
ಸುರಪುರ:ಫೆ.13: ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರಕಾರಕ್ಕೆ ಆಗ್ರಹಿಸಿ (ಜೆಸಿಟಿಯು) ಕೇಂದ್ರೀಯ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಪಟ್ಟಣದ ದರ್ಬಾರ ರಸ್ತೆ ಹನುಮಾನ್ ಟಾಕೀಸ್ ರಸ್ತೆ ಮಾರ್ಗವಾಗಿ ಮಹಾತ್ಮ ಗಾಂಧಿ ವೃತ್ತದವರೆಗೆ ಪ್ರತಿಭಟನೆ ಮೆರವಣಿಗೆ ನಡೆಯಿತು.
ನಂತರ ಮಹಾತ್ಮ ಗಾಂಧಿ ವೃತ್ತದಲ್ಲಿ ಬಹಿರಂಗ ಸಮಾವೇಶ ನಡೆಸಿ ಅನೇಕ ಮುಖಂಡರು ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಹೆಚ್ಚುತ್ತಿರುವ ನಿರುದ್ಯೋಗ, ಆದಿವಾಸಿ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸಿ ತಿದ್ದುಪಡಿ ಮಾಡಲಾಗುತ್ತಿದೆ, ಎಂಟು ಗಂಟೆಯ ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಿಸಲಾಗುತ್ತಿದೆ ಎಂದು, ಹೊರಗುತ್ತಿಗೆ ಆಧಾರಿತ ನೇಮಕಾತಿಗಳು, ಬ್ಯಾಂಕುಗಳು, ಸಾರ್ವಜನಿಕ ಲಾಭದಾಯಕ ಉದ್ಯಮಗಳ ಖಾಸಗೀಕರಣ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿದರು, ಅಲ್ಲದೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮುಂದುವರಿಸಬೇಕು, ಕನಿಷ್ಠ ಕೂಲಿ, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಉದ್ಯೋಗ ಭದ್ರತೆ ಸ್ಕೀಮ್ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕು, ರಸ್ತೆ ಸಾರಿಗೆ ನೌಕರರ 38 ತಿಂಗಳ ಬಾಕಿ ವೇತನ ನೀಡಬೇಕು, ನಾಲ್ಕು ವರ್ಷಕ್ಕೊಮ್ಮೆ ನಡೆಸುವ ವೇತನ ಪರಿಷ್ಕರಣೆ, ಕಟ್ಟಡ ಕಾರ್ಮಿಕರ ಬೀದಿಬದಿ ವ್ಯಾಪಾರಿಗಳ ಬದುಕಿಗಾಗಿ ಆರ್ಥಿಕ ನೀತಿ ರೂಪಿಸಬೇಕು ಎನ್ನುವುದು ಸೇರಿದಂತೆ ವಿದ್ಯುತ್ ಕಾಯ್ದೆ ತಿದ್ದುಪಡಿ ಬೀಜ ಕಾಯ್ದೆ ಭೂ ಸ್ವಾಧೀನ ಕಾಯ್ದೆ ರದ್ದುಗೊಳಿಸಬೇಕು, ಕರ್ನಾಟಕ ರಾಜ್ಯ ಸರ್ಕಾರ ಲೇಬರ್ ಕೋಡ್ ಗಳಿಗೆ ನಿಯಮಾವಳಿ ರಚಿಸಬಾರದು ಎನ್ನುವ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು.
ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿ ಗ್ರೇಡ್ ಟು ತಹಸಿಲ್ದಾರ್ ಮಲ್ಲಯ್ಯ ದಂಡು ಅವರ ಮೂಲಕ ಸಲ್ಲಿಸಿದರು.
ಎರಡು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರಿಂದ ವಾಹನಗಳ ಓಡಾಟಕ್ಕೆ ಅಡಚಣೆ ಉಂಟಾಯಿತು. ಪಿ ಐ ಉಮೇಶ್ ಎಂ ನೇತ್ರತ್ವದಲ್ಲಿ ಪೆÇಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ದೇವೇಂದ್ರಪ್ಪ ಪತ್ತಾರ, ದಾವಲಸಾಬ್ ನದಾಫ್, ತಿಮ್ಮಯ್ಯ ತಳವಾರ, ಪ್ರಕಾಶ್ ಆಲ್ಹಾಳ, ಶೈಜಾದಿ ಬೇಗಮ್, ಬಸಮ್ಮ ಆಲಾಳ, ಅಯ್ಯಪ್ಪ ಅನಸೂರ, ಹನುಮಂತರಾಯ ಮಡಿವಾಳ, ಮಲ್ಲಪ್ಪ ಹುಬ್ಬಳ್ಳಿ, ಶ್ರೀದೇವಿ ದನ್ನೂರ, ಧರ್ಮಣ್ಣ ದೊರೆ, ನಸೀಮಾ ಮುದನೂರ, ಮಂಜುಳಾ ಕಲಕೇರಿ, ರಾಧಾಬಾಯಿ ಲಕ್ಷ್ಮಿಪುರ, ಯಲ್ಲಪ್ಪ ಅರಳಗುಂಡಗಿ ಸೇರಿದಂತೆ ನೂರಾರು ಜನ ಮಹಿಳಾ ಹೋರಾಟಗಾರರು ಭಾಗವಹಿಸಿದ್ದರು.






















