
ಕಲಬುರಗಿ:ಮಾ.17: ನಗರದ ಕಲಾ ಮಂಡಳದಲ್ಲಿ ಕರ್ನಾಟಕ ಮಹಿಳಾ ಪರ ಜನಜಾಗೃತಿ ಸಮಿತಿ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಸಂಸ್ಥಾಪಕಿ ಹಾಗೂ ರಾಜ್ಯಾಧ್ಯಕ್ಷರಾದ ಶ್ರೀಮತಿ ಜಗದೇವಿ ಆರ್. ಹೆಗಡೆ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಸಾಧನೆಗೈದು ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಮಹಿಳೆಯರ ಸಬಲೀಕರಣವೇ ಸಮಗ್ರ ಸಮಾಜದ ಪ್ರಗತಿಯ ಆಧಾರವಾಗಿದ್ದು, ಇಂತಹ ಕಾರ್ಯಕ್ರಮಗಳು ಮಹಿಳೆಯರಿಗೆ ಮತ್ತಷ್ಟು ಪ್ರೇರಣೆ ನೀಡುತ್ತವೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಗ್ರಾಮೀಣ ಕೈಗಾರಿಕಾ ಕೇಂದ್ರದ ಉಪನಿರ್ದೇಶಕರಾದ ರೇಖಾ ಎನ್. ಮ್ಯಾಗೇರಿ, ಆದಿಜಾಂಬವ ಸಂಘದ ಅಧ್ಯಕ್ಷರಾದ ಹಣಮಂತ ಎಸ್. ತುಮಕೂರಕರ್, ಶೋಷಿತ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷರು ಹಾಗೂ ವಕೀಲರಾದ ಲಕ್ಕಪ್ಪ ಜವಳಿ, ಕರ್ನಾಟಕ ಸರಕಾರಿ ನಿವೃತ್ತ ನೌಕರರ ರಾಜ್ಯ ವೇದಿಕೆಯ ಕಾರ್ಯನಿರ್ವಹಣಾ ಸಮಿತಿ ಸದಸ್ಯ ಮಲ್ಲಿಕಾರ್ಜುನ ಚಟ್ನಳ್ಳಿ, ತಾ.ಪಂ. ಕಲಬುರಗಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಅಬ್ದುಲ್ ರಹೀಮ್ ಕೆರೂರ, ಶಿಕ್ಷಣ ತಜ್ಞರು ಡಾ. ಜಯಶ್ರೀ ರೆಡ್ಡಿ, ಸಂಘಟನಾ ಉಪಾಧ್ಯಕ್ಷೆ ಲತಾ ಚವ್ಹಾಣ, ಸಂಘಟನಾ ಕಾರ್ಯದರ್ಶಿ ಲಕ್ಷ್ಮೀ ಕವಳೆ ಹಾಗೂ ರಾಜ್ಯ ಖಜಾಂಚಿ ಶ್ರೀಮತಿ ರಾಣಿ ಎಸ್. ಹೂಗಾರ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಮಹಿಳಾ ಪರ ಜನಜಾಗೃತಿ ಸಮಿತಿಯ ಜಿಲ್ಲಾ ಅಧ್ಯಕ್ಷೆ ಅನುರಾಧಾ ಹೆಚ್. ಹೂಗಾರ ವಹಿಸಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸುಮಾ ಎಸ್. ಖವಾಲ್ದಾರ, ಅನಿತಾ ಚಿಂಚೋಳಿ, ಗುಂಡಮ್ಮ ಜನಿವಾರ, ಪದ್ಮಾ ಎನ್. ಮಾಲಿಪಾಟೀಲ, ಮಂಗಲಾ ಸಪ್ಪಗೋಳ, ಸಿದ್ದಣ್ಣ ಸಜ್ಜನ, ನರಸಮ್ಮ ಅವಂಟೆ, ಉಷಾ ಪಂಡೀತ, ಜಗನ್ನಾಥ ಕಟ್ಟಿಮನಿ, ವಿದ್ಯಾ ತೆನಹಾಳಿ, ರೇಣುಕಾ ಮಠಪತಿ, ನಿಂಗಣ್ಣ ಪೂಜಾರಿ, ಚಂದ್ರಕಲಾ ಹೂಗಾರ, ಮಹಾದೇವಪ್ಪ ಕವಳೆ, ಬಸವರಾಜ ಜವಳಿ, ಸಪ್ಪಾ ಭೂಪಾಲ ತೆಗನೂರ, ದೇವಿಂದ್ರಕುಮಾರ ಬಿ. ಪಾಟೀಲ ಹಾಗೂ ಸುಂದರ ಡಿ. ಸಾಗರ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕು. ಶಿಲ್ಪಾ ಆರ್. ಹೆಗಡೆ ಸ್ವಾಗತ ಗೀತೆ ಹಾಡಿದರು. ಹಣಮಂತ ಕೊಂಗಂಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಕು. ಸುಸನ್ನಾ ಆರ್. ಹೆಗಡೆ ವಂದನಾರ್ಪಣೆ ಸಲ್ಲಿಸಿದರು.




















