ಮಹಿಳೆಯರು ಉನ್ನತ ಶಿಕ್ಷಣ ಪಡೆಯಲು ಮುಂದಾಗಿ : ಜಿ.ಟಿ ಗಣಾಪೂರ

ಬೀದರ್ :ನ.25: ಮಹಿಳೆಯರು ಉನ್ನತ ಶಿಕ್ಷಣ ಪಡೆದು ಎಲ್ಲಾ ಕ್ಷೆ?ತ್ರಗಳಲ್ಲಿಸಾಧನೆ ಮಾಡಬೇಕು. ಶಿಕ್ಷಣದೊಂದಿಗೆ ಒಳ್ಳೆಯ ಸಂಸ್ಕøತಿ, ನಡತೆ, ಸಂಸ್ಕಾರಗಳನ್ನು ಕಲಿಯಬೇಕು ಎಂದು ಸಮಾಜ ಶಾಸ್ತ್ರದ ಮುಖ್ಯಸ್ಥ ಜಿ.ಟಿ ಗಣಪೂರ ಹೇಳಿದರು.

ಮನ್ನಳ್ಳಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಕೋಶದ ಅಡಿಯಲ್ಲಿ ಒಂದು ದಿನದ ಲಿಟರಸಿ ಫೆಸ್ಟ ಕಾರ್ಯಾಗಾರ ದಲ್ಲಿ ಮಾತನಾಡಿದ ಅವರು ಮಹಿಳೆಯರಲ್ಲಿ ಶೇ 8ರಿಂದ 10 ಮಂದಿ ಮಾತ್ರ ಉನ್ನತ ಶಿಕ್ಷಣದ ಅವಕಾಶ ಪಡೆಯುತ್ತಿದ್ದಾರೆ. ಬಡತನ, ನಿರ್ಲಕ್ಷ್ಯ ಮೊದಲಾದ ಕಾರಣಗಳು ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿವೆ ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿನಿಯೂ ತಮ್ಮ ಸಂವಹನ ಕೌಶಲ ಅಭಿವೃದ್ಧಿಪಡಿಸಿಕೊಳ್ಳಬೇಕು. ಹೆಚ್ಚು ಭಾಷೆಗಳನ್ನು ಕಲಿಯಬೇಕು, ಶಿಕ್ಷಣದ ನಂತರ ಉದ್ಯೋಗಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಇತಿಹಾಸ ವಿಭಾಗದ ಮುಖ್ಯಸ್ಥೆ ಭಾಗ್ಯವತಿ ಚಿಲಶೆಟ್ಟಿ ಅವರು ಮಾತನಾಡಿ ಐತಿಹಾಸಿಕ ಸ್ಮಾರಕಗಳು
ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ಪ್ರತೀಕವಾಗಿವೆ. ಐತಿಹಾಸಿಕ ಸ್ಮಾರಕಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಸಂರಕ್ಷಿಸುವ ಗುರುತರ ಜವಾಬ್ದಾರಿ ಯುವಪೀಳಿಗೆಯ ಮೇಲಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಡಾ.ಜಯಭಾರತ ಮಂಗೇಶ್ಕರ್, ಸಂದೀಪ ತಿವಾರಿ, ಸಂತೋಷ ಬಡಿಗೇರ, ನವರಂಗ ಮಾಣಿಕರಾವ, ಡಾ.ಜೈಶೀಲಾ ಮಾತನಾಡಿದರು. ಅಶ್ವಿನಿ, ರೇಣುಕಾ, ಮಮತಾ, ದಶವಂತ ಬಂಡೆ, ಸುನಿಲಕುಮಾರ,ಪೃಥ್ವಿರಾಜ ಹಾಲಪ್ಪಗೋಳ, ಡಾ.ಸುರೇಂದ್ರಸಿಂಗ, ಡಾ.ಶರಣಪ್ಪ ಮಲಗೊಂಡ, ಸವಿತಾ ಪಾಟೀಲ, ಮೋನಪ್ಪ ಪಾಂಚಾಳ, ಶಾಜೀಯ ಅಂಜುo, ಉಷಾರಾಣಿ, ಪಾಲಾಕ್ಷಿ, ಶಾಮಸುಂದರ, ಸುಜಾತ, ಅಮರಪಾಲಿ ಸಿಂಧೆ, ಇಸ್ಮಾಯಿಲ, ಫಾತಿಮಾ, ಜಿತೇಂದ್ರ, ಕಿರಣ್, ರಮೇಶ, ಮಕದುಮ್, ಆಯುಬ್, ಆನಂದ, ಸಂಜೀವಕುಮಾರ ಅಪ್ಪ, ಸೇರಿದಂತೆ ಅನೇಕರಿದ್ದರು.