ವಾಡಿ :ಅ.೧೪:ಪಟ್ಟಣ ಸಮೀಪದ ಇಂಗಳಗಿ ಗ್ರಾಮದ ವಾರ್ಡ್ ಸಂಖ್ಯೆ ೩ ರಲ್ಲಿ ಸಮುದಾಯ ಮಹಿಳಾ ಶೌಚಾಲಯ ಇಲ್ಲದೆ. ಮಹಿಳೆಯರು ಶೌಚಕ್ಕಾಗಿ ಪರದಾಡುವಂತಾಗಿದೆ. ಆದ್ದರಿಂದ ಹೈಟೆಕ್ ಸಮುದಾಯ ಶೌಚಾಲಯ ನಿರ್ಮಾಣ ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಸಮಿತಿ ಸ್ಥಳೀಯ ಗ್ರಾಮ ಪಂಚಾಯಿತಿಗೆ ಒತ್ತಾಯಿಸಿದೆ.
ಗ್ರಾಮದ ವಾರ್ಡ.-೩ ರ ಪೂಜಾರಿ ಸಮಾಜ ಏರಿಯಾದಲ್ಲಿರುವ ಬಯಲು ಸಮುದಾಯ ಮಹಿಳಾ ಶೌಚಾಲಯದ ಸುತ್ತ ಮನೆಗಳು ನಿರ್ಮಾಣವಾಗಿವೆ. ಆದರೆ ಶೌಚಾಲಯದ ಕಾಂಪೌAಡ್ ಎತ್ತರಕ್ಕೆ ಇರದ ಕಾರಣ ಶೌಚಕ್ಕೆ ಹೊದ ಮಹಿಳೆಯರು ಮುಜಗರ ಪಡುವಂತಾಗಿದೆ. ಈಗಾಗಲೇ ಶೌಚಾಲಯದ ಪಕ್ಕದಲ್ಲಿರುವ ನಿವಾಸಿಗಳ ಜೊತೆ ಮಹಿಳೆಯರ ಜಗಳವಾಗಿವೆ. ಯಾವುದೇ ಕಾರಣಕ್ಕೆ ಮನೆ ಮಹಡಿ ಮೇಲೆ ಬರದಂತೆ ಎಚ್ಚರಿಕೆ ನೀಡಲಾಗಿದೆ. ಇದರಿಂದ ದಿನನಿತ್ಯ ಜಗಳವಾಗುತ್ತಿದೆ ಎಂದು ದೇವಪ್ಪ ಗುಳೆದ ಆರೋಪಿಸಿದ್ದಾರೆ.
ಬಯಲು ಸಮುದಾಯ ಶೌಚಾಲಯದ ಕಾಂಪೌAಡ್ ಕಟ್ಟಡ ಇನ್ನೂ ಎತ್ತರಕ್ಕೆ ನಿರ್ಮಾಣ ಮಾಡಿ, ಹೊರಗಿನಿಂದ ಜನರು ಕಾಣದಂತೆ ಶೌಚಾಲಯದ ಮೇಲೆ ತಾತ್ಕಾಲಿಕವಾಗಿ ಟಿನ್ ಶೆಡ್ ಹಾಕಬೇಕು. ಎಂದು ಮಹಿಳೆಯರು ಒತ್ತಾಯಿಸಿದ್ದಾರೆ.
ದಂಡೋರ ಸಮಾಜ ಏರಿಯಾದಲ್ಲಿರುವ ಮಹಿಳಾ ಸಮುದಾಯ ಶೌಚಾಲಯ ಕಾಂಪೌAಡ್ ಕಟ್ಟಡ ಬಿರುಕು ಬಿಟ್ಟು ಬಿಳುವ ಸ್ಥಿತಿಯಲ್ಲಿದೆ. ದುರ್ಘಟನೆ ಸಂಭವಿಸುವ ಮೊದಲೇ ಕಾಂಪೌAಡ್ ಕಟ್ಟಡ ನಿರ್ಮಾಣ ಮಾಡಬೇಕು. ಹಾಗೆ ಶೌಚಾಲಯಕ್ಕೆ ಹೋಗುವ ರಸ್ತೆ ತುಂಬಾ ಹದಗೆಟ್ಟಿದೆ. ಮಹಿಳೆಯರು ಈಗಾಗಲೇ ಶೌಚಕ್ಕೆ ಹೋಗುವ ದಾರಿಯಲ್ಲಿ ಆಯಾ ತಪ್ಪಿ ಬಿದ್ದಿದ್ದಾರೆ.
ಇದರಿಂದ ಕೂಡಲೇ ರಸ್ತೆ ನಿರ್ಮಾಣ ಮತ್ತು ಶೌಚಾಲಯದ ಕಾಂಪೌAಡ್ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಜಿಲ್ಲಾ ಪಂಚಾಯತಿ ಎದುರು ಹೋರಾಟ ಮಾಡಬೇಕಾಗುತ್ತದೆ. ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಡಾ.ಸಾಯಬಣ್ಣಾ ಗುಡುಬಾ ಎಚ್ಚರಿಕೆ ನೀಡಿದ್ದಾರೆ.
ವಾರ್ಡ-೩ ರಲ್ಲಿ ಅತಿ ಹೆಚ್ಚು ಮಹಿಳಾ ಜನ ಸಂಖ್ಯೆ ಇರುವುದರಿಂದ ವಾರ್ಡನಲ್ಲಿ ಹೈಟೆಕ್ ಸಮುದಾಯ ಮಹಿಳಾ ಶೌಚಾಲಯದ ಅಗತ್ಯ ಇದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಗ್ರಾಮ ಪಂಚಾಯತಿಯಿAದ ಪತ್ರ ಬರೆಯಬೇಕು. ಎಂದು ಕರ್ನಾಟಕ ಪ್ರಾಂತ ರೈತ ಸಂಘ ಚಿತ್ತಾಪುರ ತಾಲ್ಲೂಕು ಸಮಿತಿ ಪದಾಧಿಕಾರಿಗಳು ಪಂಚಾಯತಿ ಅಭಿವೃದ್ಧಿ ಅಧಿಕಾರಿ ರುದ್ರುಸಾಹು ಅಳ್ಳೊಳ್ಳಿ ಅವರಿಗೆ ಮನವಿ ಪತ್ರ ನೀಡಿದರು.
ಪಂಚಾಯತಿ ಸದಸ್ಯರಾದ ಕಾಶೀನಾಥ್ ಚನ್ನಗುಂಡ, ನಬಿ ಪಠಾಣ ಮತ್ತು ಶಿಲ್ಪಾ ತೆಳಗೆರಿ, ಅಯ್ಯಾಪ್ಪ ತೆಳಗೆರಿ, ಮಮತಾ ನಾಟೀಕಾರ್, ಶಾಂತಮ್ಮ ಮುತ್ತಿಗಿ, ಸುನೀತಾ ಮುತ್ತಿಗಿ, ಮಹಾದೇವಿ ಇದ್ದರು.























