ಶೋಷಿತರ ಅಭಿವೃದ್ಧಿಗೆ ಶ್ರಮಿಸಿ.ಧಮ್ಮಪಾಲ ಭಂತೇಜಿ

ಸಂಜೆ ವಾಣಿ ವಾರ್ತೆ,
ಜಮಖಂಡಿ;ಸೆ.೨೯:ಗ್ರಾಮೀಣಾಭಿವೃದ್ಧಿ ಸಂಸ್ಥೆ ಹೆಮ್ಮರವಾಗಿ ಬೆಳೆದು ದಲಿತರಮ ಶೋಷಿತರ, ಮಹಿಳೆಯರ, ದಮನಿತರ ಶ್ರಯೋಅಭಿವೃದ್ಧಿಗೆ ಶ್ರಮಿಸಲಿ ಎಂದು ಬಾಗಲಕೋಟೆ ನವನಗರದ ಪೂಜ್ಯ ಧಮ್ಮಪಾಲ ಭಂತೇಜಿ ಅವರು ತಿಳಿಸಿದರು. ಭಾನುವಾರ ಮೈಗೂರು ರಸ್ತೆಯಲ್ಲಿ ನೂತನ ಬೋಧಿಸತ್ವ ಗೌತಮ ಬುದ್ಧನಗರ, ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು. ಧರ್ಮದ ಚಿಂತನೆಯನ್ನು ಪಸರಿಸುವ ಕೆಲಸ ಮಾಡಲಿ, ಬಡವರು ದೀನ ದಲಿತರ ಸೇವೆ ಸಂಸ್ಥೆಯಿAದಾಗಲಿ ಎಂದು ಆಶೀರ್ವಚನ ನೀಡಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರು ಹಾಗೂ ನೂತನ ಸಂಸ್ಥೆಯ ಅಧ್ಯಕ್ಷ ಪರಶುರಾಮ ಕಾಂಬಳೆ ಸಂಸ್ಥೆಯ ದ್ಯೇಯೋದ್ದೇಶಗಳನ್ನು ತಿಳಿಸಿದರು. ಎಲ್ಲರೂ ಒಗ್ಗಟ್ಟಿನಿಂದ ಸಂಸ್ಥೆಯನ್ನು ಬೆಳೆಸಬೇಕು, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಸಂಸ್ಥೆಯಿAದ ನಡೆಯಬೇಕು ಸರ್ಕಾರದ ಸೌಲಭ್ಯಗಳನ್ನು ನಿಜವಾದ ಫಲಾನು ಭವಿಗಳಿಗೆ ತಲುಪಿಸುವ ಕೆಲಸ ಮಾಡೋಣ ಎಂದು ತಿಳಿಸಿದರು.

ನ್ಯಾಯವಾದಿ ಎಸ.ಪಿ.ದೊಡಮನಿ ಮಾತನಾಡಿ ಸಂಸ್ಥೆ ಯಿಂದ ಯುವ ಪೀಳಿಗೆಗೆ ಶಿಕ್ಷಣ ಮತ್ತು ಉದ್ಯೋಗ ದೃಷ್ಟಿಯಿಂದ ಅನುಕೂಲ ವಾಗಲೆಂದು ತಿಳಿಸಿದರು ಡಿಎಸ್‌ಎಸ್ ಜಿಲ್ಲಾ ಮುಖಂಡ ಎಚ್.ಎನ್ ನೀಲನಾಯಕ ಅವರು ಸಂತಸ ವ್ಯಕ್ತಪಡಿಸಿದರು.ಧಮ್ಮಪಾಲ ಬಂತೆಜೀಯವರಿಗೆ ಮತ್ತು ಸಂಸ್ಥೆಗೆ ಆರ್ಥಿಕ ಸಹಾಯ ಮಾಡಿದ ಉಪನ್ಯಾಸಕ ಈಶ್ವರ ಭಜಂತ್ರಿ ಹಾಗೂ ಕನ್ನೋಳ್ಳಿ ಗ್ರಾಮದ ನಿವೃತ ಶಿಕ್ಷಕ ಕೆ ಪಿ ಮೋಹಿತೆಅವರನ್ನು ಸನ್ಮಾನಿಸಲಾಯಿತು. ಹಾಗೂ ಕರ್ನಾಟಕರಾಜ್ಯದಲಿತ ಸಂಘರ್ಷ ಸಮಿತಿ ರಬಕವಿ ಬನಹಟ್ಟಿತಾಲೂಕಾ ಸಂಚಾಲಕರು ಮತ್ತು ಸಂಸ್ಥೆಯ ಕಾರ್ಯದರ್ಶಿಯಾದ ಬಸವರಾಜ ದೊಡಮನಿ ನಿರೂಪಣೆ ಮಾಡಿದರು. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರನ್ನೊಳಗೊಂಡು ಗ್ರಾಮೀಣ ಭಾಗದಯುವಕರು ಭಾಗವಹಿಸಿದ್ದರು.