
ಕೋಲಾರ,ಮೇ.೧೦- ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಕಾರ್ಯಕರ್ತರೇ ದೊಡ್ಡ ಶಕ್ತಿ, ಅವರ ಸಂಘಟನೆಯಿಂದಲೇ ಪಕ್ಷವು ಸದೃಢವಾಗಿದ್ದು ಅವರ ನೇತೃತ್ವ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಯುವ ಘಟಕದ ನಿಖಿಲ್ ಕುಮಾರೆ ಸೇರಿದಂತೆ ಇನ್ನಿತರೆ ರಾಜ್ಯ ಮಟ್ಟದ ನಾಯಕತ್ವದಲ್ಲಿ ಚುನಾವಣೆ ನಡೆಯಲಿದ್ದು ಈಗಿನಿಂದ ಪ್ರತಿಯೊಂದು ಗ್ರಾಮ ಮಟ್ಟದಲ್ಲಿ ಸಂಘಟನೆಗೆ ಒತ್ತು ನೀಡಬೇಕು ಎಂದು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ತಿಳಿಸಿದರು.
ತಾಲೂಕಿನ ವೇಮಗಲ್ ಹೋಬಳಿಯ ಸೀತಿ ಮತ್ತು ಅಮ್ಮನಲ್ಲೂರು ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಬೂತ್ ಗಳಲ್ಲಿ ಶನಿವಾರ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್.ಐ.ಆರ್ ಕುರಿತು ಜಾಗೃತಿ ಮತ್ತು ಪಕ್ಷದ ವತಿಯಿಂದ ಬೂತ್ ಮಟ್ಟದ ಏಜೆಂಟ್ ಗಳ ನೇಮಿಸುವ ಕುರಿತು ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು ದೇಶದಲ್ಲಿ ಎನ್‌ಡಿಎ ಮೈತ್ರಿಯ ಭಾಗವಾಗಿ ಜೆಡಿಎಸ್ ಪಕ್ಷವು ಇದ್ದು ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡೋದು ನಮ್ಮೆಲ್ಲರ ಗುರಿಯಾಗಿದ್ದು ಕಾರ್ಯಕರ್ತರು, ಸಿದ್ಧರಾಗಿರುವಂತೆ ಮನವಿ ಮಾಡಿದರು.
ಪ್ರತಿ ಬೂತ್ ಮಟ್ಟದಲ್ಲಿಯೂ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡಿ ಕಾರ್ಯಕರ್ತರು ಪ್ರತಿ ಹಂತದಲ್ಲಿಯೂ ಜೆಡಿಎಸ್ ಪಕ್ಷದ ಸಿದ್ಧಾಂತ ಹಾಗೂ ಜನರಿಗೆ ಕೊಟ್ಟಿರುವ ಕೊಡುಗೆಗಳ ಬಗ್ಗೆ ಅವರಿಗೆ ಮನದಟ್ಟು ಮಾಡಬೇಕು. ಮುಂಬರುವ ಚುನಾವಣೆಗಳಲ್ಲಿ ಪಕ್ಷ ಗೆಲುವು ಸಾಧಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ತಾಲ್ಲೂಕಿನಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯನ್ನು ಕಳೆದೆರಡೂವರೆ ವರ್ಷದಿಂದ ಸೂಕ್ಷ್ಮವಾಗಿ ಜನ ಗಮನಿಸಿದ್ದಾರೆ ನಮ್ಮ ಕ್ಷೇತ್ರದ ಜನರು ಇಟ್ಟಿದ್ದ ನಿರೀಕ್ಷೆ ಹುಸಿಯಾಗಿದೆ, ಅಧಿಕಾರ ಇಲ್ಲದೆ ಇದ್ದಾಗ ಹೋರಾಟ ಮಾಡುವುದು ಸುಲಭದ ಮಾತಲ್ಲ ಆದರೂ ನಮ್ಮ ಕಾರ್ಯಕರ್ತರ ಪರವಾಗಿ ಎಂದಿಗೂ ನಿಮ್ಮೊಂದಿಗೆ ನಾನಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಹಿರಿಯ ಮುಖಂಡ ವಕ್ಕಲೇರಿ ರಾಮು, ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ತಾಪಂ ಮಾಜಿ ಸದಸ್ಯರಾದ ಚನ್ನಸಂದ್ರ ಲೋಕೇಶ್, ಚಂಜಿಮಲೆ ಬೈರಪ್ಪ, ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ಸದಸ್ಯರಾದ ಲೋಕೇಶ್ ಮರಿಯಪ್ಪ, ಕುರುಗಲ್ ರಮೇಶ್, ಜೆಸಿಬಿ ರವಿ, ಪಕ್ಷದ ಎಸ್ಟಿ ಘಟಕದ ತಾಲೂಕು ಅಧ್ಯಕ್ಷ ಕುರುಗಲ್ ಗಿರೀಶ್, ವೇಮಗಲ್ ಸೊಸೈಟಿ ಉಪಾಧ್ಯಕ್ಷ ಹೊಳೇರಹಳ್ಳಿ ಅಶೋಕ್, ಸೀತಿ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಅನಿತಾ ಶ್ರೀನಿವಾಸ್ ಮುಖಂಡರಾದ ಅಮ್ಮನಲ್ಲೂರು ರಮೇಶ್, ಪಾಲಸಂದ್ರ ಲೇಔಟ್ ಸುರೇಶ್, ಎಂಐಸಿಟಿ ಮಂಜುನಾಥ್, ಸೀತಿ ಮುರಳಿ, ರವಿ, ಚೌಡಪ್ಪ ಸೀತಿ ಹೊಸೂರು ಮಂಜುನಾಥ, ಅಶೋಕ, ಮಠಪುರ ನಾರಾಯಣಸ್ವಾಮಿ, ಕಾರ್ತಿಕ್, ಮಾರ್ಜೇನಹಳ್ಳಿ ಚೌಡೇಗೌಡ, ಮುನೇಗೌಡ ಚಂಜಿಮಲೆ ದೇವರಾಜ್, ಹುಲ್ಲಂಕಲ್ ಚನ್ನಾರೆಡ್ಡಿ, ಮಂಜುನಾಥ್, ಎಲ್.ನಾಗರಾಜ್, ಶ್ರೀನಾಥ್, ರಾಮಾಂಜಿ, ವೆಂಕಟೇಶಪ್ಪ, ದಿನ್ನೂರು ನಾರಾಯಣಸ್ವಾಮಿ ತಿಪ್ಪೇನಹಳ್ಳಿ ಗೋಪಾಲ, ದೇವರಾಜ, ವೀರಾಪುರ ಮುನಿರಾಜ್, ಬೈರಂಡಹಳ್ಳಿ ಜಯರಾಮ, ಅಗ್ರಹಾರ ಸುಧಾಕರ್, ಮುಂತಾದವರು ಇದ್ದರು




























