Home ಜಿಲ್ಲೆ ಮಹಿಳೆ ಸಾಮಥ್ರ್ಯ ಹೆಚ್ಚಿಸಿಕೊಳ್ಳಬೇಕು: ಕಸ್ತೂರಿ ಪಟಪಳ್ಳಿ

ಮಹಿಳೆ ಸಾಮಥ್ರ್ಯ ಹೆಚ್ಚಿಸಿಕೊಳ್ಳಬೇಕು: ಕಸ್ತೂರಿ ಪಟಪಳ್ಳಿ

ಬೀದರ: ಮಾ.10:ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಕಷ್ಟಪಟ್ಟು ತಮ್ಮ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬೇಕು. ಎಂದು ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ( ರಿ) ಬೆಂಗಳೂರು ಜಿಲ್ಲಾ ಶಾಖೆ ಬೀದರ ವತಿಯಿಂದ ಜಿಲ್ಲಾ ಕಾರಾಗ್ರಹದಲ್ಲಿ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾ ಸಂಘದ ಉಪಾಧ್ಯಕ್ಷರಾದ ಸಾಹಿತಿಗಳಾದ ಕಸ್ತೂರಿ ಪಟ್ಟಪಳ್ಳಿ ರವರು ಮಹಿಳಾ ಕೈದಿಗಳನ್ನು ಉದ್ದೇಶಿಸಿ ಮಾತನಾಡಿದರು.

 ನಂತರ ತಾಲೂಕ ಸಂಘದ ಖಜಾಂಚಿಯಾದ ಶ್ರೀದೇವಿ ಸಿಂಧೆ ರವರು ಮಾತನಾಡಿ ತಾಯಿ ಇಲ್ಲದೆ ಜನ್ಮ ಇಲ್ಲ, ಮಹಿಳೆ ಇಲ್ಲದ ಮನೆ ಇಲ್ಲ, ಸ್ತ್ರೀ ಇಲ್ಲದ ಜಾಗವನ್ನು ಉಹಿಸಲು ಸಾಧ್ಯವಿಲ್ಲ. ಅವಳ ಪಾತ್ರಗಳನ್ನು ನಿಭಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಮಗಳಾಗಿ ಹುಟ್ಟಿ ಸಹೋದರಿಯಾಗಿ ಬೆಳೆದು ನಂತರ ಗಂಡನಿಗೆ ಹೆಂಡತಿಯಾಗಿ, ಗಂಡನ ಮನೆಯಲ್ಲಿ ಸೋಸೆಯಾಗಿ, ತಾಯಿಯಾಗಿ, ಅತ್ತೆಯಾಗಿ ಹಲವಾರು ಪಾತ್ರಗಳು ನಿಭಾಯಿಸುತ್ತಾಳೆ ಎಂದು ಹೇಳಿದರು. 

ನಂತರ ಜಿಲ್ಲಾ ಸಂಘದ ಕಾರ್ಯದರ್ಶಿಯಾದ ಹಣಮಂತ ಕಾರಾಮುಂಗೆ ರವರು ಮಾತನಾಡಿ ಮಹಿಳೆಯರ ತ್ಯಾಗ ಹಾಗೂ ಅವರ ಸೇವೆಯನ್ನು ಅಕ್ಷರಗಳಲ್ಲಿ ಬಣ್ಣಿಸಲು ಅಸಾಧ್ಯ. ಮಹಿಳೆಯರು ಮನಸ್ಸು ಸಾಗರದಷ್ಟೇ ವಿಶಾಲವಾಗಿದೆ. ಮಹಿಳೆ ಈ ಸೃಷ್ಟಿಯ ಸೃಷ್ಟಿಗೆ ಕಾರಣ, ಶಕ್ತಿ ದೇವತೆಯಾಗಿ ವಿಶ್ವದೆಲ್ಲೆಡೆ ನೆಲೆಸಿದ್ದಾಳೆ ಎಂದು ಹೇಳಿದರು.

ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾರಾಗ್ರಹದ ಅಧಿಕ್ಷಕರಾದ ದತ್ತಾತ್ರಿ ಮೇಧಾ ರವರು ಮಾತನಾಡಿ ನಾವು ಭೂಮಿಗೆ ಭೂತಾಯಿ ಎಂದು ಕರೆಯುತ್ತೇವೆ. ನೀರಿಗೆ ಗಂಗೆ ಎಂದು ಪೂಜಿಸುತ್ತೇವೆ, ಜಗತ್ತಿನಲ್ಲಿ ಹೆಣ್ಣಿನಲ್ಲಿ ದೇವತೆಯನ್ನು ಕಾಣುವ ದೇಶ ಅದು ಭಾರತ ದೇಶ ಎಂದು ಹೇಳಿದರು. ಕಾರ್ಯಕ್ರಮದ ಪ್ರಸ್ತಾವಿಕ ಹಾಗೂ ನಿರೂಪಣೆಯನ್ನು ಜಿಲ್ಲಾ ಸಂಘದ ಅಧ್ಯಕ್ಷರಾದ ಶ್ರೀ ಸುರೇಶ್ ಟಾಳೇ ರವರು ಮಾಡಿದರು.