
ಬೀದರ:ಡಿ.21: ನಗರದ ಸವಿತಾ ಸಮಾಜ ಸಾಂಸ್ಕøತಿಕ ಭವನದಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆಯಿಂದ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು, ಬುದ್ದ ಬಸವ ಅಂಬೇಡ್ಕರ ಸಾಂಸ್ಕøತಿಕ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ರಾಜಗಿರಾ ಇವರ ಸಂಯುಕ್ತಾಶ್ರಯದಲ್ಲಿ ನಗಡೆದ ಸಾಂಸ್ಕøತಿಕ ಕಾರ್ಯಕ್ರಮವನ್ನು ಬಿ ಜೆ ಪಿ ಯುವ ಮುಖಂಡರಾದ ಪರಮೇಶ್ವರ ಪಾಟೀಲ್ ತಡಪಳ್ಳಿ ಉದ್ಘಾಟಿಸಿ, ಕನ್ನಡ ಭಾಷೆ ಸಾಹಿತ್ಯ ಸಂಸ್ಕøತಿ ತವರೂಮನೆ ಗ್ರಾಮೀಣಳು. ಕನ್ನಡ ಭಾಷೆ ಸಾಹಿತ್ಯ ಸಂಸ್ಕøತಿ ದೇಶ ಕಲೆ ಉಳಿಸಿ ಬೆಳಸುವ ಕೆಲಸ ಮಾಡುತ್ತಿವೆ. ಸರ್ಕಾರದ ಹಣ ಉಪಯೋಗಿಸಿ ಉತ್ತಮ ಕೆಲಸ ಮುಖ್ಯ ಅತಿಥಿಗಳಾಗಿ ದಿಲೀಪಕುಮಾರ ಭೋಸ್ಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿವೃತ್ತ ಕಂಟ್ರೋಲರ್ ಗ್ರಾಮಲೆಕ್ಕಾಧಿಕಾರಿ ಪ್ರೇಮಕುಮಾರ ದಿನೆ, ದಯಾನಂದ ನೌಲೆ ಕಂಟೆಪ್ಪ ಪೂಜಾರಿ ಜಾವಿದ ಮಿಯ್ಯಾ ಗ್ರಾಮ ಪಂಚಯಾತ ಮರಕುಂದ ಸದಸ್ಯರಾದ ಚನ್ನಪ್ಪ ಭಾಗವಹಸಿದ ಕಾರ್ಯಕ್ರಮದ ಅಧ್ಯಕ್ಷತೆ ಬುದ್ಧ ಬಸವ ಅಂಬೇಡ್ಕರ ಸಾಂಸ್ಕøತಿಕ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಸುಧಾಕರ ರಾಜಗೀರ ವಹಿಸಿದರು ಕಾರ್ಯಕ್ರಮದ ಸ್ವಾಗತ ಮತ್ತು ನೀರೂಪಣೆ ಸಾಹಿತಿ ಡಾ. ಸುಬ್ಬಣ್ಣ ಕರಕನಳ್ಳಿಮಾಡಿದರು, ರಾಜಕುಮಾರ ಕರುಣಾ ಸಾಗರ ನಾಡುಗೀತೆ ನಾಗಮ್ಮಾ ಮರಕಲ್ ಸಂಗಡಿಗರು ಮೋರಂ ಪದ್ಯ ಬಕ್ಕಪ್ಪ ದಂಡಿನ ತಂಡದವರು ಜಾನಪದಗೀತೆ, ದ್ರೌಪತಿಬಾಯಿ ಸಂಗಡಿಗರು ಲಕ್ಷ್ಮಿಬಾಯಿ ತೋರಣ ಸಂಗಡಿಗರ ಭಜನೆ ಪದಗಳು ಹಾಡಿದರು ರಮೇಶ ದೊಡ್ಡಿ ಶ್ರೀನಿವಾಸ ದಯಾಲ ಅಂಬೇಡ್ಕರ ಗೀತೆ ಹಾಡಿದರು ಚನ್ನಮ್ಮಾ ಲಾಧ ತಂಡದವರು ಡೊಳ್ಳು ಕುಣಿತ ರಮೇಶ ಬಾಬು ಕ್ರಾಂತಿ ಗೀತೆ ಶೇಷಪ್ಪ ಚಿಟ್ಟಾ ಹಲಗೆ ವಾದನ ಮಾರುತಿ ಮರಕಲ್ ಮೋರಂ ಬುಲಾಯಿ ಹಾಡುಗಳು ಹಾಡಿದರು. ರಾಜಕುಮಾರ ಗೋರನಾಳ ಸಂಗಡಿಗರು ವಚನ ಗಾಯನ ಮಾಡಿದರು. ಬಕ್ಕಪ್ಪ ದಂಡಿನ ಮಾತನಾಡಿ ಗ್ರಾಮೀಣ ಭಾಗದ ಸಾಂಸ್ಕøತಿಕ ಕಲಾವಿದರು ತಮ್ಮಗೆ ಕಷ್ಟ ಸಂಕಷ್ಟಗಳು ಇದ್ದರು ಎಲ್ಲವೂ ನುಂಗಿಕೊಂಡು ಸಾಂಸ್ಕøತಿಕ ಕಲೆಗಳಾದ ಜಾನಪದ ವಾದ್ಯಗಳು, ಜಾನಪದ ಹಾಡುಗಳು ಜಾನಪದ ಕಲಾ ಸಾಹಿತ್ಯ ಸಂಸ್ಕøತಿಯನ್ನು ಉಳಿಸಿಬೆಳೆಸುವ ಕೆಲಸ ಮಾಡುತ್ತಿದ್ದಾರೆ. ವಯಸ್ಸಾಗಿರುವ ಕಲಾವಿದರಿಗೆ ಮಾಹಾಶಾಸನ ಮನೆಗಳು ಮಕ್ಕಳ ಮದುವೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರದ ಯೋಜನೆಗಳು ನೀಡಬೇಕು ಅಂದಾಗ ನಿಜವಾದ ಸಾಂಸ್ಕøತಿಕ ಕಲಾವಿದರಿಗೆ ಸಹಾಯ ಮಾಡಿದಂತಾಗುತ್ತದೆ. ಮುಖ್ಯ ಅತಿಥಿಗಳಾಗಿ ಜಾನಪದ ಗಾಯಕ ಶೇಷರಾವ ಬೆಳಕುಣಿ ಮಾತನಾಡಿ ಗಡಿ ಭಾಗದಲ್ಲಿ ಕನ್ನಡ ಭಾಷೆ ಸಾಹಿತ್ಯ ಸಂಸ್ಕøತಿ ಪ್ರಚಾರ ಮಾಡುವ ಕಾರ್ಯ ಮಾಡಬೇಕ್ಕಾಗಿದೆ. ಅಂದಾಗ ಮಾತ್ರ ಗಡಿ ಭಾಗದಲ್ಲಿ ಕನ್ನಡ ಭಾಷೆ ಸಾಹಿತ್ಯ ಸಂಸ್ಕøತಿ ಉಳಿಯಲಿಕ್ಕೆ ಮತ್ತು ಇಂದಿನ ಮುಂದಿನ ಪಿಳಿಗೆ ಕಲಿಯಲಿಕ್ಕೆ ಸಾದ್ಯವಾಗುತ್ತದೆ.

























