
ಯಾದಗಿರಿ:ಫೆ.೨೪: ಕಾರ್ಮಿಕ ವರ್ಗದ ಹಕ್ಕುಗಳನ್ನು ಸಂರಕ್ಷಿಸುವ ಹಾಗೂ ಜೀವನಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಎಂಟು ಮಹತ್ವದ ಬೇಡಿಕೆಗಳನ್ನು ಮುಂದಿಟ್ಟುಕೊAಡು ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘಟನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ನೂರಾರು ಕಾರ್ಮಿಕರು ಸೋಮವಾರ ಙಚಿಜgiಡಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಿದರು.
ಕೈಯಲ್ಲಿ ಫಲಕಗಳನ್ನು ಹಿಡಿದು, ಘೋಷಣೆಗಳನ್ನು ಕೂಗಿ, ತಮ್ಮ ಹಕ್ಕುಗಳಿಗಾಗಿ ಒಗ್ಗಟ್ಟಿನಿಂದ ಹೋರಾಡಿದ ಕಾರ್ಮಿಕರ ಧ್ವನಿಯಿಂದ ಡಿಸಿ ಕಚೇರಿ ಆವರಣ ಪ್ರತಿಧ್ವನಿಸಿತು. “ಕಾರ್ಮಿಕರ ಹಕ್ಕುಗಳಿಗೆ ನ್ಯಾಯ ಬೇಕು”, “ಕಾನೂನುಗಳ ಪುನರ್ ಜಾರಿ ಅನಿವಾರ್ಯ” ಎಂಬ ಘೋಷಣೆಗಳು ಗಗನಮುಟ್ಟಿದವು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ಮುಖಂಡರು, ೧೯೨೩ ರಿಂದ ೧೯೯೬ರ ಅವಧಿಯಲ್ಲಿ ಕಾರ್ಮಿಕರ ರಕ್ಷಣೆಗೆ ಜಾರಿಗೊಂಡ ವಿವಿಧ ಕಾರ್ಮಿಕ ಕಾನೂನುಗಳನ್ನು ಪುನರ್ ಸ್ಥಾಪಿಸಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಉದ್ಯೋಗ ನಿಯಂತ್ರಣ ಹಾಗೂ ಸೇವಾ ಷರತ್ತುಗಳ ಕಾಯ್ದೆ, ಕಾರ್ಮಿಕರ ಕಲ್ಯಾಣ ಸೆಸ್ ಕಾಯ್ದೆ-೧೯೯೬ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದರು.
ನಿರ್ಮಾಣ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ತಿಂಗಳಿಗೆ ಕನಿಷ್ಠ ?೩೬,೦೦೦ ವೇತನ ನಿಗದಿಪಡಿಸಬೇಕು. ೬೦ ವರ್ಷ ದಾಟಿದ ಬಳಿಕ ತಿಂಗಳಿಗೆ ?೬,೦೦೦ ಪಿಂಚಣಿ ನೀಡುವ ವ್ಯವಸ್ಥೆ ಜಾರಿಗೆ ಬರಬೇಕು. ವರ್ಷಕ್ಕೆ ಕನಿಷ್ಠ ೨೫೦ ದಿನಗಳ ಉದ್ಯೋಗ ಖಾತರಿಯನ್ನು ಕಾನೂನಾತ್ಮಕವಾಗಿ ಖಚಿತಪಡಿಸಬೇಕು ಎಂದು ಆಗ್ರಹಿಸಿದರು.
ಬಿಲ್ಡರ್‌ಗಳಿಂದ ಸಂಗ್ರಹಿಸಲಾಗುವ ಸೆಸ್ ಪ್ರಮಾಣವನ್ನು ಶೇ.೨ಕ್ಕೆ ಹೆಚ್ಚಿಸಿ, ಆ ಮೊತ್ತವನ್ನು ಸಂಪೂರ್ಣವಾಗಿ ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸಬೇಕು. ಕೇಂದ್ರ ಸರ್ಕಾರವೂ ಸಮಾನ ಪ್ರಮಾಣದ ಅನುದಾನವನ್ನು ಕಲ್ಯಾಣ ಮಂಡಳಿಗೆ ನೀಡಬೇಕು ಎಂದು ಒತ್ತಾಯಿಸಿದರು. ನಿರ್ಮಾಣ ವಲಯದ ಮಹಿಳಾ ಕಾರ್ಮಿಕರಿಗೆ ಆರು ತಿಂಗಳ ವೇತನ ಸಹಿತ ಹೆರಿಗೆ ರಜೆ ನೀಡುವ ಮೂಲಕ ಲಿಂಗ ಸಮಾನತೆ ಮತ್ತು ಸಾಮಾಜಿಕ ಭದ್ರತೆಯನ್ನು ಖಚಿತಪಡಿಸಬೇಕೆಂದು ತಿಳಿಸಿದರು.
ಮನೆ ನಿವೇಶನ ಹೊಂದಿರುವ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ ವಿಶೇಷ ಧನಸಹಾಯ ನೀಡಬೇಕು. ನಿವೇಶನವಿಲ್ಲದ ಕಾರ್ಮಿಕರಿಗೆ ಸರ್ಕಾರದ ವಸತಿ ಯೋಜನೆಗಳಡಿ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಬೇಕು. ರಾಜ್ಯ ಸರ್ಕಾರ ಎನ್‌ಜಿಒಗಳಿಗೆ ನೀಡಿರುವ ಸಂಚಾರಿ ನೋಂದಣಿ, ನವೀಕರಣ ಹಾಗೂ ಪರಿಶೀಲನೆ ಅಧಿಕಾರವನ್ನು ರದ್ದುಗೊಳಿಸಿ, ಅದನ್ನು ಮರುಬಾರಿಗೆ ಕಾರ್ಮಿಕ ಇಲಾಖೆಯ ಅಧೀನಕ್ಕೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ನಂತರ ಕಾರ್ಮಿಕರ ನಿಯೋಗವು ಜಿಲ್ಲಾಧಿಕಾರಿ ಊಚಿಡಿshಚಿಟ ಃoಥಿeಡಿ ಅವರಿಗೆ ಮನವಿ ಪತ್ರ ಸಲ್ಲಿಸಿ ತ್ವರಿತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು
ಸಂಘಟನೆಯ ಮುಖಂಡರು ಸರ್ಕಾರ ಬೇಡಿಕೆಗಳನ್ನು ಈಡೇರಿಸಲು ವಿಳಂಬ ಮಾಡಿದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ದೇವೇಂದ್ರಪ್ಪ ಪತ್ತಾರ, ತಿಮ್ಮಯ್ಯ, ಚಾಂದಾಪಾಷಾ, ಚಂದ್ರಪ್ಪ ಸೇರಿದಂತೆ ಅನೇಕ ಕಾರ್ಮಿಕರು ಭಾಗವಹಿಸಿದ್ದರು.



























