
ಇಂಡಿ : ನ.19:ಇಂಡಿ ತಾಲೂಕಿನ ಜನ ವೇದಿಕೆ ಮತ್ತು ಕರ್ನಾಟಕ ಜನ ಆರೋಗ್ಯ ಸಂಘಟನೆ ಮಹಿಳೆಯರು ವಿಜಯಪುರದಲ್ಲಿ ಪಿಪಿಪಿ ಮಾದರಿಯ ಖಾಸಗಿ ಕಾಲೇಜು ಬೇಡ ಸಂಪೂರ್ಣ ಸರಕಾರಿ ಸೌಮ್ಯದ ಕಾಲೇಜು ಪ್ರಾರಂಭಿಸಬೇಕು ಎಂದು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪುರಸಭೆ ಎದುರು ಮತ್ತು ಆಡಳಿತ ಸೌಧ ಎದುರು ಮತ್ತು ಇಂದಿರಾ ಕ್ಯಾಂಟಿನ ಎದುರು ವಿವಿಧ ಬಗೆಯ ರಂಗೋಲಿ ಹಾಕಿ ಪ್ರತಿಭಟನೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದರು.
ಪ್ರತಿವೃತ್ತದಲ್ಲೂ ಕರ ಪತ್ರ ಹಂಚಿ ಜನರೊಂದಿಗೆ ಸಂವಾದ ನಡೆಸಿ ಖಾಸಗೀಕರಣದ ಅಪಾಯ ವಿವರಿಸಿದರು. ಜೊತೆಗೆ ಸಹಿ ಸಂಗ್ರಹಣೆ ಮಾಡಿದರು.
ರೇಣುಕಾ ನಾಟಿಕಾರ, ಸರುಬಾಯಿ ದಶವಂತ, ಅಕ್ಷತಾ ಬಬಲಾದ, ಸುನಂದಾ ನಾಟಿಕಾರ ಮಾತನಾಡಿ ಕಳೆದ 60 ದಿನಗಳಿಂದ ಜಿಲ್ಲೆಯಾದಂತ ಹೋರಾಟ ನಡೆದರೂ ಸರಕಾರ ಈ ಕುರಿತು ಪ್ರತಿಕ್ರಿಯೆ ನೀಡುತ್ತಿಲ್ಲ. ಕಾರಣ ಪಿಪಿಪಿ ರದ್ದು ಮಾಡದಿದ್ದರೆ ಉಗ್ರ ಹೋರಾಟ ಮಾಡಬೇಕಾಹುತ್ತದೆ ಎಂಬ ಎಚ್ಚರಿಕೆ ನೀಡಿದರು.
ಮಹಾದೇವಿ ಚನ್ನವೀರಪ್ಪಗೋಳ, ಸುನಂದಾ ತದ್ದೇವಾಡಿ, ರಾಧಾ ನಿಂಬಾಳಕರ, ಯಲ್ಲವ್ವ ಮಾದರ, ಸಿದ್ದಮ್ಮ ಗುಣಕಿ, ಸುನಂದಾ ಬಬಲಾದ,ಬೀನಾ ಜೇವೂರ, ಶೈಲಾ ರೂಗಿ, ಶೋಭಾ ತೆನೆಹಳ್ಳಿ,ಸುನಂದಾ ಕಂಬಾರ, ಗಂಗುಬಾಯಿ ಕಾಂಬಳೆ, ನಾಗಮ್ಮ ಬಾರಾಣೆ, ಪಾರ್ವತಿ ಕಾಂಬಳೆ,ತಾಯವ್ವ ದಶವಂತ, ಶ್ರೀದೇವಿ ಕಂಬಾರ ಸೇರಿದಂತೆ ನೂರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.
ಕಂದಾಯ ಉಪವಿಬಾಗಾಧಿಕಾರಿ ಅನುರಾಧಾ ವಸ್ತ್ರದ ಅವರಿಗೆ ಮನವಿ ಸಲ್ಲಿಸಿದರು.






















