ಸಾಯಿ ಪ್ರಿಯಾ ಸಕ್ಕರೆ ಕಾರ್ಖಾನೆಯಲ್ಲಿ ಮೇಲಿಂದ ಬಿದ್ದು ಕಾರ್ಮಿಕ ಸಾವು

ಜಮಖಂಡಿ:ಡಿ.16:ಸಾಯಿ ಪ್ರಿಯಾ ಸಕ್ಕರೆ ಕಾರ್ಖಾನೆಯಲ್ಲಿ ಫ್ಯಾಬ್ರಿಕೇಶನ್ ವರ್ಕ ಮಾಡುವ ಸಂಧರ್ಭದಲ್ಲಿ ಕಾರ್ಮಿಕ ನೊರ್ವ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾನೆ.

ತಾಲೂಕಿನ ಆಲಬಾಳ ಗ್ರಾಮದ ಸಾಯಿ ಪ್ರಿಯಾ ಸಕ್ಕರೆ ಕಾರ್ಖಾನೆಯಲ್ಲಿ ಈ ದುರಂತ ಸಂಭವಿಸಿದೆ

ಮೃತ ವ್ಯಕ್ತಿಯನ್ನ ಮಹಾರಾಷ್ಟ್ರ ರಾಜ್ಯದ ಲಾತೂರ್ ಜಿಲ್ಲೆಯ ಮುರೂಡ ಗ್ರಾಮದ 37 ವಯಸ್ಸಿನ ಅಪ್ಸರ ಬಸೀರ್ ಬಾಗವಾನ ಎಂದು ತಿಳಿದು ಬಂದಿದೆ

ಸ್ಥಳಕ್ಕೆ ಸಿಪಿಐ ಮಲ್ಲಪ್ಪ ಮಡ್ಡಿ ಹಾಗೂ ಗ್ರಾಮಿಣ ಠಾಣೆ ಪಿ.ಎಸೈ ಗಂಗಾಧರ ಪೂಜೆರಿ ಅವರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.