗಡೆ ಪುರಸಭೆ ಸದಸ್ಯರು, ಸಿಬ್ಬಂದಿ ಮತ್ತು ಪೌರ ಕಾರ್ಮಿಕರು ಇದ್ದರು.

























