ಕ್ಯಾನ್ಸರ್ ಪೀಡಿತರಲ್ಲಿ ಮಹಿಳೆಯರೇ ಅಧಿಕ :ಡಾ.ಸಂತೋಷ ಶೆಟ್ಟರ

ಜಮಖಂಡಿ:ಜ.12: ನಮ್ಮ ದೇಶದಲ್ಲಿ ಮಹಿಳೆಯರಿಗೆ ಹೆಚ್ವಿನ ಸಂಖ್ಯೆಯಲ್ಲಿ ಗರ್ಭಕಂಠದ ಕ್ಯಾನ್ಸರ್ ಪತ್ತೆಯಾಗುತ್ತಿರುವದರಿಂದ ಈ ತಿಂಗಳ ಪೂರ್ತಿ ಕ್ಯಾನ್ಸರ್ ಜಾಗೃತಿ ದಿನ ಆಚರಣೆ ಮಾಡಲಾಗುತ್ತಿದೆ ಎಂದು ಡಾ.ಸಂತೋಷ ಶೆಟ್ಟರ ಹೇಳಿದರು.

ನಗರದ ಗಿರಿಮಲ್ಲೇಶ್ವರ ಮಹಾರಾಜರ ಮಠದ ಆವರನದಲ್ಲಿ ವಿಶ್ವ ಕ್ಯಾನ್ಸರ್ ಜಾಗೃತಿ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಕ್ಯಾನ್ಸರ್ ಕಾಯಿಲೆಯನ್ನು ಮೊದಲು ಹಂತದಲ್ಲಿಯೇ ಗುರುತಿಸಿದರೆ ಅದನ್ನು ಸಂಪೂರ್ಣವಾಗಿ ಗುಣ ಪಡೆಸಬಹುದು ಅವಿವಾಹಿತರಿಗೆ 3 ಲಸಿಕೆ ಮಾಡಿಸುವದು ಹಾಗೂ ವಿವಾಹಿತ ಮಹಿಳೆಯರಿಗೆ ಪ್ರತಿ 3 ವರ್ಷಕೊಮ್ಮೆ ಪ್ಯಾಪ್ ಸ್ಮಿಯರ್ ಸ್ಕ್ರೀನಿಂಗ್ ಮಾಡುವದರಿಂದ
ಗರ್ಭಕಂಠದ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಬಹುದು ಎಂದರು

ಕಾಯಿಲೆ ಲಕ್ಷಣಗಳು

ಆಗಾಗ್ಗೆ ಮೂತ್ರ ವಿಸರ್ಜನೆ,ಅಸಹಜ ರಕ್ತಸ್ರಾವ,ಬಿಳಿ ವಿಸರ್ಜನೆ,ಋತುಚಕ್ರದ ಸಮಯದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ರಕ್ತಸ್ರಾವ,ಎದೆಯುರಿ ಮತ್ತು ಸಡಿಲ ಚಲನೆ,ಹಸಿವಿನ ಕೊರತೆ ಅಥವಾ ತುಂಬಾ ಕಡಿಮೆ ತಿನ್ನುವುದು,ತುಂಬಾ ದಣಿದಿದೆ,ಹೊಟ್ಟೆಯ ಕೆಳಭಾಗದಲ್ಲಿ ನೋವು ಅಥವಾ ಊತ,ನಿರಂತರ ಬೆನ್ನು ನೋವು
ಆಗಾಗ್ಗೆ ಸೌಮ್ಯ ಜ್ವರ ಮತ್ತು ಆಲಸ್ಯ,ಲೈಂಗಿಕ ಸಮಯದಲ್ಲಿ ನೋವು
ಲೈಂಗಿಕತೆಯ ನಂತರ ರಕ್ತಸ್ರಾವ ಪದೇ ಪದೇ ನೋವುಯುಕ್ತ ಮೂತ್ರವಿಸರ್ಜನೆ ಆಗುವಿಕೆ, ಮೊದಲಾದುವು ಗರ್ಭಕಂಠದ ಕ್ಯಾನ್ಸರ್‍ನ ಕೆಲವು ಲಕ್ಷಣಗಳು ಕಂಡು ಬರುತ್ತವೆ. ಆರಂಭಿಕ ಹಂತದಲ್ಲಿ ಗರ್ಭಕಂಠದ ಕ್ಯಾನ್ಸರ್‍ನ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಿದರೆ ಕ್ಯಾನ್ಸರ್ ಕೋಶಗಳು ಶರೀರದ ಇತರ ಅಂಗಗಳಿಗೆ ವ್ಯಾಪಿಸುವ ಸಾಧ್ಯತೆಗಳಿರುತ್ತವೆ. ಒಮ್ಮೆ ಕ್ಯಾನ್ಸರ್ ಗರ್ಭಕಂಠದಿಂದ ಇತರ ಅಂಗಗಳಿಗೆ ಹರಡಿದರೆ ಚಿಕಿತ್ಸೆ ಬಹಳ ಕಷ್ಟ ಎಂದರು