ತೋಟದ ಮನೆಯಲ್ಲಿ ಮಹಿಳೆ ಶವ ಪತ್ತೆ: ಕೊಲೆ ಶಂಕೆ

ಜಮಖಂಡಿ:ಜ.16: ತಾಲ್ಲೂಕಿನ ಹಿರೇಪಡಸಲಗಿ ಗ್ರಾಮದ ಕುರಣ ವಸತಿ ತೋಟದ ಮನೆಯೊಂದರಲ್ಲಿ ಅನುಮಾನಾಸ್ಪದ
ರೀತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ ಇದೊಂದು ಕೊಲೆ ಎಂದು ಶಂಕೆ ವ್ಯಕ್ತವಾಗಿದೆ.

ಯಮನವ್ವ ತಂದೆ ಸಿದ್ದನಗೌಡ ಪಾಟೀಲ (45) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ.

ಮಹಿಳೆ ಮೃತದೇಹದ ಮೈಮೇಲೆ ಗಾಯದ ಗುರುತುಗಳು ಕಂಡುಬಂದಿವೆ ಮತ್ತು ಅಲ್ಲೆಲ್ಲಿ ರಕ್ತದ ಕಲೆಗಳು ಇದ್ದು ಕತ್ತು ಹಿಸುಕಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಘಟನಾ ಸ್ಥಳಕ್ಕೆ ಬಾಗಲಕೋಟೆ ಜಿಲ್ಲಾ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್. ಡಿ.ವಾಯ್.ಎಸ್ ಪಿ. ಸೈಯದ್ ರೋಶನ್ ಜಮೀರ.ಸಿಪಿಐ. ಮಲ್ಲಪ್ಪ ಮಡ್ಡಿ. ಸಾವಳಗಿ ಪಿಎಸ್ ಐ. ಅಪ್ಪಣ್ಣ ಐಗಳಿ,ಅಪರಾಧ ವಿಭಾಗದ ಪಿ.ಎಸ್.ಐ.ವಾಲೆಕಾರ ಅವರ ನೇತೃತ್ವದ ಪೆÇೀಲೀಸ್ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ಮಾಡಿ ತನಿಖೆ ಕೈಗೊಂಡಿದ್ದಾರೆ

ಸಾವಳಗಿ ಪೆÇೀಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆಯ ನಡೆದಿದ್ದು. ಪೆÇೀಲೀಸರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸಿದ್ದಾರೆ